ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷ ಮುರಳಿ ರಾಜ್ ಬೇಟಿ…!!!

ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷ ಮುರಳಿ ರಾಜ್ ಬೇಟಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕನಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀ ಮುರಳಿ ರಾಜ್ ಕೆ ರವರು ನಿಮ್ಮ ಪಂಚಾಯಿತಿಯಲ್ಲಿ ಯಾವುದೇ ಸಮಸ್ಯೆ ಇರಲಿ ಹಾಗೂ ಸದಸ್ಯರುಗಳ ಕುಂದು ಕೊರತೆ ಇರಲಿ ನಾನು ನಮ್ಮ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಗಮನಕ್ಕೆ ಇಡುತ್ತೇನೆ ಎಂದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ. ನೀಲಮ್ಮ ಬೊಮ್ಮಯ್ಯ ರವರು ಸದಸ್ಯರುಗಳು ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ತಮ್ಮ ತಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕೆಲಸ ಮಾಡಲು ನಾವು ಮುಂದಿದ್ದೇವೆ ಆದರೆ ನಮ್ಮ ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಪಂಚಾಯಿತಿಗಳ ಸದಸ್ಯರಿಗಿನ ನಮ್ಮ ಹೊಸಹಳ್ಳಿ ಪಂಚಾಯಿತಿಯಲ್ಲಿ 30 ಜನ ಸದಸ್ಯರುಗಳಿದ್ದು ಕತ್ತೆಗೂ ಕುದುರೆಗೂ ಒಂದೇ ಹೋಲಿಕೆಯಂತೆ ಎಲ್ಲಾ ಪಂಚಾಯಿತಿಗೆ ಒಂದೇ ಸಮನಾದ ರೀತಿ ಅನುದಾನ ಬರುತ್ತದೆ ಆದರೆ ಅದು ಯಾವ ಅಭಿವೃದ್ಧಿ ಕೆಲಸಕ್ಕೂ ಸಾಕಾಗುವುದಿಲ್ಲ ನಮ್ಮ ಸದಸ್ಯರುಗಳು ಈಗಾಗಲೇ ಸಾಕಷ್ಟು ಸ್ವಂತ ಹಣವನ್ನು ಖರ್ಚು ಮಾಡಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇವೆ.

ನೀವು ನಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದು ನಮಗೆ ತುಂಬಾ ಸಂತೋಷವಾಗಿದೆ ಹಾಗೂ ನಮ್ಮ ಪಂಚಾಯಿತಿಯಲ್ಲಿರುವ ಎಲ್ಲಾ ಸಮಸ್ಯೆಯನ್ನು ಸಹ ನಿಮ್ಮ ಮುಂದೆ ಮನಬಿಚ್ಚಿ ಮಾತಾಡಿದ್ದೇವೆ ನೀವಾದರೂ ನಮ್ಮ ಗ್ರಾಮ ಪಂಚಾಯಿತಿಗೆ ಜಾಸ್ತಿ ಅನುದಾನ ಬರುವಂತೆ ನಿರ್ಮಿಸಿ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರ ಮುಂದೆ ಅಳಲು ತೋಡಿದರು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಮುರಳಿ ರಾಜ್ ಕೆ ರವರು ಅಧ್ಯಕ್ಷರು ಮಾತನಾಡಿರುವ ಪ್ರತಿಯೊಂದು ವಿಷಯ ನನ್ನ ಮನದಲ್ಲಿದೆ ನಾನು ನಮ್ಮ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಮುಂದೆ ಚರ್ಚಿಸಿ ಇದಕ್ಕೊಂದು ಪರಿಹಾರ ಸೂಚಿಸುತ್ತೇನೆ ಹಾಗೂ ದಿನಾಂಕ.12:13:2022 ರಂದು ನಡೆಯಲಿರುವ ಬೆಂಗಳೂರು ಚಾಲೋ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ *ಶ್ರೀ ಯೂತ್ ಸತೀಶ್* ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ *ಸಣ್ಣಕಿ ಲಕ್ಷ್ಮಣ್* ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಒಂದು ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ವಿವಿಧ ಬೇಡಿಕೆಗೆ ಸರ್ಕಾರಕ್ಕೆ ಮನವಿ ಸಲ್ಲಿಸೋಣ ಈ ಒಂದು ಬೆಂಗಳೂರು ಚಾಲೋ ಕಾರ್ಯಕ್ರಮಕ್ಕೆ ನಮ್ಮ ಕೂಡ್ಲಿಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಎಲ್ಲರೂ ಭಾಗಿಯಾಗಿ ಈ ಒಂದು ಕಾರ್ಯಕ್ರಮವನ್ನು ಸಕ್ರಿಯವಾಗಿ ಯಶಸ್ವಿಗಳಿಸೋಣ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ನೀಲಮ್ಮ ಬೊಮ್ಮಯ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀ ಮುರಳಿ ರಾಜ್ ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಶ್ರೀಮತಿ ಬಸಮ್ಮ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಸರ್ವ ಸದಸ್ಯರುಗಳು ಪಂಚಾಯಿತಿ ಸಿಬ್ಬಂದಿಗಳು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend