ದಿನಾಂಕ 9/11/ 2022 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕವತಿಯಿಂದ ಬಾಗೇಪಲ್ಲಿ ಪಟ್ಟಣ ಪುರಸಭೆ ಕಚೇರಿ ಪಕ್ಕದಲ್ಲಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಶ್ರೀ ಎಸ್ ಎನ್ ಸುಬ್ಬಾರೆಡ್ಡಿರವರು ಮಾತನಾಡುತ್ತಾ ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಮಾಡಲು ವಿಧಾನಸೌಧದಲ್ಲಿ ಧ್ವನಿಯೆತ್ತಿದ್ದೇನೆ ಶೀಘ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಬಾಗೇಪಲ್ಲಿಗೆ ಆಗಮಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದರು .
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಅಧ್ಯಕ್ಷರು ಅಗ್ರಹಾರ ಮೋಹನ್ ಮಾತನಾಡುತ್ತ ಕರವೇ ಸ್ವಾಭಿಮಾನಿ ಬಣ ರಾಜ್ಯ ಅಧ್ಯಕ್ಷರು ಪಿ ಕೃಷ್ಣೇಗೌಡರ ನೇತೃತ್ವದಲ್ಲಿ ಗಡಿ ವಿಚಾರದಲ್ಲಿ, ನೀರಿನ ವಿಚಾರದಲ್ಲಿ, ಮೇಕೆದಾಟು ವಿಚಾರದಲ್ಲಿ ಹೋರಾಟಗಳನ್ನು ಮಾಡಿ ಕನ್ನಡಿಗರ ಪರವಾಗಿ ಧ್ವನಿ ಎತ್ತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಗೇಪಲ್ಲಿ ತಾಲೂಕು ಘಟಕ ಹೋರಾಟಗಳಲ್ಲಿ ಪ್ರಥಮ ಸ್ಥಾನದಲ್ಲಿ ಇದೆ ಎಂದು ಹೇಳಿದರು
ತಾಲೂಕು ಅಧ್ಯಕ್ಷರು ಬಿಟಿಸಿ ಸೀನ ಮಾತನಾಡುತ್ತಾ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಕನ್ನಡಿಗರಣ ಆಗೋ ತನಕ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಜಬಿವುಲ್ಲಾ ಪ್ರಾಸ್ತಾವಿಕ ನುಡಿಗಳು ಮತ್ತು ಸ್ವಾಗತ ಭಾಷಣೆ ವಂದನಾರ್ಪಣೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಸುಮಾರು 36 ಸಾಧಕರಿಗೆ, ಸನ್ಮಾನಿಸಲಾಯಿತು ಶಾಸಕರು ಎಸ್ ಎನ್ ಸುಬ್ಬಾರೆಡ್ಡಿ, ನರಸಿಂಹ ನಾಯ್ಡು ಕರವೇ ಸ್ವಾಭಿಮಾನಿ ಬಣ ಅಧ್ಯಕ್ಷರು ಅಗ್ರಹಾರ ಮೋಹನ್, ಜಿಲ್ಲಾ ಉಪಾಧ್ಯಕ್ಷರು ಅಶೋಕ್ ಚಕ್ರವರ್ತಿ, ತಾಲೂಕು ಅಧ್ಯಕ್ಷರು ಬಿಟಿಸಿ ಸೀನಾ, ಪ್ರಧಾನ ಕಾರ್ಯದರ್ಶಿ ಜಬಿವುಲ್ಲಾ, ಸುರೇಶ ಬಾಬು, ನಾಗರಿಡ್ಡಿ, ರವಿಯಾದವ್, ಅಮರ್ನಾಥ, ಜಾವೀದ್, ನೂರುಲ್ಲಾ, ಬಾಬಾ ಫಕ್ರುದ್ದೀನ್, ಸುಧಾ, ಹಿದಾಯತುಲ್ಲಾ ಮುಂತಾದವರು ಉಪಸ್ಥಿದ್ದರು..

ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
