ಅ.15 ರೊಳಗಾಗಿ ಗೌರವಧನ ಬಿಡುಗಡೆ ಮಾಡದಿದ್ದರೆ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆ…!!!

ಅ.15 ರೊಳಗಾಗಿ ಗೌರವಧನ ಬಿಡುಗಡೆ ಮಾಡದಿದ್ದರೆ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆ.

ಸಿಂಧನೂರು :ಅ.12.ಅತಿಥಿ ಶಿಕ್ಷಕರ ಗೌರವ ಧನವನ್ನು ಬಿಡುಗಡೆಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ (ರಿ) ರಾಜ್ಯ ಕಾರ್ಯ ವ್ಯಾಪ್ತಿ-ಕರ್ನಾಟಕ ತಾಲ್ಲೂಕು ಘಟಕ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ತಾಲ್ಲೂಕು ಅಧ್ಯಕ್ಷ ಕು.ಡಿ. ದೇವರಾಜ ನಾಯಕ್ ಮಾತನಾಡಿ 2022-23ನೇ ಶೈಕ್ಷಣಿಕ ಸಾಲಿನ ಆರಂಭದಿಂದಲೂ ಶಿಕ್ಷಕರ ಕೊರತೆ ನಿಗಿಸುವ ಉದ್ದೇಶದಿಂದ ರಾಜ್ಯ ಸರಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ತಾಲ್ಲೂಕಿನಲ್ಲಿ ಸುಮಾರು 350ಕ್ಕಿಂತ ಹೆಚ್ಚಿನ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈಗಾಗಲೇ ರಾಜ್ಯ ಸರಕಾರ ಅತಿಥಿ ಶಿಕ್ಷಕರ ವೇತನಕ್ಕೆ ರೂ.175 ಕೋಟಿ ಸಂಬಂಧಪಟ್ಟ ತಾಲೂಕು ಪಂಚಾಯತಿ ಗಳಿಗೆ ಬಿಡುಗಡೆ ಮಾಡಿ ತಿಂಗಳು ಕಳೆದರೂ ಇದು ವರೆಗೂ ನಮ್ಮ ತಾಲ್ಲೂಕಿನಲ್ಲಿ ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆಗೊಳಿಸಿರುವುದಿಲ್ಲ.ಗೌರವ ಧನವನ್ನು ನಂಬಿಕೊಂಡು ಕುಟುಂಬ ಸಾಗಿಸುವುದು ಸಂಕಷ್ಟದಲ್ಲಿರುತ್ತೇವೆ.ಸಂಬಂಧಪಟ್ಟ ಇಲಾಖೆ ಯವರು ಅ.15 ರೊಳಗಾಗಿ ಗೌರವಧನವನ್ನು ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಪುನ ಶಾಲೆ ಗಳು ಅ.17 ರಿಂದ ಪ್ರಾರಂಭವಾಗುವುದರಿಂದ ನಾವುಗಳು ಪುನಃ ಶಾಲೆ ಕರ್ತವ್ಯಕ್ಕೆ ಹಾಜರಾಗುವು ದಿಲ್ಲ ಎಚ್ಚರಿಕೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಮ್ಯಾನೇಜರ್ ಬಸವರಾಜುಗೆ ಮನವಿ ಪತ್ರವನ್ನು ಹೊರಗಡೆ ಬಂದು ಮನವಿ ಸ್ವೀಕರಿಸಿ ಎಂದು ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೇಳಿಕೊಂಡಾಗ ಇಲ್ಲಾ ನಾನು ಹೊರಗಡೆ ಬರುವುದಿಲ್ಲ,ನಾನು ಕುಳಿತಲ್ಲೇ ಕೊಡುವುದಾದರೆ ಕೊಡಿ ಇಲ್ಲದಿದ್ದರೆ ಇನ್ ವಾಡ್ ನಲ್ಲಿ ಕೊಟ್ಟು ರಿಸೀವಡ್ ತೆಗೆದು ಕೊಂಡು ಹೋಗಿ ಎಂದು ಬೇಜ್ವಾಬ್ದಾರಿ ತನದಿಂದ ಮಾತನಾಡಿದಾಗ ಅತಿಥಿ ಶಿಕ್ಷಕರ ಹಾಗೂ ಬಸವರಾಜ ನಡುವೆ ವಾಗ್ವಾದ , ಚರ್ಚೆ,ನಡೆದು ಶಿಕ್ಷಕರು ಪಟ್ಟು ಹಿಡಿದಾಗ ಕೊನೆಗೆ ಹೊರಗಡೆ ಬಂದು ಮನವಿ ಪತ್ರ ಸ್ವೀಕರಿಸಿದರು.ಮ್ಯಾನೇಜರ್ ಬಸವರಾಜುಗೆ ತಾವು ಉನ್ನತ ಹುದ್ದೆಯಲ್ಲಿರ ಬೇಕಾದರೆ ಶಿಕ್ಷಕರೇ ಕಾರಣ ಎಂಬ ಸೌಜನ್ಯವೂ ಅವರಿಗಿಲ್ಲ ಅನ್ನಿಸುತ್ತಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend