ಬಂಗಾರು ಹನುಮಂತು ಅವರಿಂದ ಗಾಣಗಟೆ ಶ್ರೀ ಮಾಯಮ್ಮ ದೇವಿಗೆ ವಿಶೇಷ ಪೂಜೆ.
ಕೂಡ್ಲಗಿ ತಾಲ್ಲೂಕಿನ ಗಾಣಗಟೆ ಗ್ರಾಮದ ಆರಾಧ್ಯ ದೇವತೆ ಶ್ರೀ ಕ್ಷೇತ್ರ ಗಾಣಗಟ್ಟಿ ಮಾಯಮ್ಮ ದೇವಿಗೆ ವಿಶೇಷ ಪೂಜೆ ಕಾರ್ಯಕ್ರಮವನ್ನು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಬಿಜೆಪಿ ಆಕಾಂಕ್ಷಿ ಬಂಗಾರು ಹನುಮಂತು ಅವರು ಹಾಗೂ ಕುಟುಂಬದವರು ಇಂದು ಶ್ರೀ ಕ್ಷೇತ್ರ ಗಾಣಗಟ್ಟಿ ಮಾಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ ಇದೇ ವೇಳೆ ದೇವಿಗೆ ಹೂವಿನ ಅಲಂಕಾರ, ಮಂಗಳಾರತಿ ಬೆಳಗಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಇದೆ ವೇಳೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಬಂಗಾರು ಹನುಮಂತು ಅವರಿಗೆ ಅಭಿಮಾನಿಗಳಿಂದ ಅದ್ದೂರಿಯಾಗಿ ಸನ್ಮಾನಿಸಿದರು. ಇನ್ ಇದೇ ವೇಳೆ ಅಭಿಮಾನಿಗಳಿಂದ ಮುಂಬರುವ 2023ರ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರು ಇವರೇ ಎಂದು ಘೋಷಣೆಗಳನ್ನು ಕೂಗಿದರು. ಐದು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾ.ಪಂ ಸದಸ್ಯರು, ಪಟ್ಟಣ ಪಂಚಾಯತಿ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರು, ಸಂಘಸಂಸ್ಥೆಗಳು ಹಾಗೂ ಕೂಡ್ಲಗಿ ವಿಧಾನಸಭಾ ಕ್ಷೇತ್ರದ ಸಮಸ್ತ ಹಿರಿಯ ನಾಗರಿಕರು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಅಪರಾಭಿಮಾನಿಗಳು ಭಾಗವಹಿಸಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
