ಜೆ ಮ್ಯಾಸನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ…!!!

ಜೆ ಮ್ಯಾಸನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಜುಮ್ಮೊಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೆ ಮ್ಯಾಸರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಮಾಡಲಾಯಿತು ಈ ಸಭೆಯಲ್ಲಿ ಅಕ್ಕ ಪಕ್ಕದ ಹಳ್ಳಿಯ ಶಾಲೆಯ ಶಿಕ್ಷಕರುಗಳಿಂದ ಮಕ್ಕಳಿಗೆ ಸಾಕಷ್ಟು ಹಕ್ಕುಗಳಿವೆ ಮತ್ತು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಬಾಲ್ಯ ವಿವಾಹ ಮಾಡುವುದನ್ನು ತಪ್ಪಿಸಬೇಕು ಹಾಗೂ ಮಕ್ಕಳಿಗೆ ಉನ್ನತ ಮಟ್ಟದಲ್ಲಿ ಶಿಕ್ಷಣವನ್ನು ನೀಡಬೇಕು ಮುಖ್ಯವಾಗಿ ಈಗಿನ ದಿನಮಾನಗಳಲ್ಲಿ ಮಕ್ಕಳ ಕಳ್ಳರು ಮಕ್ಕಳನ್ನು ಚಾಕಲೇಟ್ ಹಾಗೂ ಇನ್ನಿತರೆ ತಿಂಡಿ ತಿನಿಸುಗಳನ್ನು ಕೊಟ್ಟು ಎತ್ತಿಕೊಂಡು ಹೋಗುತ್ತಾರೆ.

ಆದ್ದರಿಂದ ನಮ್ಮ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಅವರ ಮನೆ ತಲುಪುವವರೆಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ನಮ್ಮ ಹಕ್ಕಿನಲ್ಲಿರುತ್ತದೆ ಆದ್ದರಿಂದ ನಾವು ಜವಾಬ್ದಾರಿತವಾಗಿ ಕೆಲಸ ಮಾಡುತ್ತಾ ಹೋಗಬೇಕು ಮುಖ್ಯವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡಬೇಕು ಎಂದು ಈ ಒಂದು ಗ್ರಾಮ ಸಭೆಯಲ್ಲಿ ಚರ್ಚೆ ಮಾಡಿದರು ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ರವರು ಶಾಲೆಯ ಮಕ್ಕಳಿಗೆ ಸಾಕಷ್ಟು ಹಕ್ಕುಗಳಿಗೆ ಅದರಂತೆ ಮುಖ್ಯ ಗುರುಗಳು ಶಿಕ್ಷಕರು ಅಡಿಗೆ ಸಿಬ್ಬಂದಿಗಳು ಜವಾಬ್ದಾರಿತವಾಗಿ ಊಟ ಹಾಗೂ ಶಾಲೆಯ ವಿದ್ಯಾರ್ಥಿಗಳನ್ನು ಗಮನವಿಟ್ಟು ನೋಡಬೇಕು ಅದರಂತೆ ವಿದ್ಯಾರ್ಥಿಗಳು ಸಹ ಗುರುಗಳಿಗೆ ಯಾವುದೇ ರೀತಿ ಏಕವಚನ ಮಾತನಾಡದೆ ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿದರೆ ಮುಂದಿನ ದಿನದಲ್ಲಿ ನೀವು ನಿಮ್ಮ ವೃತ್ತಿಯನ್ನು ನಿರ್ಮಿಸಿಕೊಳ್ಳಬೇಕು ಹಾಗೂ ಗುರುಗಳು ಹೇಳಿದರೆ ಇದ್ಯಾ ವಿನಯ ಪುರುಷಣ ಕಲಿಯಬೇಕು ಹಾಗೂ ಸರ್ಕಾರದಿಂದ ಉಚಿತವಾಗಿ ಪಠ್ಯಪುಸ್ತಕ ಇನ್ನಿತರೆ ವ್ಯವಸ್ಥಿತವಾಗಿ ಅದನ್ನು ವ್ಯರ್ಥ ಮಾಡಿಕೊಳ್ಳದೆ ಉನ್ನತ ಮಠಕ್ಕೆ ಹೆಜ್ಜೆ ಇಡಬೇಕು ಮುಖ್ಯವಾಗಿ ವಿದ್ಯಾರ್ಥಿಗಳ ತಂದೆ ತಾಯಿ ಗಮನಕ್ಕೆ ತಿಳಿಸುವುದೇನೆಂದರೆ ಹೆಣ್ಣು ಮಗುವಿಗೆ 18 ವರ್ಷ ಮೇಲ್ಪಟ್ಟು ಹಾಗೂ ಗಂಡು ಮಗುವಿಗೆ 21 ವರ್ಷ ಸರ್ಕಾರ ನಿಗದಿಪಡಿಸಿದೆ ಅದರಂತೆ ಎಲ್ಲಾ ತಂದೆ ತಾಯಿಯಂದಿರು ಬಾಲ್ಯ ವಿವಾಹ ಮಾಡಬಾರದು ಎಂದು ಮಾತನಾಡಿದರು ಇದೇ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಮಹಾಂತೇಶಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ನಾಗರಾಜ್. ನೋಡಲ್ ಅಧಿಕಾರಿಯಾದ ಜಗದೀಶ್ ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಸರ್ವ ಸದಸ್ಯರುಗಳು ಎರಡು ಶಾಲೆಯ ಮುಖ್ಯ ಗುರುಗಳು ಎಲ್ಲಾ ಶಿಕ್ಷಕರು ಉಪ ಶಿಕ್ಷಕರು ಎರಡು ಶಾಲೆಯ ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಪಂಚಾಯಿತಿ ಸಿಬ್ಬಂದಿಗಳು ವಿದ್ಯಾರ್ಥಿಗಳ ತಂದೆ-ತಾಯಿಗಳು ಈ ಒಂದು ಗ್ರಾಮ ಸಭೆಯಲ್ಲಿ ಇದ್ದರು .

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend