ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ SFI ಸಂಘಟನೆಯಿಂದ ತಹಸೀಲ್ದಾರ್ ಅವರಿಗೆ ಮನವಿ ……….!!!!!!
ಹರಪನಹಳ್ಳಿ : ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಪೆಡರೇಷನ್ SFI ತೀವ್ರವಾಗಿ ಖಂಡಿಸುತ್ತದೆ.
ಪ್ರತಿ ವರ್ಷ ಪರೀಕ್ಷಾ ಶುಲ್ಕದಲ್ಲಿ ಸರ್ಕಾರದ ಶುಲ್ಕ ವಿನಾಯಿತಿ ನೀಡುತ್ತಿದ್ದು.ಈ ವರ್ಷ ಏಕಾಏಕಿ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ತುಂಬಲು ಆದೇಶ ಮಾಡಿರುವುದು ಸರಿಯಲ್ಲ.
ಬಡ ದಲಿತ ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕಾಲೇಜು ಸ್ನಾತಕೋತ್ತರ ಅಭ್ಯಾಸ ಮಾಡುತ್ತಿದ್ದು. sc /st .OBC ೨ನೇ ಮತ್ತು ೪ ನೇ ಸಮಿಸ್ಟರ್ ಓದುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಇಲ್ಲಿಯವರೆಗೆ ಸರ್ಕಾರ ವಿದ್ಯಾರ್ಥಿವೇತನ ಬಿಡುಗಡೆ ಮಾಡಿಲ್ಲ.
150 ರೂ ಪರೀಕ್ಷಾ ಶುಲ್ಕ ಇದ್ದದ್ದು 1500 ರೂ ಹೆಚ್ಚಳ ಮಾಡಿರುವದುನ್ನು ಕೂಡಲೇ ಕಡಿತ ಮಾಡಬೇಕು.ಹಾಗೂ ಪರೀಕ್ಷಾ ಶುಲ್ಕ ತುಂಬಲು ಅವಧಿ ವಿಸ್ತರಣೆ ಮಾಡಬೇಕೆಂದು ಹರಪನಹಳ್ಳಿ ಪ್ರಾಚಾರ್ಯರು ಮೂಲಕ ಕುಲ ಸಚಿವರಿಗೆ ಮನವಿ ನೀಡಲಾಗಿದೆ.
ಈ ಸಂದರ್ಭದಲ್ಲಿ SFI ನ ವೆಂಕಟೇಶ್ ನಾಯ್ಕ್ ತಾಲ್ಲೂಕು ಕಾರ್ಯದರ್ಶಿ, ಪ್ರಸನ್ನ, ಸಂಜು, ಬಸರಾಜ್, ಅಂಜು, ಶಿವುಕುಮಾರ. ಸೋಮನಾಥ. ವಿದ್ಯಾರ್ಥಿಗಳಾದ,ವಡಿಕೆಪ್ಪ. ಹನುಮಂತ,ಬಸಪ್ಪ,ವೆಂಕಟೇಶ, ಗೋವಿಂದ,ಆಶಾ,ಸಾವಿತ್ರಿ,
ರೇಷ್ಮಾ.ಕಲ್ಪನಾ, ಇತರರು ಇದ್ದರು.

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
