50 ಕ್ಷಯರೋಗಿಗಳನ್ನು ದತ್ತು ಪಡೆದ ಡಾ. ಶಿವರಾಜ್…!!!

50 ಕ್ಷಯರೋಗಿಗಳನ್ನು ದತ್ತು ಪಡೆದ ಡಾ. ಶಿವರಾಜ್.

ಸಿಂಧನೂರು :ಅ.12.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನೆ ವಿಭಾಗ ರಾಯಚೂರು ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಸಹನಾ ಮಕ್ಕಳ ಆಸ್ಪತ್ರೆ ಸಿಂಧನೂರು ಇವರ ಸಂಯುಕ್ತಾ ಶ್ರಯದಲ್ಲಿ ಇಂದು ಪ್ರಧಾನಮಂತ್ರಿಗಳ ಕ್ಷಯಮುಕ್ತ ಭಾರತ ಅಭಿಯಾನದ ಅಂಗವಾಗಿ ನಿಕ್ಷಯ ಮಿತ್ರ- ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ 50 ಕ್ಷಯ ರೋಗಿಗಳಿಗೆ ದತ್ತು ಪಡೆಯುವುದು ಹಾಗೂ ಪೌಷ್ಟಿಕ ಆಹಾರ ವಿತರಣೆ ಮಾಡುವ ಕಾರ್ಯಕ್ರಮವನ್ನು ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಅಯ್ಯನ ಗೌಡ ಹಾಗೂ ಡಾ.ಶಿವರಾಜ ಮಕ್ಕಳ ತಜ್ಞರು ಸಹನಾ ಮಕ್ಕಳ ಆಸ್ಪತ್ರೆ ಇವರು ಉದ್ಘಾಟಿಸಿದರು.
50 ಕ್ಷಯರೋಗಿಗಳನ್ನು ದತ್ತು ಪಡೆದಂತಹ ಡಾ. ಶಿವರಾಜ್ ಇವರು ಮಾತನಾಡಿ ಕ್ಷಯ ರೋಗಿಗಳು ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಸಂಪೂರ್ಣ ಗುಣಮುಖರಾಗುತ್ತಾರೆ. ಹಾಗೂ ಪೌಷ್ಠಿಕ ಆಹಾರ ಸೇವನೆಯು ಅತೀ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಅಯ್ಯನಗೌಡ ಇವರು ಐವತ್ತು ಕ್ಷಯ ರೋಗಿಗಳನ್ನು ದತ್ತು ಪಡೆದಂತಹ ಡಾ. ಶಿವರಾಜ್ ಇವರಿಗೆ ಆರೋಗ್ಯ ಇಲಾಖೆಯ ಪರವಾಗಿ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿ ಸಂಗನಗೌಡ ಮಾಲಿಪಾಟೀಲ್, ಶ್ರೀಮತಿ ಗೀತಾ ಹಿರೇಮಠ BHEO, ತಾಲೂಕು ಕ್ಷಯರೋಗ ಘಟಕದ ಸಿಬ್ಬಂದಿಗಳಾದ ಅಮೀರ್, ಅಬ್ದುಲ್ ಹಮೀದ್ ,ನವೀನಕುಮಾರ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend