ಬಾಗೇಪಲ್ಲಿ ಪಟ್ಟಣ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ…!!!

ದಿನಾಂಕ 1. 11 2022 ರಂದು (ಭಾಗ್ಯನಗರ )ಬಾಗೇಪಲ್ಲಿ ಪಟ್ಟಣ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರು ಮಾತನಾಡುತ್ತಾ ಭಾಗ್ಯನಗರವನ್ನು ಕನಡೀಕರಣ ಮಾಡಲು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆದಿದೆ ಅತಿ ಶೀಘ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಶೀಘ್ರದಲ್ಲಿ ಭಾಗ್ಯನಗರ ಪಟ್ಟಣಕ್ಕೆ ಆಗಮಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಹೇಳಿದರು .
ಕರವೇ ಸ್ವಾಭಿಮಾನಿ ಬಣ ತಾಲೂಕು ಅಧ್ಯಕ್ಷರು ಬಿ ಟಿ ಸಿ ಸೀನ ಮಾತನಾಡುತ್ತಾ ಸುಮಾರು ವರ್ಷಗಳಿಂದ ಬಾಗೇಪಲ್ಲಿ ಹೆಸರನ್ನು ಕನ್ನಡಿಕರಣ ಮಾಡಲು ಹೋರಾಟಗಳನ್ನು ಮಾಡಿದ್ದೇವೆ ಸಚಿವರಿಗೂ ಕೂಡ ಮನವಿ ಪತ್ರ ನೀಡುತ್ತೇವೆ ಎಂದು ಹೇಳಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ ಮಾತನಾಡುತ್ತಾ ನಾಡು ,ನುಡಿ, ನೆಲ, ಜಲ ,ಗಡಿ, ಭಾಷೆಗೆ ದಕ್ಕೆ ಉಂಟು ಆದಾಗ ಕನ್ನಡಪರ ಸಂಘಟನೆಗಳು ಹೋರಾಟಗಳನ್ನು ಮಾಡಿ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ ಅದರ ಹೆಮ್ಮೆ ಕೂಡ ಇದೆ ಕನ್ನಡಿಗರು ವಿಶಾಲವಾದ ಹೃದಯವಂತರು ಅದರ ಜೊತೆಯಲ್ಲಿ ಪರ ರಾಜ್ಯಗಳಿಂದ ತಮ್ಮ ಬದುಕನ್ನು ಕಟ್ಟಿಕೊಡಲು ಕರ್ನಾಟಕ ರಾಜ್ಯಕ್ಕೆ ಬಾಗೇಪಲ್ಲಿಗೆ ಬಂದಿರುತ್ತಾರೆ ಅವರಿಗೆ ವಿಶಾಲವಾದ ಕನ್ನಡಿಗರು ಸ್ವಾಗತವನ್ನು ಕೋರುತ್ತಾರೆ ಆದರೆ ಒಲಸೆ ಬಂದಿರುವ ಪರ ರಾಜ್ಯದವರು ಕನ್ನಡಿಗರನ್ನು, ಕನ್ನಡವನ್ನು ಗೌರವಿಸಿ ತಮ್ಮ ಅಂಗಡಿಯಗಳಲ್ಲಿ ಕನ್ನಡಿಗರಿಗೆ ಕೆಲಸಕ್ಕೆ ಸೇರಿಸಿಕೊಂಡು ಕನ್ನಡವನ್ನು ತಮ್ಮ ಮನೆಗಳಲ್ಲಿ ತಮ್ಮ ವ್ಯವಹಾರಗಳಲ್ಲಿ ಬಳಕೆ ಮಾಡಿ ಕನ್ನಡ ತಾಯಿಯ ಋಣ ತೀರಿಸಬೇಕೆಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಶಾಸಕರು ಎಸ್. ಎನ್. ಸುಬ್ಬಾರೆಡ್ಡಿ ಪುರಸಭೆ ಅಧ್ಯಕ್ಷರು ರೇಷ್ಮಾ ಬಾನು ,ತಾಲೂಕು ದಂಡಾಧಿಕಾರಿ ವೈ. ರವಿ ತಾಲೂಕು ಪಂಚಾಯಿತಿ ಅಧಿಕಾರಿ ಆನಂದ. ಆರೋಗ್ಯ ಅಧಿಕಾರಿ ಸತ್ಯನಾರಾಯಣ ರೆಡ್ಡಿ, ಪುರಸಭೆ ಮುಖ್ಯ ಅಧಿಕಾರಿ ಕೆ ಮದುಕರ್, ಕರವೇ ಸ್ವಾಭಿಮಾನಿ ಬಣ ತಾಲೂಕು ಅಧ್ಯಕ್ಷರು ಬಿ ಟಿ ಸಿ ಸೀನಾ, ತಾಲೂಕು ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಉಪಸ್ಥಿತರು..

ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend