ತುರ್ವಿಹಾಳ ಪಟ್ಟಣದಲ್ಲಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಸನಗೌಡ…!!!

ತುರ್ವಿಹಾಳ ಪಟ್ಟಣದಲ್ಲಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಸನಗೌಡ.

ಸಿಂಧನೂರು :ಅ.12. ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್-ಇ ಯೋಜನೆಯಡಿಯಲ್ಲಿ 2022 -23 ನೇ ಸಾಲಿನಲ್ಲಿ(5054) ರೂ.789.03 ಲಕ್ಷ ರೂಗಳ ಅನುದಾನ ಮಂಜುರಾಗಿದ್ದು, ಬಹು ದಿನಗಳಿಂದ ತುರ್ವಿಹಾಳ ಪಟ್ಟಣದ ಜನರ ಬೇಡಿಕೆ ಯಾಗಿತ್ತು,ಇಂದು ಕಾಮಗಾರಿಗೆ ಚಾಲನೆ ನೀಡಿದ್ದು ಸಾರ್ವಜನಿಕರಿಗೆ ಅನುಕೂಲ ವಾಗುವ ರಸ್ತೆ ಇದಾಗಿದ್ದು,ಗ್ರಾಮಸ್ಥರು,ರಸ್ತೆಯ ಎರಡು ಬದಿಯಲ್ಲಿರುವ ಅಂಗಡಿಗಳಿಗೆ ತೊಂದರೆಯಾಗ ದಂತೆ, ಹಾಗೂ ಅಂಗಡಿ ಮಾಲೀಕರು ಕೂಡಾ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಹಕಾರ ನೀಡಬೇಕು. ಈ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಗುತ್ತೆದಾರರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು, ಕಾಲಮಿತಿಯೊಳಗೆ ಸಂಪೂರ್ಣವಾಗಿ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ತಾಲೂಕಿನ (ಮಸ್ಕಿ ವಿಧಾನ ಸಭಾ ಕ್ಷೇತ್ರ) ತುರವಿಹಾಳ ಪಟ್ಟಣದಲ್ಲಿ ಸಿಂಧನೂರು – ಹೆಮ್ಮಡಗ ರಸ್ತೆ ಅಗಲೀಕರಣ ಮತ್ತು ವಿಭಜೀಕರಣ ಪಡಿಸುವ, ಎರಡೂ ಬದಿ ಅಗಲೀಕರಣ ಚರಂಡಿ ನಿರ್ಮಾಣ, ವಿಭಜೀಕರಣಕ್ಕೆ ವಿದ್ಯುತ್ ಕಂಬ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಪುಗೌಡ ದೇವರಮನಿ, ಶೇಖರಗೌಡ, ಶಂಕರಗೌಡ, ಮಂಟಪ್ಪ, ಎಂ. ಡಿ. ಫಾರೂಕ್, ಮಹಾಂತೇಶ, ದುರುಗಪ್ಪ ಪಿಡಬ್ಲೂಡಿ ಜೆಇ, ಗುತ್ತೇದಾರರ ಜಕ್ಕರಾಯ,ಇನ್ನೂ ಮುಂತಾದ ಮುಖಂಡರು,ಜನಪ್ರತಿನಿದಿಗಳು, ಗ್ರಾಮಸ್ಥರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend