ಕನ್ನಡ ಭಾಷೆ ಮತ್ತಷ್ಟು ಶ್ರೀಮಂತವಾಗಲಿ: ಜಿ.ಬಿ ನಿoಗಪ್ಪ
ಕೂಡ್ಲಿಗಿ: ಅನ್ಯ ಭಾಷೆ ಗಳಿಗಿಂತ ಕನ್ನಡ ಹೆಚ್ಚು ಶ್ರೀಮಂತ ವಾಗಿದೆ ಎಂದು ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಬಿ ನಿಗಂಗಪ್ಪ ಹೇಳಿದರು. ಮಂಗಳವಾರ ಆಲೂರು ಗ್ರಾಮ ಪಂಚಯತಿಯಲ್ಲಿ ನಡೆದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಪೂಜೆ ಸಲ್ಲಿಸಿ ಮಾತನಾಡಿದರು ಕನ್ನಡ ಭಾಷೆಗೆ ಎರಡು ಸಾವಿರ ವರುಷಗಳ ಇತಿಹಾಸವಿದೆ. ಭಾಷವಾರು ಪ್ರಾಂತ್ಯ ಮಾಡುವಾಗ ಕನ್ನಡ ಮಾತನಾಡುವವರನ್ನು ಮೈಸೂರು ರಾಜ್ಯ ಎಂದು ಮಾಡಲಾಯಿತು. ನಂತರ ಕರ್ನಟಕ ಎಂದು ಮರು ನಾಮಕರಣ ಮಾಡಲಾಯಿತು ಎಂದು ಹೇಳಿದರು. ಕನ್ನಡಿಗರು ಕನ್ನಡದಲ್ಲೇ ವ್ಯವಹಾರ ನಡೆಸಬೇಕು, ಮಾತು ಎಲ್ಲಾ ಕಡೆ ಹೆಚ್ಚಾಗಿ ಕನ್ನಡವನ್ನೇ ಬಳಸಿದರೆ. ಕನ್ನಡ ಮತ್ತಷ್ಟು ಶ್ರೀಮಂತ ಗೊಳ್ಳುವುದು ಹಾಗೂ ಅನ್ಯ ಭಾಷೆ ಮಾತನಾಡುವವರು ಅವರ ಮನೆಗಳಲ್ಲಿ ಮಾತನಾಡಬೇಕು. ಜನ ಸಾಮಾನ್ಯರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದರು. ಅನ್ಯ ಭಾಷೆಗಳು ಮನೆಗೆ ಕಿಟಕಿ ಬಾಗಿಲುಗಳ ಹಾಗೆ ಇರಬೇಕೆ ಹೊರತು ಮನೆಯಾಗಬಾರದು ಎಂದು ಕಿವಿ ಮಾತು ಹೇಳಿದರು. ನಮ್ಮ ಅನುಕೂಲಕ್ಕೆ ಬೇರೆ ಭಾಷೆಗಳನ್ನು ಬಳಸಬೇಕು ಆದರೆ ಅದೇ ಹೆಚ್ಚಾಗ ಬಾರದು. ಮತ್ತು ಕನ್ನಡ ಜ್ಞಾನ ಭಂಡಾರ ದೊಡ್ಡದು ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಕನ್ನಡ ಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ ಎಂದು ಮಾತನಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು..

ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
