;

ಮೀನುಗಾರಿಕೆ ಸಲಕರಣೆ ಕಿಟ್ ಹಾಗೂ ಸೌಲಭ್ಯಗಳ ವಿತರಣೆ…!!!

ಮೀನುಗಾರಿಕೆ ಸಲಕರಣೆ ಕಿಟ್ ಹಾಗೂ ಸೌಲಭ್ಯಗಳ ವಿತರಣೆ.
ಕೊಪ್ಪಳ, ನವೆಂಬರ್  : ಕೊಪ್ಪಳ ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರಿಕೆ ಸಲಕರಣೆ ಕಿಟ್ ಹಾಗೂ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರದಂದು  ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
2022-23ನೇ ಸಾಲಿನ ಮೀನುಗಾರಿಕೆ ಇಲಾಖೆಯ ಜಿಲ್ಲಾ ಮತ್ತು ರಾಜ್ಯ ವಲಯದ ವಿವಿಧ ಯೋಜನೆಗಳಡಿ ಗಂಗಾವತಿ, ಕುಷ್ಟಗಿ ಹಾಗೂ ಕೊಪ್ಪಳ ತಾಲ್ಲೂಕುಗಳ ಮೀನುಗಾರರ ಫಲಾನುಭವಿಗಳಿಗೆ ಒಟ್ಟು 29 ಮೀನುಗಾರಿಕೆ ಸಲಕರಣೆ ಕಿಟ್ ಹಾಗೂ ವಾಹನ ಖರೀದಿಗೆ ಸಹಾಯಧನ ಯೋಜನೆಯಡಿ 03 ದ್ವಿಚಕ್ರ ವಾಹನ ಮತ್ತು ತಲಾ ಒಂದು ತ್ರಿಚಕ್ರ ಹಾಗೂ ನಾಲ್ಕುಚಕ್ರ ವಾಹನ ಖರೀದಿಗೆ ಸಹಾಯಧನ ಒದಗಿಸಲು ಜಿಲ್ಲೆಗೆ ಗುರಿ ನಿಗದಿಯಾಗಿದ್ದು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ ಅವರು ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ರಮೇಶ್ ಯರಗಲ್, ಗಂಗಾವತಿ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಆನಂದ್, ಕೊಪ್ಪಳ ಮೀನುಗಾರಿಕೆ ಸಹಾಯಕ ನಿರ್ದೇಶಕಾರ ರಜನೀಶ್ ದೇಸಾಯಿ ಸೇರಿದಂತೆ ಇಲಾಖಾ ಸಿಬ್ಬಂದಿಗಳು ಹಾಗೂ ಮೀನುಗಾರ ಫಲಾನುಭವಿಗಳು ಉಪಸ್ಥಿತರಿದ್ದರು..

ವರದಿ. ಸಂಗೀತ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;