ಕಾನಮಡುಗು ದಾಸೋಹ ಮಠಕ್ಕೆ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಭೇಟಿ – ಸ್ವಾಮೀಜಿಯಿಂದ ಸನ್ಮಾನ
ತಾಲೂಕಿನ ಕಾನಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಸ್ವಾಮಿ ದಾಸೋಹಮಠಕ್ಕೆ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ ಮಂಗಳವಾರ ಭೇಟಿ ನೀಡಿ ಶ್ರೀ ಕ್ಷೇತ್ರನಾಥನ ದರ್ಶನ ಪಡೆದರು.
ನಂತರ, ಮಾಜಿ ಶಾಸಕ ರವಿಕಾಂತ ಪಾಟೀಲ ರವರು ಮಾತನಾಡಿ, ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಇರುವಂಥ ಕಾನಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠಕ್ಕೆ ಮೂರು ಶತಮಾನಗಳ ಇತಿಹಾಸವಿರುವ ಸಂಗತಿ ಕೇಳಿ ಸಂತೋಷವಾಯಿತು. ಶ್ರೀಮಠದಿಂದ ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹವನ್ನು ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ರವಿಕಾಂತ ಪಾಟೀಲ ಅವರನ್ನು ದಾಸೋಹ ಮಠದ ವತಿಯಿಂದ ಧರ್ಮಾಧಿಕಾರಿಗಳಾದ ದಾ.ಮ ಐಮಡಿ ಶರಣಾರ್ಯರು ಸೇರಿ ಇತರರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ನೀರಗಂಟಿ ಶರಣಪ್ಪ, ಶಿಕ್ಷಕ ಬಿ.ಜಿ.ಪಾಟೀಲ್, ಶಿವಣ್ಣ, ಯುವಕರಾದ ಬಸವರಾಜ, ವಿಕ್ರಮ್ ಸಿಂಗ್, ಬಸವನಗೌಡ, ಅರುಣಾಚಾರಿ, ಚನ್ನವೀರಸ್ವಾಮಿ ಇತರರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
