ಸಾರ್ವಜನಿಕರ ರಸ್ತೆ ಕಾಮಗಾರಿ ದುರಸ್ತಿಗೊಳಿಸಲು ಮನವಿ.
ಕಾನಹೊಸಹಳ್ಳಿ:- ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿಗೆ ಸೇರಿದ ಚಿಕ್ಕಜೋಗಿಹಳ್ಳಿ ಗ್ರಾಮದ ಕೆಇಬಿ ವೃತ್ತದ ಮುಂಭಾಗದಿಂದ ಎಂಬಿ ಅಯ್ಯನಹಳ್ಳಿ ಗ್ರಾಮ ಕ್ಕೆ ಹೋಗುವ ಸಾರ್ವಜನಿಕರ ಮುಖ್ಯರಸ್ತೆಯಲ್ಲಿ ಮಳೆಯ ನೀರು ನಿಂತು, ವಾಹನಗಳ ಸಂಚಾರಕ್ಕೂ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಬಹಳ ಸಮಸ್ಯೆಯಾಗಿರುತ್ತದೆ, ಮಳೆ ಬಂದರೆ ಸಾಕು ಮಳೆ ನೀರು ಮುಂದಕ್ಕೆ ಹೋಗದೇ ರಸ್ತೆಯಲ್ಲಿ ನಿಂತು ದಾರಿಯಲ್ಲಿ ಸಂಚರಿಸುವ ವಾಹನಗಳ ಚಕ್ರದಲ್ಲಿ ಬಿದ್ದ ಕೆಸರು ನೀರು ಓಡಾಡುವ ಶಾಲಾಮಕ್ಕಳಿಗೆ ಸಾರ್ವಜನಿಕರಿಗೆ ಸಿಡಿದು ಗಲೀಜಿನ ವಾತಾವರಣ ಸೃಷ್ಟಿಯಾಗಿದೆ. ಕಾರಣ ಮಳೆಯ ನೀರು ಸಾರ್ವಜನಿಕ ರಸ್ತೆಯಲ್ಲಿ ನಿಲ್ಲದಂತೆ ಒಂದು ಉತ್ತಮ ಸುವ್ಯವಸ್ಥೆ ರೀತಿಯಲ್ಲಿ ರಸ್ತೆ ಕಾಮಗಾರಿಯನ್ನು ಮಾಡಿಸಿ ಇಲ್ಲಿ ಓಡಾಡುವ ವಾಹನಗಳ ಸಂಚಾರಕ್ಕೂ ಹಾಗೂ ಸಾರ್ವಜನಿಕರಿಗೂ ಮತ್ತು ಅಕ್ಕಪಕ್ಕದಲ್ಲಿರುವ ಅಂಗಡಿ ಮಾಲೀಕರಿಗೂ ಅನುಕೂಲ ಮಾಡಿಕೊಡಬೇಕಾಗಿ ಗ್ರಾಮದ ಮುಖಂಡರು ಸಾರ್ವಜನಿಕರು ವಿವಿಧ ಪರ ಸಂಘಟನೆಯ ಮುಖಂಡರು ಮಾಧ್ಯಮದ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
