;

ಸಹಕಾರಿ ಕ್ಷೇತ್ರ ನಿರುದ್ಯೋಗ ನಿವಾರಣೆಯ ಒಂದು ಭಾಗ – ಡಾ.ಚನ್ನಬಸವಸ್ವಾಮಿ…!!!

ಸಹಕಾರಿ ಕ್ಷೇತ್ರ ನಿರುದ್ಯೋಗ ನಿವಾರಣೆಯ ಒಂದು ಭಾಗ – ಡಾ.ಚನ್ನಬಸವಸ್ವಾಮಿ.

ಮಾನ್ವಿ : ಸ.11.ನಗರದ ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಏಳನೇ ಸಾಮಾನ್ಯ ಸಭೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಮಾಜ ಸೇವಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುವುದರ ಮೂಲಕ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶೇಷ ಸನ್ಮಾನಿತರಾಗಿ ಭಾಗವಹಿಸಿ ಮಾತನಾಡಿದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವಸ್ವಾಮಿ ಸಹಕಾರಿ ಕ್ಷೇತ್ರವು ನಿರುದ್ಯೋಗ ನಿವಾರಣೆಯ ಒಂದು ಭಾಗವಾಗಿದೆ. ಇಂದು ಸಣ್ಣಪುಟ್ಟ ವ್ಯಾಪಾರಿಗಳು ಇಂತಹ ಸಹಕಾರಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದರ ಮೂಲಕ ತಮ್ಮ ವ್ಯವಹಾರ ಗಳನ್ನು ಅಭಿವೃದ್ಧಿ ಪಡಿಸಿ ಕೊಳ್ಳುತ್ತಿದ್ದಾರೆ. ಆದರೆ ವಿಶೇಷವಾಗಿ ಮಾನ್ವಿಯ ಶ್ರೀ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯು ಬಂದಂತಹ ಲಾಭದಲ್ಲಿ ಸಮಾಜಪರ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರ ಮೂಲಕ ಸಮಾಜಕ್ಕೆ ವಿಶೇಷ ಸೇವೆಯನ್ನು ಸಲ್ಲಿಸುತ್ತಿದೆ ನಮ್ಮ ಕಾರುಣ್ಯ ಸಂಸ್ಥೆಯ ಸೇವೆಯನ್ನು ಮೆಚ್ಚಿ ವಿಶೇಷ ಗೌರವ ನೀಡುವುದರ ಮೂಲಕ ಬಂದ ಲಾಭದಲ್ಲಿ ಸುಮಾರು 10 ಸಾವಿರ ರೂಪಾಯಿಗಳನ್ನು ಹಾಗೂ ಬಡ ವಿದ್ಯಾರ್ಥಿಗಳಿಗೂ ಕೂಡ ಆರ್ಥಿಕ ಸಹಾಯ ಮಾಡುವ ಈ ಕಾರ್ಯಕ್ರಮ ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಲಿ ಇಂತಹ ಒಂದು ಸಂಸ್ಥೆಯಲ್ಲಿ ನನ್ನ ಸಹೋದರರಾದ ಶಂಭುಲಿಂಗಯ್ಯ ಸ್ವಾಮಿ ಹಿರೇಮಠ ಅವರು ನಿರ್ದೇಶಕರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ನನ್ನ ಹೆಮ್ಮೆಯ ವಿಚಾರ ಈ ಸಂಸ್ಥೆಯ ಎಲ್ಲಾ ಪದಾಧಿಕಾರಿ ಗಳಿಗೂ ಆಡಳಿತ ಮಂಡಳಿಗೂ ಕಾರುಣ್ಯ ಕುಟುಂಬದ ವತಿಯಿಂದ ವಿಶೇಷ ಅಭಿನಂದನೆಗಳು ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪರಮಪೂಜ್ಯ ಶ್ರೀ ಷ.ಬ್ರ.ಡಾ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ನೀಲಗಲ್ ಈ ಸಹಕಾರಿ ಸಂಸ್ಥೆ ಈಗಾಗಲೇ ಎರಡು ಶಾಖೆಗಳನ್ನು ಹೊಂದಿದ್ದು ನಮ್ಮ ರಾಜ್ಯದ್ಯಂತ ಇನ್ನೂ ಅನೇಕ ಶಾಖೆಗಳನ್ನು ಹೊಂದಿ ಈ ಸಂಸ್ಥೆಯ ಸದಸ್ಯರು ಇನ್ನೂ ಹೆಚ್ಚಿನ ಅನುಕೂಲತೆಯನ್ನು ಈ ಸಂಸ್ಥೆಯಿಂದ ಪಡೆದುಕೊಳ್ಳಲಿ ಎಂದು ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ತಿಮ್ಮಯ್ಯ ಶೆಟ್ಟಿ ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು, ಅಧ್ಯಕ್ಷತೆಯನ್ನು ಡಾ.ವೀರಣ್ಣ ಅಧ್ಯಕ್ಷರು ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಜಶೇಖರ ಅಧ್ಯಕ್ಷರು ಸಿಂಧು ಪತ್ತಿನ ಸೌಹಾರ್ದ ಸಹಕಾರಿ ಸಿಂಧನೂರು. ಮಹಾದೇವಪ್ಪ ಪಂಚಮುಖಿ ಸಿಪಿಐ ಮಾನ್ವಿ, ವೆಂಕಟೇಶ ರಾಥೋಡ್ ಜಿಲ್ಲಾ ಸಂಯೋಜಕರು ಸಯುಕ್ತ ಸಹಕಾರಿ ರಾಯಚೂರು, ಸಹಕಾರಿ ನಿರ್ದೇಶಕರುಗಳಾದ ಚಂದ್ರಕಾಂತ ಇಲ್ಲೂರು, ಎಸ್ ಎಚ್ ರಾಮಾಂಜನೇಯ ಶೆಟ್ಟಿ, ಜಿ ಸಂತೋಷ ಬ್ಯಾಗವಾಟ. ಬೆನಕಯ್ಯಶೆಟ್ಟಿ. ಸುದರ್ಶನ ಶೆಟ್ಟಿ. ಬಸವಂತಕುಮಾರ. ಶಂಭುಲಿಂಗಯ್ಯ ಹಿರೇಮಠ. ಡಿ ಶ್ರೀನಿವಾಸ. ಮಲ್ಲಿಕಾರ್ಜುನ ಗೌಡ. ಪಿ ರಾಮರಾಜು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸಿಬ್ಬಂದಿಗಳು ಮತ್ತು ಗ್ರಾಹಕರುಗಳು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;