;

ಇಟ್ಟಿಗಿ ಗ್ರಾಮ ಪಂಚಾಯತಿ ಮತ್ತು ಗ್ರಾಮದ ದೈವಸ್ಥರಿಂದ ಭಾಗಿನ ಅರ್ಪಣೆ…!!!

ಇಟ್ಟಿಗಿ ಗ್ರಾಮ ಪಂಚಾಯತಿ ಮತ್ತು ಗ್ರಾಮದ ದೈವಸ್ಥರಿಂದ ಭಾಗಿನ ಅರ್ಪಣೆ.

ದಿ:31/08/2022ರಂದು ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆಡಳಿತ ಮತ್ತು ಗ್ರಾಮದ ದೈವಸ್ಥರ ಸಂಯುಕ್ತಾಶ್ರಯದಲ್ಲಿ ಹರಪನಹಳ್ಳಿ ರಸ್ತೆ ಕೆರೆಹಳ್ಳದಲ್ಲಿರುವ ಚೆಕ್ ಡ್ಯಾಮ್ ಮಳೆಯಿಂದಾಗಿ ತುಂಬಿದ್ದರಿಂದ ಶ್ರೀ ಗಂಗಮಾತೆಗೆ ವಿಶೇಷ ಪೂಜೆ ಮತ್ತು ಭಾಗೀನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿಮಹಾಬಲೇಶ್ವರ ಇವರಿಂದ ಧಾರ್ಮಿಕ ಪೂಜೆ ನಡೆಸಿದ ನಂತರ ಗಂಗಾದೇವಿಗೆ ಭಾಗಿನ ಅರ್ಪಿಸಲಾಯಿತು.ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಮಾದ್ದಾನಸ್ವಾಮಿ ಹಾಗೂ ಸರ್ವಸದಸ್ಯರುಗಳು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಎಂ ಪ್ರಕಾಶ್ & ಸಿಬ್ಬಂದಿಗಳು,ಗ್ರಾಮದ ದೈವಸ್ಥರುಗಳು, ಗ್ರಾಮದ ಗಣ್ಯಮಾನ್ಯರು ಪಾಲ್ಗೊಂಡು ಪೂಜಾ ಕಾರ್ಯವನ್ನು ಯಶಸ್ವಿ ಗೊಳಿಸಿದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;