ಅಭಾ ಕಾರ್ಡ್ ನೋಂದಣಿ ಮಾಡಿಸಿ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ಅವಕಾಶ ಕಲ್ಪಿಸಿ: ಜಿಲ್ಲಾಧಿಕಾರಿ ಆರ್.ಲತಾ…!!!

ಅಭಾ ಕಾರ್ಡ್ ನೋಂದಣಿ ಮಾಡಿಸಿ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ಅವಕಾಶ ಕಲ್ಪಿಸಿ: ಜಿಲ್ಲಾಧಿಕಾರಿ ಆರ್.ಲತಾ

ಬೆಂಗಳೂರು ಗ್ರಾಮಾಂತರ ಜಿಲ್ಲೆ, : ಪ್ರತಿಯೊಬ್ಬರೂ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ ಡಿಜಿಟಲ್ ಕಾರ್ಡ್ ವಿತರಿಸಲಾಗುತ್ತಿದ್ದು ಇದರಿಂದ ದೇಶದ ಯಾವುದೇ ಭಾಗದಲ್ಲೂ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಆದ್ದರಿಂದ ಅಭಾ ಕಾರ್ಡ್ ನೋಂದಣಿ ಮಾಡಿಸಿ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳಲು ಸಾರ್ವಜನಿಕರಿಗೆ
ಸೂಕ್ತ ಅವಕಾಶವನ್ನು ಕಲ್ಪಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್‌.ಲತಾ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಡೆದ “ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ(ABPMJY-ARK)” ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಅನುಷ್ಠಾನಗೊಳಿಸುವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎ.ಪಿ.ಎಲ್. ಮತ್ತು ಬಿ.ಪಿ.ಎಲ್. ಕಾರ್ಡುದಾರರು ಸೇರಿದಂತೆ ಒಟ್ಟು 8,66,673 ಮಂದಿಯ ಕಾರ್ಡುನ್ನು ಮೂರು ತಿಂಗಳೊಳಗಾಗಿ ಹೊಸದಾಗಿ ಅಭಾ ಕಾರ್ಡುಗಳನ್ನು ನೀಡಲು ಕ್ರಮ ವಹಿಸಬೇಕು. ಡಿಜಿಟಲ್ ಕಾರ್ಡ್ ಮೂಲಕ ಬಿ.ಪಿ.ಎಲ್. ಕುಟುಂಬಗಳು ವರ್ಷದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ನೊಂದಾಯಿತ ಆಸ್ಪತ್ರೆಗಳಲ್ಲಿ ಮಾತ್ರ ಗರಿಷ್ಠ 5 ಲಕ್ಷ ರೂ. ಹಾಗೂ ಎ.ಪಿ.ಎಲ್ ಕುಟುಂಬಗಳಿಗೆ ಗರಿಷ್ಠ 1.50 ಲಕ್ಷ ರೂ. ವರೆಗೆ ಚಿಕಿತ್ಸೆಯ ವೆಚ್ಚ ಪಡೆಯಬಹುದು ಹಾಗೂ ಕೆಲವು ದಿನಗಳ ಮಟ್ಟಿಗೆ ಹಳೆಯ ಕಾರ್ಡುನಲ್ಲೂ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ಉಚಿತ ಆರೋಗ್ಯ ಸೇವೆಯನ್ನು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮೂಲಕವೂ ಪಡೆಯಬಹುದು. ಹೆಲ್ತ್ ಐಡಿಗಾಗಿ ಸಾರ್ವಜನಿಕರು http://abha.abdn.gov.in/register ಮೂಲಕ
ನೊಂದಣಿ ಮಾಡಿಕೊಳ್ಳಬೇಕು ಎಂದರಲ್ಲದೇ ಆಧಾರ್ ಅಥವಾ ಡ್ರೈವಿಂಗ್ ಲೈಸನ್ಸ್ ಅನ್ನು ದಾಖಲೆಗಾಗಿ ನೀಡಬಹುದು, ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಭಾ ರಿಜಿಸ್ಟೆಷನ್ ಮತ್ತು “ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ” ಕಾರ್ಡ್, ಎರಡು ಸೌಲಭ್ಯವಿರುವ ಒಟ್ಟಾಗಿ ಸೇರಿಸಲಾಗಿರುವ “ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ-ಆರೋಗ್ಯ ಕರ್ನಾಟಕ” ಯೋಜನೆ ಕೋ ಬ್ರಾಂಡೆಡ್ ಕಾರ್ಡ್‌ಗಳನ್ನು ಸೆಪ್ಟೆಂಬರ್ 01ರಿಂದಲೇ ಜಿಲ್ಲಾಂದ್ಯಂತ ಆರಂಭವಾಗಿದೆ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಗ್ರಾಮಾ ಒನ್ ಕೇಂದ್ರಗಳಲ್ಲಿ ಅಭಾ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ, ನಗರ ವ್ಯಾಪ್ತಿಯಲ್ಲಿ ಇನ್ನೂ ನೋಂದಣಿ ಕಾರ್ಯವು ಆರಂಭವಾಗಿಲ್ಲ, ಗೂಗಲ್ ಮುಖಾಂತರ ರಿಜಿಸ್ಟ್ರೇಷನ್‌ಗೊಂಡ ಅಭಾ ಕಾರ್ಡ್‌ಗಳು ಸಹ ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗಳ ಜೊತೆ AB-Ark ಯೋಜನೆ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ ಎಂದರಲ್ಲದೆ, ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು
2018 ಮಾರ್ಚ್ 2 ರಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆ ಹಾಗೂ ಕೇಂದ್ರದ ಆಯುಷ್ಮಾನ್ ಭಾರತ್ ಸಂಯೋಜಿಸಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ. ಇದನ್ನು “ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ- ಆರೋಗ್ಯ ಕರ್ನಾಟಕ ಎಂದು ಕರೆಯಲಾಗುತ್ತಿದೆ. ಮತ್ತು ಆಯುಷ್ಮಾನ್, ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ, ಮಕ್ಕಳ ಕಾರ್ಯಕ್ರಮ ಆರೋಗ್ಯ ಕರ್ನಾಟಕ (ಎಬಿ-ಪಿಎಂಜಿಎವೈ) ಆರೋಗ್ಯ ಕಾರ್ಡ್‌ಗೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ಆಭಾ ಕಾರ್ಡ್‌ನಂತೆ 14 ‘ಡಿಜಿಟ್‌ನ ಪ್ರತ್ಯೇಕ ಗುರುತಿನ ಚೀಟಿ ನೀಡಲಾಗುತ್ತದೆ. ಈ ಕಾರ್ಡ್ ನಿಮ್ಮ ಆರೋಗ್ಯದ ಗುಟ್ಟಿನ ಸಂಪೂರ್ಣ ಮಾಹಿತಿಯ ಡಿಜಿಟಲೀಕರಣ ರೂಪವಾಗಿದ್ದು ಆಭಾ ಕಾರ್ಡ್ ಮಕ್ಕಳ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ ಎಂದರು.
ಆಭಾ ಕಾರ್ಡ್ ನೊಂದಣಿಯ ಉಪಯೋಗವೆಂದರೆ ಆಭಾ ಕಾರ್ಡ್ ಇದ್ದವರು ದೇಶದ ಯಾವುದೇ ವೈದ್ಯರಲ್ಲಿ ಚಿಕಿತ್ಸೆಗೆ ಹೋದರೂ ವ್ಯಕ್ತಿಯ ಮಾಹಿತಿ ಹಾಗೂ ಹಿಂದಿನ ಆರೋಗ್ಯ ದಾಖಲೆ ಸಿಗುತ್ತದೆ. ಪ್ರತಿ ಬಾರಿ ಆಸ್ಪತ್ರೆಗೆ ಹೋದಾಗ ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಹೋಗಬೇಕಿಲ್ಲ. ಆಭಾ ಕಾರ್ಡ್‌ ಸಂಖ್ಯೆ ದಾಖಲಿಸಿದರೆ ಸಾಕು ಆರೋಗ್ಯ ವರದಿ ಜೊತೆ ಆಯುಷ್ಮಾನ್ ಭಾರತ್‌ನಂತಹ ಸರ್ಕಾರಿ ಯೋಜನೆ ಸೌಲಭ್ಯ ಪಡೆಯಬಹುದು. ಆರೋಗ್ಯದ ಸ್ಥಿತಿ-ಗತಿ ಪಡೆದಿರುವ ಚಿಕಿತ್ಸೆಯ ಆಯ್ಕೆ, ಮಾಹಿತಿಗಳು ಡಿಜಿಟಲ್ ರೂಪದಲ್ಲಿ ಸಿಗಲಿದೆ. ಆರೋಗ್ಯ ಅಕೌಂಟ್ ಮಾಡಿಸಿದ ಪ್ರತಿಯೊಬ್ಬರಿಗೂ 14 ಡಿಜಿಟ್‌ನ ಯೂನಿಕ್ ಸಂಖ್ಯೆ ಹೊಂದಿರುವ ಕಾರ್ಡ್ ನೀಡಲಾಗುತ್ತದೆ. ಈ ಗುರುತಿನ ಚೀಟಿಯಲ್ಲಿ ಆಯಾಯ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಲಿಂಕ್ ಆಗಿರುತ್ತದೆ.
ಬಿ.ಪಿ.ಎಲ್. ಕಾರ್ಡ್‌ದಾರರು ಎಬಿ-ಎಆರ್‌ಕೆ ಫಲಾನುಭವಿ ವ್ಯಕ್ತಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯ ರೋಗಿ, ಎ.ಪಿ.ಎಲ್. ಕಾರ್ಡ್ ವ್ಯಕ್ತಿ ವರ್ಷಕ್ಕೆ 1.50 ಲಕ್ಷ ಪ್ಯಾಕೇಜ್ ವೆಚ್ಚದ ಶೇಕಡಾ 30 ರಷ್ಟು ನೆರವು(ಶೇ.70ರಷ್ಟು ವೆಚ್ಚ) ರೋಗಿಯೇ ಭರಿಸಬೇಕು. ಆಭಾ ಕಾರ್ಡ್ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಿಸಿಕೊಳ್ಳಬಹುದು. ವೈದ್ಯ ವರದಿ ಇರದಿದ್ದರೂ ಕಾರ್ಡ್ ಮೂಲಕ ವೈದ್ಯರಿಗೆ ಮಾಹಿತಿ ಸಿಗುತ್ತದೆ. ಕುಟುಂಬದವರು, ಸ್ನೇಹಿತರು, ಸಂಬಂಧಿಕರೆಲ್ಲರೂ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಸಾರ್ವಜನಿಕರು ಆಭಾ ಕಾರ್ಡ್ ಗಳನ್ನು ತಮ್ಮ ಹತ್ತಿರದ ಸೇವೆ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಿಕೊಂಡು ಉಚಿತ ಆರೋಗ್ಯ ಸೇವೆಯನ್ನು ಪಡೆಯಬಹುದಾಗಿದೆ ಎಂದರು ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಡಾ. ಬಿ.ಕೆ.ವಿಜಯೇಂದ್ರ, ಜಿಲ್ಲಾ ಕುಷ್ಟರೋಗ ನಿರ್ಮೂಲಗಳಾಧಿಕಾರಿ ಡಾ. ಬಿ.ಎಂ.ಶಾಂತಲಾ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ವಿಠಲ್ ಕಾವಲೇ, ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಕಲಾವತಿ, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend