371(ಜೆ) ಮೀಸಲಾತಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಅನ್ಯಾಯ-ಕೆ.ಕರಿಯಪ್ಪ
ಸಿಂಧನೂರು :ನ.3.ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 371(ಜೆ) ಮೀಸಲಾತಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡುವಲ್ಲಿ ಬಿಜೆಪಿ ಸರಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ನಮ್ಮ ಭಾಗದ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಪರಿಶ್ರಮ ಹಾಗೂ ಅನೇಕರ ಹೋರಾಟದ ಫಲವಾಗಿ 371ಜೆ ಜಾರಿಗೆ ತಂದು ಅಂದಿನ ಸಿದ್ದರಾಮಯ್ಯ ಆಡಳಿತ ಸರ್ಕಾರವು 2016 ನವಂಬರ್ 16 ರಂದು ಸುತ್ತೋಲೆಯನ್ನು ಹೊರಡಿಸಿ ಸರಕಾರ ನೇಮಕಾತಿಗೆ ಆದೇಶಿಸಿತ್ತು, ನಂತರ 2020 ಜೂನ್ 06 ಆದೇಶದಲ್ಲಿ ನಮ್ಮ ಭಾಗದ ನಿರುದ್ಯೋಗ ಯುವಕರಿಗೆ ಅನ್ಯಾಯ ವಾಗುವ ಅಂಶಗಳು ಅಳವಡಿಸಿದರಿಂದ ಈ ಅನ್ಯಾಯದ ಬಗ್ಗೆ ಸರ್ಕಾರದ ಗಮನಕ್ಕೆ ತಂದ ನಂತರ 2020 ಜೂನ್ 15ಕ್ಕೆ ಆದೇಶವನ್ನು ರದ್ದುಪಡಿಸಿ ಅಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.
ಆದರೆ ರಾಜ್ಯ ಸರ್ಕಾರ 2020 ಜೂನ್ 06 ರ ಸುತ್ತೋಲೆ ವಾಪಾಸ ಪಡೆದಿದೆ ಎಂದು ತಿಳಿಸಿ ಈಗಾಗಲೇ ಜಾರಿಯಲ್ಲಿರುವ ಎಲ್ಲಾ ನೇಮಕಾತಿ ಗಳು ಅದೇ ಸುತ್ತೋಲೆ ಅನ್ವಯದಂತೆ ನಡೆಯುತ್ತವೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯ ಸರ್ಕಾರದ ದ್ವಂದ್ವ ನಿಲುವಾಗಿದ್ದು, ಆದ್ದರಿಂದ ಸರಕಾರದ 2022 ಜೂನ್ 15 ರ ರಾಜ್ಯಪತ್ರ ಕಲ್ಯಾಣ ಕರ್ನಾಟಕ ಪ್ರದೇಶದ ವಿರುದ್ಧವಾಗಿದ್ದು, ತಕ್ಷಣ ಇದನ್ನು ವಾಪಾಸ್ಸು ಪಡೆದು 2016 ರ ಸುತ್ತೋಲೆ ಯಂತೆ ಮೇರಿಟ್ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು,ಇನ್ನೂಳಿದ ವೃಂದಗಳಿಗೆ ಈ ಭಾಗದ ಅಭ್ಯರ್ಥಿಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸಿ ಮೀಸಲಾತಿ ಯನ್ನು ನ್ಯಾಯಬದ್ದ ಅವಕಾಶವನ್ನು ನೀಡಲು ಸೂಕ್ತ ಸುತ್ತೋಲೆಯನ್ನು ಹೊರಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಪತ್ರಿಕಾಗೋಷ್ಠಿ ಮೂಲಕ ಹಾಗೂ ಸದನದಲ್ಲಿ ಪ್ರಸ್ತಾಪ ಮಾಡಿದನ್ನು ಬಿಟ್ಟರೆ ಯಾವ ಜನಪ್ರತಿನಿಧಿಗಳು ಈ ಬಗ್ಗೆ ದ್ವನಿಯೆತ್ತಿಲ್ಲ. ಇನ್ನೂ ಮುಂದೆಯಾದರೂ ಜನಪ್ರತಿನಿಧಿಗಳು ಅಭ್ಯರ್ಥಿಗಳಿ ಗಾಗುವ ಅನ್ಯಾಯದ ವಿರುದ್ಧ ಹಾಲಿ ಮತ್ತು ಮಾಜಿ ಶಾಸಕರು,ಸಂಸದರು ವಿವಿಧ ಪಕ್ಷದ ರಾಜಕೀಯ ಮುಖಂಡರು,ವಿವಿಧ ಸಂಘಟನೆಗಳು ಪಕ್ಷಾತೀತ ವಾಗಿ ಇದರ ವಿರುದ್ಧ ದ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದರು.
ನಂತರ ಬೀರಪ್ಪ ಮಾತನಾಡಿ ಬಿಜೆಪಿ ಸರಕಾರ ಉದ್ಯೋಗದಲ್ಲಿ ಕಡಿತ ಮಾಡಿ ಪ್ರತಿಭಾವಂತರಿಗೆ ಅನ್ಯಾಯ ಮಾಡಿದೆ.ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತಂದಿದ್ದು ಅವರು ಸರಿಮಾಡೋಣ ಎಂದು ಹೇಳುತ್ತಾರೆ.ಆದರೆ ಮಾತಿನಲ್ಲಿ ಹೇಳಿದರೆ ಸಾಲದು ಆದೇಶವಾಗಬೇಕು.ಈ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ನಮ್ಮ ಕಲ್ಯಾಣ ಕರ್ನಾಟಕದ ಪರವಾಗಿ ದ್ವನಿಯೆತ್ತಲು ಮನವಿ ಮಾಡಿದ್ದೇವೆ. ಈ ಅನ್ಯಾಯವನ್ನು ಒಂದು ವಾರದೊಳಗೆ ರಾಜ್ಯ ಸರ್ಕಾರ ಕೂಡಲೇ ಸರಿಪಡಿಸದಿದ್ದಲ್ಲಿ ನಮ್ಮ ಭಾಗದ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆ ಹಾಗೂ ಕೆ. ಕರಿಯಪ್ಪ, ಮತ್ತು ರಜಾಕ್ ಉಸ್ತದ್ ಇನ್ನೂ ಮುಂತಾದ ಮುಖಂಡರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಹಾಗೂ ಹಲವಾರು ಸಂಘಟನೆಗಳ ಕರೆಯ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗು ವುದು ಎಂದರು.
ಈ ಸಂದರ್ಭದಲ್ಲಿ ಪರಶುರಾಮ ಮಲ್ಲಾಪೂರು, ಎಜಾಜ, ನಬೀಸಾಬ್, ದೇವರಾಜ, ಹಸೇನಪ್ಪ ಸೂಲಂಗಿ, ಸುರಿಬಾಬು ಇದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
