;

ಸಾರ್ವರ್ತಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಕ್ಷೇತ್ರದ ಪ್ರಬಲ ಆಕಾಂಕ್ಷಿ ನಾನೇ -ಕೆ.ವಿರುಪಾಕ್ಷಪ್ಪ…!!!

ಸಾರ್ವರ್ತಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಕ್ಷೇತ್ರದ ಪ್ರಬಲ ಆಕಾಂಕ್ಷಿ ನಾನೇ -ಕೆ.ವಿರುಪಾಕ್ಷಪ್ಪ

ಸಿಂಧನೂರು :ನ. 8.ತಮಗೆ ಪಕ್ಷ ಸೇರ್ಪಡೆ ಸಂಧರ್ಭದಲ್ಲಿ ಒಳ್ಳೆಯ ಸ್ಥಾನಮಾನ ನೀಡಲಾಗುವುದು ಎಂದು ಪಕ್ಷದ ಮುಖಂಡರು ಭರವಸೆ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿ ದ್ದರು. ಅದರಂತೆ ಇಂದು ಕೊಟ್ಟ ಮಾತಿನಂತೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ಹಾಗೂ ನೂತನ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ ತಿಳಿಸಿದರು.
ಅವರು ತಮ್ಮ ನಿವಾಸದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ನನ್ನ ಮೇಲೆ ವಿರೋಧ ಪಕ್ಷದವರು ನಮ್ಮದೇ ಪಕ್ಷದ ಕೆಲವರು ದುಡ್ಡು ತೆಗೆದುಕೊಂಡು ಬಿಜೆಪಿ ಪಕ್ಷ ಸೇರ್ಪಡೆ ಯಾಗಿದ್ದಾರೆ.ಅವರಿಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂಬ ಆಪಾದನೆಗಳು ನನ್ನ ಮೇಲೆ ಇದ್ದವು. ತಡವಾಗಿಯಾದರೂ ಪರವಾಗಿಲ್ಲ, ಆ ಅಪಾದನೆಯಿಂದ ದೂರ ಮಾಡಿದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷರಾದ ನಳೀನ ಕುಮಾರ ಕಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೃಷಿ ಸಚಿವ ಬಿ.ಸಿ.ಪಾಟೀಲ, ಆರ್ ಅಶೋಕ ಮಂತ್ರಿ ಮಂಡಲದ ಎಲ್ಲಾ ಸದಸ್ಯರಿಗೆ ಹಾಗೂ ಆಯ್ಕೆ ಸಮಿತಿ ಸದಸ್ಯರಿಗೆ ಧನ್ಯವಾದಗಳು ತಿಳಿಸಿದರು.
ಬಿಜೆಪಿ ಸೇರುವ ಸಂದರ್ಭದಲ್ಲಿ ಮುಖಂಡರು ಅಥವಾ ಕಾರ್ಯಕರ್ತರು ಕೆಲವರು ಬೇಡ, ಇನ್ನೂ ಕೆಲವರು ಹೋಗೊಣ ಎನ್ನುವ ದ್ವಂದ್ವ ನಿಲುವಿನಲ್ಲಿ ತಮ್ಮ ನಿವಾಸದಲ್ಲಿ ವಿಜೆಯೇಂದ್ರನ ಜೊತೆ ಮಾತುಕತೆ ಮೂಲಕ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಾಗೂ ಹಾಲಿ,ಮಾಜಿ ಶಾಸಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಿಮಗೆ ಪಕ್ಷ ಒಳ್ಳೆಯ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ಕೊಟ್ಟಿದ್ದರು.ಆ ಭರವಸೆಯನ್ನು ಈಡೇರಿಸಿ ತಾಲೂಕಿನ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದಾರೆ.ಜನರ ಉತ್ಸಾಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ನಿಗಮ ಮಂಡಳಿ ನೀಡದಿದ್ದರೆ ಅಭಿಮಾನಿಗಳಿಗೆ ಪಕ್ಷ ದ್ರೋಹ ಮಾಡಿದೆ ಎಂಬ ಕಳಂಕ ನನ್ನ ಮೇಲೆ ಇರುತ್ತಿತ್ತು. ಆರು ತಿಂಗಳ ಇಂದೆಯೇ ನನ್ನ ಹೆಸರು ಆಯ್ಕೆ ಪಟ್ಟಿಯಲ್ಲಿ ಇತ್ತು ರಾಷ್ಟ್ರೀಯ ಪಕ್ಷವಾದ್ದ ರಿಂದ ಕೆಲವು ಗೊಂದಲಗಳನ್ನು ಸರಿಪಡಿಸಿ ತಡವಾಗಿಯಾದರು ನೀಡಿದಕ್ಕೆ ಪಕ್ಷದ ಮೇಲೆ ಇರುವ ಆಪಾದನೆ ದೂರವಾಗಿದೆ ಎಂದರು.


ತಾಲೂಕಿನಲ್ಲಿ ಬಿಜೆಪಿ ಪಕ್ಷ ಬೆಳೆದಿಲ್ಲ ಎಂಬ ಆಪಾದನೆ ಇದೇ ಕಾರಣ ಯಾವುದೇ ಸ್ಥಾನಮಾನ ಇಲ್ಲದೆ ಸಮರ್ಥವಾದ ನಾಯಕತ್ವ ಕೊರತೆ ಯಿಂದಾಗಿ ಪಕ್ಷವನ್ನು ಯಾರು ಸಂಘಟಿಸಲಿಲ್ಲ. ಕಾರ್ಯಕರ್ತರಿಗೂ ಕೂಡಾ ಗೊಂದಲಕ್ಕಿಡಾಗಿದ್ದರೂ ಇನ್ನೂ ಮುಂದೆ ಪಕ್ಷದ ಸಂಘಟನೆಗೆ ಭರವಸೆ ಮೂಡುತ್ತದೆ. 50 ವರ್ಷಗಳ ಇಂದೇ ನನ್ನ ಜೊತೆಯಲ್ಲಿರುವ ಎಲ್ಲಾ ಮುಖಂಡರುಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೇರ್ಪಡೆ ಯಾಗಿದ್ದಾರೆ ಅವರು ಮುಂಬರುವ ದಿನಗಳಲ್ಲಿ ತಮ್ಮ ಜೊತೆಗೆ ಬರುತ್ತಾರೆ ಎಂಬ ವಿಸ್ವಾಸ ವ್ಯಕ್ತಪಡಿಸಿದರು. ಮುಂಬರುವ 2023ರ ಕರ್ನಾಟಕ ವಿಧಾನಸಭಾ ಸಾರ್ವರ್ತಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಕ್ಷೇತ್ರದ ಪ್ರಬಲ ಆಕಾಂಕ್ಷಿ ನಾನೇ ಆಗಿದ್ದೇನೆ ಎಂದು ಹೇಳಿದರು.
13ವರ್ಷಗಳಿಂದ ಅಧಿಕಾರ ಇಲ್ಲದಿದ್ದರೂ ತಮ್ಮ ಜೊತೆಯಲ್ಲಿರುವ ಕಾರ್ಯಕರ್ತರಿಗೆ ಈ ಸಂದರ್ಭ ದಲ್ಲಿ ‌‌‌‌ಧನ್ಯವಾದ ತಿಳಿಸಿದರು. ಬಿಜೆಪಿ ಪಕ್ಷ ನಾಯಕ ರನ್ನು ಗುರುತಿಸುವಾಗ ಅವರ ಹಿಂದೆ ಇರುವ ಜನ ಶಕ್ತಿಯನ್ನು ನೋಡಿ ಗುರುತಿಸಿ ಜವಾಬ್ದಾರಿ ನೀಡಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಬೆಂಬಲವಾಗಿ ನಿಲ್ಲೋಣ ಎಂದರು.
ತಾಲೂಕಿನಲ್ಲಿ ಎರಡು ಕುಟುಂಬಗಳ ರಾಜಕಾರಣಕ್ಕೆ ಜನ ಬೇಸತ್ತಿದ್ದಾರೆ ನಾಡಗೌಡರು ಅಧಿಕಾರ ಇಲ್ಲದಿದ್ದಾಗ ಅಥವಾ ಚುನಾವಣೆ ಸಂದರ್ಭದಲ್ಲಿ ಹಂಪನಗೌಡರ ಮೇಲೆ ಭ್ರಷ್ಟಾಚಾರ ಆಪಾದನೆಗಳನ್ನು ಮಾಡುತ್ತಾರೆ.ಆದರೆ ಎರಡು ಬಾರಿ ಶಾಸಕರಾದರೂ ಯಾವುದೇ ಭ್ರಷ್ಟಾಚಾರ ಬಯಲಿಗೆ ತರಲಿಲ್ಲ, ಕಾರಣ ಇಬ್ಬರು ಒಂದೇ ಕುಟುಂಬದವರು ಹಾಗೂ ಸಂಬಂದಿಕರು ಕೂಡ ಹೌದು. ನಾನು ತಪ್ಪು ಮಾಡಿರುವದನ್ನು ನೀನು ಬಯಲಿಗೆ ತರಬೇಡ ನೀನು ಮಾಡಿರುವದನ್ನು ನಾನು ಬಯಲಿಗೆ ತರುವುದಿಲ್ಲ ಎಂದು ಒಳ ಒಪ್ಪಂದ ಮಾಡಿಕೊಡಿದ್ದಾರೆ. ಆದರೆ ಅವರು ನೋಡುವವರಿಗೆ ಮನಸ್ಸುಗಳು ಬೇರೆ ಬೇರೆ ರೀತಿಯಲ್ಲಿ ಕಂಡರೂ ಭಾವನೆಗಳು ಒಂದೇಯಾಗಿದೆ ಎಂದು ತಾಲೂಕಿನ ಜನರಿಗೆ ಮನವರಿಕೆಯಾಗಿದೆ. ಈ ಬಾರಿ ಜನರು ಇವರನ್ನು ಮನೆಗೆ ಕಳಿಸುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ ದೊಡ್ಡ ಬಸವರಾಜ, ಶಿವನಗೌಡ ಗೋರೆಬಾಳ, ಹನುಮೇಶ ಸಾಲುಗುಂದಾ, ನೀರುಪಾದಿ ಜೋಳದ ರಾಶಿ, ಹಂಸರಾಜ, ವೀರೆಶ ಇಲ್ಲೂರು,ಸಿದ್ದು ಹೂಗಾರ ಸೇರಿದಂತೆ ಇನ್ನಿತರ ಪಕ್ಷದ ಮುಖಂಡರು ಇದ್ದರು..

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend