;

ಹಿರಕುಂಬಳಗುಂಟೆ ಗ್ರಾಮದ ಚಲವಾದಿ ಕಾಲೋನಿಯಲ್ಲಿ ಒನಕೆ ಓಬವ್ವ ಜನ್ಮದಿನ ಆಚರಣೆ…!!!

ಹಿರಕುಂಬಳಗುಂಟೆ ಗ್ರಾಮದ ಚಲವಾದಿ ಕಾಲೋನಿಯಲ್ಲಿ ಒನಕೆ ಓಬವ್ವ ಜನ್ಮದಿನ ಆಚರಣೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳಗುಂಟೆ ಗ್ರಾಮದ ಛಲವಾದಿ ಕಾಲೋನಿಯಲ್ಲಿ ಚಲವಾದಿ ಸಮುದಾಯದ ವತಿಯಿಂದ ವೀರ ವನೀತೆ ಓಬವ್ವ ಜಯಂತಿಯನ್ನು ವಿಜೃಂಭಣೆಯಿಂದ ಮಹಿಳೆಯರು ಹಾಗೂ ಊರಿನ ಮುಖಂಡರುಗಳಿಂದ ಅವರನ್ನು ಸ್ಮರಿಸಿ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮನೋಜ್ ಕುಮಾರ್ ಸಿ ಎ ರವರು ಒನಕೆ ಓಬವ್ವ ರವರು ಅಂದಿನ ದಿನಮಾನಗಳಲ್ಲಿ ವೀರ ಯೋಧರಂತೆ ಮೆರೆದು ನಮ್ಮ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದವರಾಗಿ ಚಿತ್ರದುರ್ಗದಲ್ಲಿ ಅತಿ ದೊಡ್ಡ ಹೆಸರುಗಳಿಸಿದ್ದಾರೆ ನಮ್ಮ ಸಮುದಾಯದವರಾಗಿದ್ದು ಅತ್ತುನ್ನತ ವಿಚಾರವಾಗಿದೆ ಮತ್ತು ಚಿತ್ರದುರ್ಗ ಕೋಟೆಯ ರಾಣಿ ಎಂದು ಕರೆದರೂ ಸಹ ತಪ್ಪಾಗದು ಮತ್ತು ಚಿತ್ರದುರ್ಗ ಕೋಟೆಗೆ ಅಲ್ಲಿನ ವಿಶೇಷ ಕಲ್ಲಿನ ಚಿತ್ರ ಕಲೆಯನ್ನು ನೋಡಲು ಜನಸಾಗರ ಹರಿದು ಬರುತ್ತದೆ .

ಮತ್ತು ಈ ಜನ್ಮದಿನದಂದು ಅವರನ್ನು ನಾವು ಸ್ಮರಿಸೋಣ ಎಂದು ಅಲ್ಲಿನ ಗ್ರಾಮಸ್ಥರಿಗೆ ಮತ್ತು ಜನರಿಗೆ ಅರಿವು ಮೂಡಿಸಿದರು ಈ ಒಂದು ಜಯಂತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸದಸ್ಯರುಗಳು ಮುಖ್ಯವಾಗಿ ಚಲವಾದಿ ಸಮುದಾಯದ ಮಹಿಳೆಯರು ಪುರುಷರು ಅಲ್ಲಿನ ಜನರು ವಿಶೇಷವಾಗಿ ಜನ್ಮದಿನವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಹಿರೇಕುಂಬಳಗುಂಟೆ ಯ ಛಲವಾದಿ ಕಾಲೊನಿಯಲ್ಲಿ ಛಲವಾದಿ ಸಮುದಾಯದ ವತಿಯಿಂದ ವೀರ ಒನಿತೆ ಓಬವ್ವ ಜಯಂತಿ ಆಚರಣೆ ಮಾಡಲಾಯಿತು ಓಬವ್ವನ ಜನ್ಮ ದಿನದಂದು ಮಾತೆಯ ಶೌರ್ಯ ಪರಕ್ರಮವನ್ನು ಸ್ಮರಿಸೊಣ ಎನ್ನುತ್ತ ಈ ಕಾರ್ಯಕ್ರಮಕ್ಕೆ ಛಲವಾದಿ ಸಮೂದಾಯದ ಮುಖಂಡರು ಊರಿನ ಗಣ್ಯರು ಹಾಗು ಸಿ ಸುರೇಶ H k ಪ್ರಭಾಕರ್ T ಸಂತೊಷ್ ಕುಮಾರ್ ಪೋಟೋ ಗ್ರಾಪರ್ HT ಹರಿಷ್ ಬಾಬು ಶ್ರಿನಿವಾಸ್ ಸಿ ಬಿ ಮಂಜುನಾಥ ಓಟೆಲ್ ಕಾಸೀಮ್ ಸಾಬ್ ದಾದಪೀರ್ ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಗನಹಳ್ಳಿ ಕೂಡ್ಲಿಗಿ ತಾಲೂಕು, ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;