;

20ವರ್ಷಗಳ ನಂತರ ಪದವಿ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಲನಕ್ಕೆ ಸಾಕ್ಷಿ ಆದ ಸ್ನೇಹಿತರು…!!!

20ವರ್ಷಗಳ ನಂತರ ಪದವಿ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಲನಕ್ಕೆ ಸಾಕ್ಷಿ ಆದ ಸ್ನೇಹಿತರು……..

ಹರಪನಹಳ್ಳಿ :- ಎ.ಎಸ್.ಐ ರಮೇಶ್ ಕುಂಟಾಳ್ ಮಾತನಾಡಿ, 20 ವರ್ಷಗಳ ನಂತರ ತಮ್ಮೊಂದಿಗೆ ಕಲಿತ ಆತ್ಮಿಯ ಸ್ನೇಹಿತರನ್ನು ಒಂದೆಡೆ ಸೇರಿಸಿ, ವಿದ್ಯಾರ್ಥಿ ಜೀವನದ ಸವಿನೆನೆಪುಗಳನ್ನು ಹಂಚಿಕೊಳ್ಳಲು ಹಳೆಯ ವಿದ್ಯಾರ್ಥಿಗಳೆಲ್ಲರೂ ಒಗ್ಗೂಡಿ ಸ್ನೇಹಕೂಟದಲ್ಲಿ ಭಾಗವಹಿಸುವ ಮೂಲಕ ಗಟ್ಟಿ ಗೆಳೆತನಕ್ಕೆ ಸಾಕ್ಷಿಯಾದರು.

ಮುಖ್ಯಪೇದೆ ಟಿ.ನಿಜಲಿಂಗಪ್ಪ ಮಾತನಾಡಿ, ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸುಮಾರು 20 ವರ್ಷಗಳ ನಂತರ ಕೂಡಿರುವ ನಮ್ಮ ಜೀವನದ ಉದ್ದಕ್ಕೂ ಯಾವಾಗಲೂ ಅಜರಾಮರವಾಗಿ ಉಳಿಯಲಿ ಹಾಗೂ ಯಾರೇ ಕಷ್ಟದಲ್ಲಿದ್ದಾಗ ಪ್ರತಿಯೊಬ್ಬರು ಸೇರಿ ಅವರಿಗೆ ನಮ್ಮ ಗುಂಪಿನಿಂದ ಸಹಾಯ ಮಾಡೋಣ ಎಂದರು.

ಲಿಂಗೇಶ್ ಕೆ.ಎಮ್.ಎಮ್. ಮಾತನಾಡಿ, ಜೀವನದಲ್ಲಿ ಸುಖಕ್ಕಿಂತ ಕಷ್ಟದಲ್ಲಿದ್ದವರಿಗೆ ಸ್ಪೂರ್ತಿ ನೀಡಿ ಸಹಾಯ ಮಾಡುವುದೇ ನಿಜವಾದ ಸ್ನೇಹ ಸಮ್ಮಿಲನ ಈ ಸ್ನೇಹ ಸಂಬಂಧ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ಶಾಸ್ವತವಾಗಿ ನಮ್ಮೇಲ್ಲರಲ್ಲಿ ಉಳಿಯಲಿ ಇಂತಹ ಸ್ನೇಹಿತರನ್ನು ಎಂದಿಗೂ ನನ್ನ ಕೊನೆಯ ಉಸಿರಿರೊವರೆಗೆ ಮರೆಯಾಲಾರೇ ಎಂದರು.

ಈ ಸ್ನೇಹ ಸಮ್ಮಿಲನಕ್ಕೆ ಅಗಮಿಸಿದ ನನಗೆ ತುಂಭ ಸಂತೋಷವೆನಿಸುತ್ತದೆ.ಇಂತಹ ಸ್ನೇಹಿತರು ನನಗೆ ಸಿಕ್ಕಿರುವುದು ಯಾವ ಜನ್ಮದ ಪುಣ್ಯನೋ ಗೊತ್ತಿಲ್ಲ. ಇಂತಹ ಸ್ನೇಹಿತರನ್ನ ಪಡೆದಿರುವುದು ನನ್ನ ಪುಣ್ಯ. ಅಕ್ಕಮಹಾದೇವಿ.ಕೆ. ಈ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಸ್ನೇಹಿತ ಹಾಗೂ ಸ್ನೇಹಿತೆಯರಿಗೆ ಕುಟುಂಬದವರಿಗೆ ಅಭಿನಂದನೆಗಳನ್ನು ತಿಳಿಸಿ ಎಲ್ಲಾ ಸ್ನೇಹಿತರು ಒಂದೆಡೆಗೆ ಸೇರುವಂತ ಕೆಲಸವನ್ನು ಲಿಂಗೇಶ್, ನಾಗೇಂದ್ರಪ್ಪ, ಶಿವುಕುಮಾರ್ ಅವರ ಪರಿ ಶ್ರಮದಿಂದ ಈ ಕಾರ್ಯಕ್ರಮ ಮಾಡಲು ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ. ವೈ.ಬಸಮ್ಮ.ಶಿವಣ್ಣ ಟೀಮ್ ನಿನ್ನೆ ಸಮಾರಂಭ ಇಷ್ಟು ಸಕ್ಸಸ್ ಆಗುತ್ತೆ ಅಂತ ಗೊತ್ತಿರ್ಲಿಲ್ಲ ಇದು ಬರೇ ಸಕ್ಸಸ್ ಅಲ್ಲ ಗ್ರಾಂಡ್ ಸಕ್ಸಸ್ ಅಂತ ಹೇಳ್ಬೇಕು.

ಎಲ್ಲರ ರೆಸ್ಪೋನ್ಸ್ ತುಂಬಾ ಪಾಸಿಟಿವ್ ಆಗಿ ಇತ್ತು, ನಿಜವಾಗಲೂ ಊಹೆ ಮಾಡಿರ್ಲಿಲ್ಲ. ಕಾಲೇಜ್ ಡೇಸ್ ಅಲ್ಲಿ ಕೆಲವರನ್ನ ಮಾತ್ರ ಕ್ಲೋಸ್ ಆಗಿ ಮಾತಾಡಿಸುತ್ತಿದ್ದೀವಿ ಆದ್ರೆ ನಿನ್ನೆ ಎಲ್ಲರೂ ಮುಂಚೆ ಇಂದನು ಕ್ಲೋಸ್ ಆಗಿದ್ವಿ ಅನ್ನೋ ಮನಸ್ಸು ಇತ್ತು ಎಲ್ಲರ ಫ್ಯಾಮಿಲಿ ನೋಡಿ ಎಲ್ಲರಿಗೂ ತುಂಬಾ ಖುಷಿ ಆಯ್ತು. ಅವರೆಲ್ಲರೂ ತುಂಬಾ ಎಂಜಾಯ್ ಮಾಡಿದರು.ಶೋಭ ಅಳವಂಡಿ
ಈ ಸಂರ್ಭದಲ್ಲಿ ರಮೇಶ್ ಕುಂಟಾಳ್, ಟಿ.ಶಿವುಕುಮಾರ್, ಎ.ನಾಗೇಂದ್ರಪ್ಪ, ಕೆ.ಎಂ.ಎಂ. ಲಿಂಗೇಶ್, ಟಿ.ನಿಜಲಿಂಗಪ್ಪ, ಶಿವುಮೂರ್ತಿ, ಉಮೇಶ್, ಶರತ್ ಉತ್ತಂಗಿ, ಅಂಬರೇಶ್, ಬಸಮ್ಮ, ಅಕ್ಕಮಹಾದೇವಿ, ಶೋಭ ಅಳವಂಡಿ, ವಿಜಯಲಕ್ಷ್ಮಿ , ಶಂಕರಮ್ಮ, ಮಂಜುಳಾ, ಗಾಯತ್ರಿ, ವೀರೇಂದ್ರ, ಬಿ.ರಾಜಪ್ಪ, ಮೇಲಗಿರಿ ಆನಂದ್ ಪಂಪಾಪತಿ, ಹೊನ್ನಪ್ಪ, ಅಜ್ಜಯ್ಯ, ದಿಳ್ಳಾö್ಯಪ್ಪ, ನಾಗರಾಜ್ ಶೆಟ್ಟಿ, ಶಿವುಕುಮಾರ್ ಮತ್ತೂರು, ಮಂಜಪ್ಪ.ಎಮ್.ಷಣ್ಮುಖ, ಡಿ.ಪ್ರಕಾಶ್, ಕೆ.ಕೊಟ್ರೇಶ್, ಸುಭಾನ್, ಸಿದ್ದೇಶ್, ನಾಗರಾಜ್.ಸಿ, ಬಾಗಳಿ ನಾಗರಾಜ್, ಗೋವಿಂದ, ಶಿವುಕುಮಾರ್ ಹೊಸಕೇರೆ, ತೆಲಿಗಿ ದಿಳ್ಳಾಪ್ಪ, ಮಂಜಾನಾಯ್ಕ್, ಪಿ.ಜಗದೀಶ್ ಸೇರಿದಂತೆ ಆನೇಕರು ಹಾಜರಿದ್ದರು.ಹೊರವಲಯದಲ್ಲಿರುವ ಮಯೂರಿ ಫಾರ್ಮ ಹೌಸ್ ನಲ್ಲಿ ನಡೆದ ಪದವಿ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಲನಕ್ಕೆ ಆಗಮಿಸಿದ ಸ್ನೇಹಿತರು.ಸೈನಿಕ ಶಿವುಕುಮಾರ್ ಮತ್ತೂರು ಅವರಿಗೆ ಸನ್ಮಾನಿಸಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;