;

ತುಂಗಭದ್ರಾ ಎಡದಂಡೆ ಕಾಲುವೆ ಮಳೆಗೆ ತಡೆಗೋಡೆ ಕುಸಿತ…!!!

ತುಂಗಭದ್ರಾ ಎಡದಂಡೆ ಕಾಲುವೆ ಮಳೆಗೆ ತಡೆಗೋಡೆ ಕುಸಿತ.

ಸಿಂಧನೂರು :ಅ. 31.ತುರ್ವಿಹಾಳ ಪಟ್ಟಣದ ಶ್ರೀನಿವಾಸ ಕ್ಯಾಂಪ್ ಬಳಿ ತುಂಗಭದ್ರಾ ಎಡದಂಡೆ ಕಾಲುವೆ 57 ನೇ ಮೈಲ್ 44ನೇ ಉಪ ಕಾಲುವೆ ಹತ್ತಿರ ಹಳ್ಳದ ತಡೆಗೋಡೆ ನಿರಂತರ ಮಳೆಗೆ ಕುಸಿತ ಆಗಿರುವುದರಿಂದ ಸ್ಥಳಕ್ಕೆ ತುಂಗಭದ್ರಾ ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ವೀಕ್ಷಣೆ ಮಾಡಿ ನಂತರ ಇನ್ನೂ ಮಳೆ ಸುರಿದರೆ ಕಾಲುವೆ ದಂಡೆಗೆ ತೊಂದರೆಯಾಗಿ ಬಹಳಷ್ಟ ಬೆಳೆಗಳು ನಷ್ಟ ಆಗುತ್ತಿತ್ತು.ಸುದ್ದಿ ತಿಳಿದ ಕೂಡಲೇ ಇಂದು ಕಾಡಾ ಅಧ್ಯಕ್ಷರು ಬೆಳಿಗ್ಗೆಯಿಂದ ಸ್ಥಳದಲ್ಲೇ ಕೂತು ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿ ಪಡಿಸುವಂತೆ ಸೂಚಿಸಿ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕೂಡಲೆ ಸ್ಥಳಕ್ಕೆ ಹಿಟಾಚಿ ತರಿಸಿ ಕೆಲಸ ಶುರು ಮಾಡಿಸಿದರು.

ಈ ಸಂಧರ್ಭದಲ್ಲಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷರಾದ ಮಧ್ವರಾಜ್ ಆಚಾರ್ಯ, ಟಿ. ಸುಬ್ಬಾರಾವ್, ಅಮರೇಶ ತಿಡಿಗೋಳ, ಯಶ್ವಂತ ತಿಡಿಗೋಳ, ಪರ್ವತರೆಡ್ಡಿ ಹತ್ತಿಗುಡ್ಡ ರೈತ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;