ಕನ್ನಡ ಹೃದಯ ಭಾಷೆ ಗಿಂತ ಅದು ನಮ್ಮ ಉಸಿರಾಗಬೇಕು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ನಾಡಕಛೇರಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮತ್ತು ಭುವನೇಶ್ವರಿ ಭಾವಚಿತ್ರಕ್ಕೆ ಪೂಜಿಸಲ್ಲಿಸಿ. ಪುಷ್ಪ ನಮನ ಸಲ್ಲಿಸಿದರು.

ನಂತರ ಉಪ ತಹಶೀಲ್ದಾರ್ ಚಂದ್ರಮೋಹನ್ ಮಾತನಾಡಿ ಕನ್ನಡ ಹೃದಯ ಭಾಷೆಯಾಗಿದ್ದು ಅದು ನಮ್ಮ ಉಸಿರಾಗಬೇಕು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಹಿರಿಯರ ವಾಣಿಯಂತೆ. ಕನ್ನಡದ ನೆಲ. ಜಲ.ಭಾಷೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಆತ್ಮಭಿಮಾನ ಬೆಳೆಯಬೇಕು ಎಂದು ಸ್ಮರಿಸಿದರು.
ನಂತರ ಹಿರಿಯ ಸಾಹಿತಿಗಳು ಮತ್ತು ಕವಿಗಳಾದ ಯು ಜಗನ್ನಾಥ್ ಮಾತನಾಡಿ ಕನ್ನಡ ಎಂಬುದು ಬರಿ ಭಾಷೆಯಲ್ಲ ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ ನೆಲ ಜಲದ ಬಗ್ಗೆ ಅಭಿಮಾನ,ಸ್ವಾಭಿಮಾನ ವಿರಬೇಕು. 2000 ವರ್ಷದ ಇತಿಹಾಸ ಹೊಂದಿರುವ ಕನ್ನಡ ನಾಡು ನುಡಿಯನ್ನು ಮತ್ತಷ್ಟು ಶ್ರೀಮಂತ ಗೊಳಿಸುವಲ್ಲಿ ನುಡಿಗಿಂತ ನಡೆ ಮುಖ್ಯವಾಗಿದೆ. ರಾಜ್ಯೋತ್ಸವ ಆಚರಣೆ ನಿತ್ಯೋತ್ಸವ ಆಗಬೇಕು.

ಎಂದು ಕನ್ನಡದ ಬಗ್ಗೆ ಸ್ವವಿವರ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಭಾರಿ ಕಂದಾಯ ಪರಿವೀಕ್ಷಕರಾದ ಚನ್ನಬಸಯ್ಯ. ಗ್ರಾಮ ಲೆಕ್ಕಾಧಿಕಾರಿಗಳಾದ ಮುರುಗೇಶ್ ಕುಂಬಾರ್. ರಾಘವೇಂದ್ರ. ಶ್ರೀನಿವಾಸ ಕೊಂಡಿ.ಚೈತ್ರ. ಸಂಪ್ರೀತ. ರೋಶೀಲ. ಗ್ರಾಮದ ಮುಖಂಡರಾದ
ನಿವೃತ್ತ ಶಿಕ್ಷಕರಾದ ಮಹದೇವಪ್ಪ.
ಕೆ. ಸುಭಾಷ್ ಚಂದ್ರ. ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರಪ್ಪ. ವೀರೇಶ್ ಕಿಟ್ಟಪ್ಪನವರ್. ಕುಂಬಾರ್ ಹನುಮಂತಪ್ಪ. ನಾಡಕಚೇರಿ ಆಪರೇಟರ್ ನಾಗೇಶ್. ಅಗ್ರಹಾರದ ಮಂಜುನಾಥ್. ಗ್ರಾಮ ಸಹಾಯಕರದ ಗಂಗಪ್ಪ. ತಳವಾರ್ ಬೋರಪ್ಪ. ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಮುರುಗೇಶ್ ಕುಂಬಾರ್ ಇವರು ವೃತ್ತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾಗಿದ್ದು. ಪ್ರವೃತ್ತಿಯಲ್ಲಿ ಕಲೆ ಸಾಹಿತ್ಯ ಕವನಗಳನ್ನು ರಚಿಸಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಇವರನ್ನು ಗೌರವ ಸನ್ಮಾನಿಸಲಾಯಿತು..
ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
