ಕನ್ನಡ ನುಡಿ ಸಂಭ್ರಮ, ಹರಿದು ಬಂದ ಜನಸಾಗರ.
ನಾಡಕವಿ ಕುವೆಂಪು ಯಾರು ಸ್ವತ್ತಲ್ಲ,ಕನ್ನಡಿಗರ ಆಸ್ತಿ- ಪ್ರವೀಣ್‌ಶೆಟ್ಟಿ.
ಸಿಂಧನೂರು :ನ. 22.ನಾಡಕವಿ ಕುವೆಂಪು ಅವರು ಯಾರು ಸ್ವತ್ತಲ್ಲ, ಬದಲಾಗಿ ಅವರು ಆರು ಕೋಟಿ ಕನ್ನಡಿಗರ ಆಸ್ತಿ,ಅವರು ಒಂದು ಸಂಘಟನೆಗೆ ಸೀಮಿತವಾದವರಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ ಶೆಟ್ಟಿ ಹೇಳಿದರು.
ನಗರದ ಬಸ್ ನಿಲ್ದಾಣದ ಎದುರಿಗೆ ಅಮರದೀಪ ಬಟ್ಟೆ ಅಂಗಡಿ ಪಕ್ಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲೂಕಾ ಘಟಕ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನುಡಿ ಸಂಭ್ರಮ, ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಕನ್ನಡ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವೂ ಸಂವಿಧಾನ ಬದ್ಧವಾಗಿ ಸಂಘವನ್ನು ನೋಂದಣಿ ಮಾಡಿಸಿದ್ದೇವೆ.ನಾವೂ ಯಾರಿಗೂ ಎದುರುವ ಪ್ರಶ್ನೆಯಿಲ್ಲ. ಕನ್ನಡ ಭಾಷೆಗೆ ದಕ್ಕೆ ಬಂದಾಗ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯೊಂದಿಗೆ ತಾವುಗಳು ಎಲ್ಲರೂ ಪಾಲ್ಗೊಂಡು ಸಹಕಾರ ನೀಡಬೇಕು.ನಾವೆಲ್ಲ ಭಾರತಾಂಬೆಯ ಮಕ್ಕಳು,ಕನ್ನಡಿಗರು ನೀರು ಕೇಳಿದರೆ ಮಜ್ಜಿಗೆ ಕೊಡುವ ಹೃದಯ ಶ್ರೀಮಂತಿಕೆ ಉಳ್ಳವರು. ಪುನೀತ್ ರಾಜಕುಮಾರ ಅವರು ಹಾಕಿ ಕೊಟ್ಟ ಮಾರ್ಗದರ್ಶನ ನಾವೆಲ್ಲಾ ಅಳವಡಿಸಿಕೊಳ್ಳಬೇಕು. ಹರಕಲು ಸೀರೆಯುಟ್ಟರು ತಾಯಿ ತಾಯಿಯೇ, ಜೀನ್ಸ್ ಪ್ಯಾಂಟ್ ಹಾಕಿದವರನ್ನು ತಾಯಿ ಅನ್ನುವುದಕ್ಕೆ ಆಗುತ್ತಾ.ನಮ್ಮ ಹೋರಾಟದ ಫಲವಾಗಿ ರೈಲ್ವೇ ಇಲಾಖೆಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದು,ರೈತರಪರ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಮಹಾರಾಷ್ಟ್ರದ ಎಮ್ ಇ ಎಸ್ ಸಂಘಟನೆ ಪದೇ ಪದೇ ಗಡಿ ವಿಚಾರವಾಗಿ ನಮ್ಮನ್ನು ಕೆಣುಕುತ್ತಿದೆ. ಕನ್ನಡಿಗರಿಗೆ ಬೆಳಗಾವಿಗೆ ಬನ್ನಿ ಎಂದು ತಾಕತ್ತಿನ ಸವಾಲೆಸಿದಿದ್ದ ವಿಜೇಯೆಂದ್ರ ಪಾಟೀಲ ಮೊರೆ ಮುಖಕ್ಕೆ ಮಸಿ ಬಳಿದಿದ್ದು ನಾವೇ,ಕನ್ನಡಭಾಷೆಗಾಗಿ ನಮ್ಮ ಸಂಘಟನೆಯ ಬೂಟಿನ ಏಟು ತಿಂದು ಜೈಲೂ ಅನುಭವಿಸಿದ್ದೇವೆ ಎಂದರು.
ಸ್ವಾತಂತ್ರ್ಯ ಬಂದ ನಂತರದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿ 65 ವರ್ಷಗಳಾದರೂ ಇಂದಿಗೂ ನಾಡಿನ ನೆಲ, ಜಲ, ಗಡಿ ಭಾಷಾ ವಿವಾದಗಳು ಇಂದಿಗೂ ಜೀವಂತವಾಗಿವೆ.ಆದರೂ ಕನ್ನ
ಡಿಗರು ಎಲ್ಲಾ ಭಾಷೆಗಳ,ಧರ್ಮಗಳ ಜನರಿಗೆ ನಮ್ಮ ರಾಜ್ಯದಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ.ಇದು ಕನ್ನಡಿಗರ ಹೃದಯ ವೈಶಾಲ್ಯತೆ ಗುಣ.ಇಂಗ್ಲೀಷ ಕಲಿಸುವ ಜೊತೆಗೆ ಮಾತೃ ಭಾಷೆಯನ್ನು ಕಲಿಸಬೇಕು,ಅಂದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ನಾಡು ನುಡಿಯ ರಕ್ಷಣೆಗಾಗಿ
ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿಯವರು ಹೋರಾಟಗಳನ್ನು ಮಾಡುತ್ತಾ, ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಪ್ರತಿಯೊಬ್ಬರು ಕನ್ನಡವನ್ನು ಉಳಿಸಿಕೊಂಡು ಹೋಗಬೇಕು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂರಕ್ಷಣೆ ಹಾಗೂ ರಫ್ತು ನಿಗಮ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಜ್ಯೋತಿ ಬೆಳಗಿಸಿ ರಾಜ್ಯದಲ್ಲಿ ನೆಲ ಜಲ ಭಾಷೆ ಸಂಸ್ಕೃತಿಗೆ ಧಕ್ಕೆ ಬಂದಾಗ ತಕ್ಷಣ ಹೋರಾಟ ಮಾಡುವುದು ಪ್ರವೀಣ್ ಶೆಟ್ಟಿ ಬಣ.ಕನ್ನಡಪರ ಸಂಘಟನೆಗಳು ನಾಡಿನ ಜನತೆಯಲ್ಲಿ ಪ್ರೀತಿ ವಿಶ್ವಾಸವನ್ನು ಮೂಡಿಸಿ ರಾಜ್ಯದ ನೆಲ ಜಲ ಭಾಷೆ ಸಂಸ್ಕೃತಿ ಉಳಿವಿಗಾಗಿ ಧ್ವನಿ ಎತ್ತಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿಯೇ ಕನ್ನಡಿಗರನ್ನು ಪೂಜಿಸಿ, ಬೆಳೆಸುವ ತಾಲೂಕು ಸಿಂಧನೂರು,ಈ ವೇದಿಕೆಯಲ್ಲಿ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಕೆ.ಕರಿಯಪ್ಪ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ತಾಲೂಕು ಅಧ್ಯಕ್ಷ ಬಸವರಾಜ್ ನಾಡಗೌಡ, ಶಿವನಗೌಡ ಗೋರೆಬಾಳ, ತಹಸೀಲ್ದಾರ ಅರುಣ್ ಹೆಚ್ ದೇಸಾಯಿ ಕನ್ನಡ ನೆಲ,ಜಲ,ಭಾಷೆ,ಸಂಸ್ಕೃತಿ, ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.
ದಿವ್ಯ ಸಾನಿದ್ಯ ವಹಿಸಿದ್ದ ಪರಮ ಪೂಜ್ಯ ಡಾ. ಸಿದ್ದರಾಮ ಶರಣರು ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್ ರವರು ಆರ್ಶಿವಚನ ನೀಡಿದರು.

ನಗರಸಭೆ ಆವರಣದಿಂದ ಪ್ರಮುಖ ವೃತ್ತಗಳಲ್ಲಿ ವಿವಿಧ ಕಲಾ ತಂಡಗಳ ಮೂಲಕ ತಾಯಿ ಭುವನೇಶ್ವರಿ ಭಾವಚಿತ್ರದ ಬೃಹತ್ ಮೆರವಣಿಗೆಗೆ ಕರವೇ ಜಿಲ್ಲಾಧ್ಯಕ್ಷ ವೀರೇಶ ಹೀರಾ ಚಾಲನೆ ನೀಡಿದರು.ಮಹಾತ್ಮಗಾಂಧಿ ವೃತ್ತದಲ್ಲಿ ಕರವೇ ಉತ್ತರ ಕರ್ನಾಟಕದ ಅಧ್ಯಕ್ಷರಾದ ಶರಣು.ಬಿ. ಗದ್ದುಗೆ ಧ್ವಜಾರೋಹಣ ನೆರವೇರಿಸಿದರು.
ಸೋಮನಗೌಡ ಬಾದರ್ಲಿ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಚಾಲನೆ ನೀಡಿದರು,
ವಿಶೇಷ ಆಹ್ವಾನಿತರಾಗಿ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ,ಅಭಿಷೇಕ ನಾಡಗೌಡ ಜೆಡಿಎಸ್ ಯುವ ಮುಖಂಡರು ಭಾಗವಹಿಸಿದ್ದರು.ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು.
ಅಮರಸ್ವರ ಸಂಗಮ ಕಲಾ ತಂಡದ ನಾಡಿನ ಕಲಾವಿದರಿಂದ ಕನ್ನಡ -ಸಾಂಸ್ಕೃತಿಕ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ವೀರೇಶ ಭಾವಿಮನಿ, ಮಂಜುನಾಥ ಇಟಗಿ, ಅಶೋಕ ಮುರಾರಿ, ಅಂಜನೇಯ ಭಂಡಾರಿ , ವೆಂಕಟೇಶ್, ನಾಗರಾಜ ಬೊಮ್ಮನಾಳ, ದಿನೇಶ್ ಶೆಟ್ಟಿ, ಪರಶುರಾಮ, ಎಂ.ಡಿ. ಪಾರುಕ್, ಲಿಂಗರಾಜ, ರಾಜಾಹುಸೇನ್, ಶಿವರಾಜ ಸೇರಿದಂತೆ ತಾಲೂಕಿನ ಕನ್ನಡ ಪ್ರೇಮಿಗಳು ಸಾಹಿತಿಗಳು ರೈತರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
