ಬಿಜೆಪಿಯ ನಗರ ಮತ್ತು ಮಂಡಲ ವತಿಯಿಂದ ಜೀವ ರಕ್ಷಕ ಲಸಿಕಾ ಅಭಿಯಾನ.
ಸಿಂಧನೂರು :ಸ.21.ಭಾರತೀಯ ಜನತಾ ಪಾರ್ಟಿ ನಗರ ಮತ್ತು ಮಂಡಲ ವತಿಯಿಂದ ಸೆಪ್ಟಂಬರ್ 20 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ಯ ಸೇವಾ ಪಾಕ್ಷಿಕ ಚಟುವಟಿಕೆ ಗಳಲ್ಲಿ ಜೀವ ರಕ್ಷಕ ಲಸಿಕಾ ಅಭಿಯಾನವನ್ನು ತಾಲೂಕಿನ ಎ.ಕೆ.ಗೋಪಾಲ ನಗರ ವಾ.ನಂ. 18 ರಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಎ.ಕೆ.ಗೋಪಾಲ ನಗರದ ದೊಡ್ಡಪ್ಪ,ಪಕ್ಷದ ಮುಖಂಡರಾದ ಎನ್.ಶಿವನಗೌಡ ಗೋರೆಬಾಳ, ರಾಜ್ಯ ಯುವ ಕಾರ್ಯದರ್ಶಿ ಅಮರೇಶ ರೈತನಗರ ಕ್ಯಾಂಪ್, ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ಪ್ರೇಮಾ ಸಿದ್ದಾಂತಿ ಮಠ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಶೈಲಜಾ ಷಡಕ್ಷರಪ್ಪ, ನಗರ ಮಂಡಲದ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ್, ಷಿರಾಜ್ ಪಾಷ್, ನಿರುಪಾದಿ ಕೆ, ಸಹನಾ ಹೀರೆಮಠ, ಕೃಷ್ಣಪ್ಪ ರಾಠೋಡ್, ಮಲ್ಲಿಕಾರ್ಜುನ ಕಾಟಗಲ್ಲ, ರವಿ ಉಪ್ಪಾರ ಹಾಗೂ ಪಂಪಾಪತಿ ನಾಯಕ, ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ವರದಿ. ದುಗ್ಗಪ್ಪ ಸಿಂದನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
