ಶ್ರೀ ಹೆಚ್. ಬುಡ್ಡರೆಡ್ಡಿ ಯವರ ಪದಗ್ರಹಣ ಕಾರ್ಯಕ್ರಮ.
ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಸೋಮವಾರ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳ ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಹೆಚ್ ಬುಡ್ಡರೆಡ್ಡಿ ಯವರ ಪದಗ್ರಹಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಶ್ರೀಯುತ ಎಚ್.ಬುಡ್ಡರೆಡ್ಡಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಕೊಟ್ಟ ಜವಾಬ್ದಾರಿಯನ್ನುಪ್ರಾಮಾಣಿಕವಾಗಿ ನಿಷ್ಠೆಯಿಂದ, ಕಾರ್ಯಕರ್ತರನ್ನು ಒಗ್ಗೂಡಿಸುವ ಮೂಲಕ ಪ್ರತಿಯೊಂದು ಹಳ್ಳಿಯಲ್ಲೂ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆ ಬಗ್ಗೆ ಜನರಲ್ಲಿ ಮನವರಿಕೆ ಮಾಡುತ್ತಾ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ನನ್ನದಾಗಿದೆ, ಮೊದಲಿಂದಲೂ ನಾನು ಕಾಂಗ್ರೆಸ್ ಪಕ್ಷದಲ್ಲಿ ದುಡಿದವನು ನಾನು ಪಕ್ಷದಲ್ಲಿ ಕರ್ತವ್ಯ ನಿರ್ವಹಿಸಿರುವುದನ್ನು ಗುರುತಿಸಿ ಕಾಂಗ್ರೆಸ್ ಪಕ್ಷವು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಸ್.ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುತ್ತಾರೆ. ನಾನು ಸದಾ ಪಕ್ಷಕ್ಕಾಗಿ ದುಡಿಯುತ್ತೇನೆ ಪಕ್ಷವನ್ನು ಬಲಪಡಿಸಿ ಮುಂದೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಚಂದನ ಮತ್ತು ಮೇಘನಾ ಪ್ರಾರ್ಥನೆ ಮಾಡಿದರು, ಎಂ. ಎಸ್ ಕೃಷ್ಣ ನಾಯ್ಕ್ ಸ್ವಾಗತಿಸಿದರು, ಉದ್ಘಾಟನೆಯನ್ನು ವೇದಿಕೆಯ ಮೇಲಿರುವ ಎಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರು ಸೇರಿ ನೆರವೇರಿಸಿದರು.
ಗುರು ಸಿದ್ದನಗೌಡ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಸ್ತಾವಿಕವಾಗಿ ಮಾತನಾಡಿದರು. ರಘು ಗುಜ್ಜಲ್, ನರಸಿಂಹಗಿರಿ ವೆಂಕಟೇಶ್, ಟಿ ಉಮೇಶ್, ಜಿಂಕಲ್ ನಾಗಮಣಿ, ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಎಂ ಬಸವರಾಜ್ ಈ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್. ಸಿ.ಘಟಕದ ಜಿಲ್ಲಾ ಅಧ್ಯಕ್ಷ ಹುಲುಗಪ್ಪ, ಲೋಕೇಶ್ ವಿ. ನಾಯಕ್, ಅಜ್ಜನ ಗೌಡ, ಎಂ ಬೋಸಯ್ಯ. ಶೆಟ್ಟಿ ಮಾರಣ್ಣ, ಮಹದೇವ, ದೇವರಮನೆ ಮಹೇಶ, ಬಸಪ್ಪ ನಿವೃತ್ತ ಶಿಕ್ಷಕರು, ಯಂಬ ಳೆಮಾರಪ್ಪ, ಚಿದಾನಂದಗೌಡ, ಸಿದ್ದಾಪುರ ಗ್ರಾಮದ ಗಾಣದ ಬಸವರಾಜ, ಕೇಸರಿ ರಾಮಣ್ಣ,ಕಾಕಿ ಬಸಣ್ಣ,ಸೂಲದಹಳ್ಳಿ ಕಪ್ಪಡಿ ಹನುಮಂತಪ್ಪ, ಹೊಸಹಳ್ಳಿ ಸಿದ್ದಣ್ಣ, ಪಿ ಬೊಮ್ಮಣ್ಣ, ಜಿಬಿಪಿ ಬಸವರಾಜ್. ದಳವಾಯಿ ಹನುಮಂತಪ್ಪ. ಶೆಟ್ಟಿ ನಾಗರಾಜ್, ಆರ್ ವಿ ತಿಪ್ಪೇಸ್ವಾಮಿ ಚಿಕ್ಕಜೋಗಿಹಳ್ಳಿ ಈರಣ್ಣ, ಇತರರು ಇದ್ದರು.
ಪದಗ್ರಹಣ ಕಾರ್ಯಕ್ರಮ ದಲ್ಲಿಕಾಂಗ್ರೆಸ್ ಪಕ್ಷ ಸೇರಿಕೊಂಡವರು. ಅಹಿಂದ ಜನಪರ ವೇದಿಕೆ ರಾಜ್ಯ ಸಂಚಾಲಕರಾದ ವೀರೇಶ್ ನಾಗಲಾಪುರ, ಕೂಡ್ಲಿಗಿ ತಾಲೂಕು ಭೋವಿ ಸಂಘದ ಉಪಾಧ್ಯಕ್ಷ ವೆಂಕಟೇಶ್, ಬೊಮ್ಮಲಿಂಗಪ್ಪ, ರಾಮದುರ್ಗ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯ ಹುಲಿಗಮ್ಮ ಈರಣ್ಣ, ಚಂದ್ರಶೇಖರಪುರ ವಿ ಬಸಪ್ಪ, ಸೇರಿದಂತೆ ಇತರರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ವಿಶೇಷವಾಗಿ ಒಕ್ಕಲು ರೈತ ಉತ್ಪಾದಕರ ಕಂಪನಿ ನಿಯಮಿತ ನಿರ್ದೇಶಕರಿಂದ ನೂತನವಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಎಸ್.ಸಿ.ಘಟಕದ ಅಧ್ಯಕ್ಷರಾದ ಶ್ರೀಯುತ ಹೆಚ್ ಬುಡ್ಡಾ ರೆಡ್ಡಿಯವರಿಗೆ ಸನ್ಮಾನ ಮಾಡಿದರು..

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
