ಅಕ್ರಮ ಮರಳು ದಂಧೆಗೆ ಕಡಿವಾಣ ಯಾವಾಗ? ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದ ಪಕ್ಕ ಇರುವ ಸಿದ್ದಲ ಹಳ್ಳದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಂ ನಿರ್ಮಾಣ ಮಾಡುತ್ತಿದ್ದಾರೆ. ಗುಡೆಕೋಟೆ ಹೋಬಳಿ ಕೇಂದ್ರದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕರ್ತವ್ಯಕ್ಕೆ ಬರುತ್ತಾರೆ, ಚೆಕ್ ಡ್ಯಾಂ ನಿರ್ಮಾಣ ಮಾಡುವ ಗುತ್ತಿಗೆದಾರರು ಅರಣ್ಯ ಇಲಾಖೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಸಾಕಷ್ಟು ಮರಳನ್ನು ಅಕ್ರಮವಾಗಿ ತೆಗೆದಿರುತ್ತಾರೆ ಇನ್ನು ಕಂದಾಯ ಇಲಾಖೆಯವರು ಕೂಡ ಇದು ಸಂಬಂಧಪಟ್ಟಿರುತ್ತದೆ. ಆದರೂ ಕಂದಾಯ ಇಲಾಖೆ ಅಧಿಕಾರಿಗಳು ಹಿತ್ತ ಕಡೆ ತಿರುಗಿಯೂ ನೋಡುತ್ತಿಲ್ಲ, ಇಲ್ಲಿ ಸಾಕಷ್ಟು ಮರಳನ್ನು ಗುತ್ತಿಗೆದಾರರು ಪರವಾನಿಗೆ ಪಡೆಯದೆ ಮರಳನ್ನು ತೆಗೆಯುತ್ತಾರೆ ಆದರೆ ರೈತರು ತಮ್ಮ ಮನೆ ನಿರ್ಮಾಣಕ್ಕೆ ಮರಳನ್ನು ತೆಗೆದುಕೊಂಡು ಬಂದರೆ ಇವರ ಗಾಡಿಗಳನ್ನು ಹಿಡಿಯುತ್ತಾರೆ. ಆದರೆ ಈಗ ಈ ಅಧಿಕಾರಿಗಳಿಗೆ ಕಣ್ಣು ಕಾಣಿಸುತ್ತಿಲ್ಲವೇ ಎಂದು ಈ ಭಾಗದ ರೈತರ ಪ್ರಶ್ನೆ ಆಗಿರುತ್ತದೆ ಇನ್ನು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಕೂಡ ಈ ಸ್ಥಳಕ್ಕೆ ಭೇಟಿ ಕೊಟ್ಟಿರುತ್ತಾರೆ ಆದರೂ ಸಮೇತ ಈ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಇಲ್ಲಿ ಮರಳು ತೆಗೆದಿರುವ ದೃಶ್ಯಗಳೆ ಸಾಕ್ಷಿ ಇನ್ನೂ ಬಳ್ಳಾರಿಯ ಗುತ್ತಿಗೆದಾರರು ಅರಣ್ಯ ಮತ್ತು ಕಂದಾಯ ಇಲಾಖೆಯವರು ಸಂಬಂಧಪಟ್ಟಿರುವ ಹಳ್ಳದಲ್ಲಿ ಪರವಾನಿಗೆ ಇಲ್ಲದೆ ಮರಳನ್ನು ತೆಗೆದಿರುತ್ತಾರೆ . ಹಾಗೂ ಇನ್ನು ಗುತ್ತಿಗೆದಾರ ಉಜ್ಜಿನಪ್ಪನವರು ಸರ್ಕಾರದ ಪರವಾನಿಗೆ ಇಲ್ಲದೆ ಮರಳನ್ನು ಅಕ್ರಮವಾಗಿ ತೆಗೆದಿರುತ್ತಾರೆ ಹಾಗೆ ಅರಣ್ಯ ಇಲಾಖೆಯ ಪಕ್ಕದಲ್ಲಿ ಜೆಸಿಬಿ ಯಿಂದ ಸುಮಾರು 40 ರಿಂದ 50 ಲೋಡ್ ಮರಳನ್ನು ತೋಡಿರುತ್ತಾರೆ. ಅದಕ್ಕಾಗಿ ಈ ಗುತ್ತಿಗೆದಾರರ ವಿರುದ್ಧ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗುಡೆಕೋಟೆ ರೈತರೂ ಹಾಗೂ ಗ್ರಾಮಸ್ಥರ ಮನವಿ ಆಗಿರುತ್ತದೆ..

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
