ಅದ್ದೂರಿಯಾಗಿ ನಡೆದ ಶ್ರೀದುಗ್ಗಮ್ಮ ದೇವಿ ಜಾತ್ರಾ ಮಹೋತ್ಸವ.
ಸಿಂಧನೂರು : ಅ. 30. ತಾಲೂಕಿನ ಮಲ್ಲಾಪೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇತಿಹಾಸ ಪ್ರಸಿದ್ಧ ಶ್ರೀ ದುಗ್ಗಮ್ಮದೇವಿ ಜಾತ್ರೆ ಮಹೋತ್ಸವ ಗಣೇಶ ಚತುರ್ಥಿ ದಿವಸದಂದು ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದ್ದವು. ಜಾತ್ರಾ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ದೇವಾಲಯಕ್ಕೂ ಕೂಡ ವಿಶೇಷ ದಿಪಾಂಲಕಾರ ಮಾಡಲಾಗಿತ್ತು. ಸಂಜೆ ವೇಳೆಯಲ್ಲಿ ಗಂಗೆಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ ತನು ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಬಂದು
ದೇವಿಗೆ ಪೂಜೆ ಸಲ್ಲಿಸಿದರು.

ತಾಲೂಕಿನ ವಿವಿಧ ಕಡೆಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದರು.ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಪೂಜಾರಿ ಬಸನಗೌಡ, ವೆಂಕೋಬ, ಯಂಕನಗೌಡ ಕಾರಗಿನೂರು, ಹನುಮನಗೌಡ ಮಾ.ಪಾ, ಚೆನ್ನಪ್ಪ ಕೆಂಗುಟಿ, ಶರಣಪ್ಪ ತಳವಾರ, ಬಸನಗೌಡ ಕಾರಗಿನೂರು,ಗ್ರಾಮ ಪಂಚಾಯತ್ ಸದಸ್ಯರಾದ ಯಮನಪ್ಪ ನಾಯಕ, ಲಕ್ಷೀ ವೆಂಕಟೇಶ, ಲಚಮರಡ್ಡಿ ಜೂಲದ, ಪರಶುರಾಮ, ತಿಮ್ಮನಗೌಡ, ಶೇಖರಪ್ಪ ಕುರುಬರು, ತಿಪ್ಪಣ್ಣ ಚಲುವಾದಿ, ದುಗ್ಗಪ್ಪ ಎಸ್ಡಿಎಂಸಿ ಅಧ್ಯಕ್ಷ, ಶರಣಬಸವ, ಮಾಜಿ. ಗ್ರಾ.ಪಂ.ಸದಸ್ಯರಾದ ಮೌಲ್ಲಪ್ಪ ಭಂಡಾರಿ,ಪ್ರಕಾಶಕಾರಗಿನೂರು, ಮಂಜುನಾಥ ಹುಣಸೆಗಿಡದ, ಭಕ್ತಾಧಿಗಳು ಭಾವಹಿಸಿದ್ದರು.

ಶಾಂತಿಗೆ ಹೆಸರು ವಾಸಿಯಾದ, ಭಕ್ತರ ಆಸೆಗಳನ್ನು ಈಡೇರಿಸುವ ಶ್ರೀ ದೇವಿಯ ಜಾತ್ರೆಗೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಬೇಡಿಕೊಂಡ ತಮ್ಮ ತಮ್ಮ ಹರಕೆಗಳನ್ನು ಎಲೆಚಟ್ಟು ಕಟ್ಟಿಸುವುದು, ಹುಡಿ ತುಂಬುವುದು,ದಿಡ್ ನಮಸ್ಕಾರ ಹಾಕುವುದು, ಅಭಿಷೇಕ ಇನ್ನಿತರ ಪೂಜಾ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ತಮ್ಮ ತಮ್ಮ ಗಂಡನ ಮನೆಯಿಂದ ಜಾತ್ರೆಯ ನಿಮಿತ್ಯ ತವರು ಮನೆಗೆ ಬಂದ ಮಹಿಳೆಯರು ಬಗೆ ಬಗೆಯ ಬಣ್ಣದ ಸೀರೆಯನ್ನುಟ್ಟು ಕಳಸದೊಂದಿಗೆ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಹಾಲುಮತದ ಡೊಳ್ಳು ಕುಣಿತ ನೋಡುಗರ ಕಣ್ಮನ ಸೆಳೆಯಿತು. ಜಾತ್ರೆಯ ಹಿಂದಿನ ರಾತ್ರಿ ಭಜನಾ ಮಂಡಳಿಗಳು ದೇವಸ್ಥಾನದ ಮುಂಭಾಗದಲ್ಲಿ ರಾತ್ರಿಯಿಡಿ ವಿವಿಧ ಭಜನಾ ಪದಗಳನ್ನು ಹಾಡಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
