ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು – ಶಾಸಕ ನಾಡಗೌಡ.
ಸಿಂಧನೂರ ಅ.28.ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದೆ.ಕಾಂಗ್ರೆಸ್ ದೇಶದಲ್ಲಿಯೇ ಮುಳುಗುವ ಹಡಗುಗಾಗಿದೆ. ಅದರಲ್ಲಿ ಯಾರು ಹತ್ತಲು ಹೋಗುವುದಿಲ್ಲ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ವಿವೇರಾ ಗ್ರಾಂಡ್ ಹೋಟೆಲ್ ನಲ್ಲಿ ರಾಷ್ಟ್ರೀಯ ಪಕ್ಷ ಬಿಟ್ಟು ಜೆಡಿಎಸ್ ಪಕ್ಷ ಸೇರಿದ ಮುಖಂಡರನ್ನು,ಯುವಕರನ್ನು ಪಕ್ಷದ ಹೆಗಲು ಪಟ್ಟಿ ಹಾಕಿ ಸ್ವಾಗತ ಮಾಡಿಕೊಂಡು ಮಾತನಾಡಿದ ಅವರು 40 ರಿಂದ 50 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ದುಡಿದವರೂ ಇಂದು ಪಕ್ಷದ ಸದಸ್ಯತ್ವದಿಂದ ದೂರವಾಗುತ್ತಿದ್ದಾರೆ. ರಾಹುಲ್ ಗಾಂಧಿ ಒಬ್ಬ ಯುವಕ ಅವರ ಕೈಯಲ್ಲಿ ಅಧಿಕಾರ ಕೊಡಲು ಯಾರು ಒಪ್ಪುವುದಿಲ್ಲ. ತಾಲೂಕಿನ ಕಾಂಗ್ರೆಸ್ ನಲ್ಲಿ ಮೂರು ಜನ ಅಕಾಂಕ್ಷಿಗಳು ಇದ್ದಾರೆ. ಅವರವರ ಕಿತ್ತಾಟದಿಂದ ನಾನು ನಿಮ್ಮೆಲ್ಲರ ಆರ್ಶಿವಾದದಿಂದ ಮತ್ತೊಮ್ಮೆ ಶಾಸಕನಾಗುವುದು ಶತಸಿದ್ದ. ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ, ಕಾಂಗ್ರೆಸ್ ನ ಗುಂಪುಗಾರಿಕೆಯಿಂದ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುವುದು ನಿಶ್ಚಿತ, ಅವರು ಮುಖ್ಯಮಂತ್ರಿ ಯಾದರೆ ನಾನು ಮಂತ್ರಿಯಾಗುತ್ತೇನೆ ಎಂದು ಹೇಳಿದರು.
ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ನನ್ನ ಮತ್ತು ಪಕ್ಷದ ಮೇಲೆ ಅಪಪ್ರಚಾರ ಮಾಡಿದರೂ, ಪ್ರಮುಖ ಮುಖಂಡರು ಪಕ್ಷ ತೊರೆದು ದೂರವಾದರೂ, ಆದರೆ ಯುವಕರ ಪಡೆಯಿಂದ 16 ಸಾವಿರ ಮತಗಳ ಅಂತರದಿಂದ ಅದು ನಗರದಲ್ಲಿ 2 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಶಾಸಕನಾಗಿ ಏನೇನು ಕೆಲಸ ಮಾಡಬೇಕೋ ಅವೆಲ್ಲವೂ ಮಾಡಿ ತೋರಿಸಿದ್ದೆನೆ. ನೀವುಗಳು ಪಕ್ಷ ಹಾಗೂ ನನ್ನ ಮೇಲೆ ಅಭಿಮಾನ ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಬಂದ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಮಾಡುತ್ತೇನೆ ಎಂದರು.

ತಾಲೂಕಿನಾಧ್ಯಂತ ಪೋಲಿಸ್ ಸ್ಟೇಷನ್, ಕೆ.ಇ.ಬಿ, ಮಿನಿ ವಿಧಾನಸೌಧ, ಹೈಟೆಕ್ ಪಶು ಆಸ್ಪತ್ರೆ, 8 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ,ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಗಾರ್ಡನ್,12 ಕೋಟಿ ವೆಚ್ಚದ ತಾಯಿ ಮಕ್ಕಳ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ,ಬಸ್ ನಿಲ್ದಾಣ, ರಂಗಮಂದಿರ, ವಾಲ್ಮೀಕಿ ಹಾಗೂ ಅಂಬೇಡ್ಕರ ಭವನಗಳು, ಪ.ಜಾತಿ ಪ.ಪಂಗಡದ ಮುರಾರ್ಜಿ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗ ಮಕ್ಕಳ ವಸತಿ ಶಾಲೆಗಳು, ಸರ್ಕಾರಿ ಆಸ್ಪತ್ರೆಯ ಕಟ್ಟಡ ಹಾಗೂ ವಸತಿ ಗೃಹಗಳು,ಪಿಕಾಪ್ ಡ್ಯಾಮಗಳು,ಬ್ರಿಡ್ಜ್ ಗಳು ಸಿಸಿ.ರಸ್ತೆಗಳು 450 ಶಾಲಾ ಹೊಸ ಕಟ್ಟಡಗಳು, ಇವೆಲ್ಲ 90% ಅಬಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಿದ್ದೇನೆ. ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ಇನ್ನೂಳಿದ 10% ಅಭಿವೃದ್ಧಿ ಕೆಲಸ ಮಾಡಿ ಮಾದರಿ ಕ್ಷೇತ್ರ ಮಾಡುವೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ, ನಗರಸಭೆ ಸದಸ್ಯ ಚಂದ್ರುಮೈಲಾರ,ದಾಸರಿ ಸತ್ಯನಾರಾಯಣ, ನದಿಮುಲ್ಲಾ, ಅಭಿಷೇಕ ನಾಡಗೌಡ, ಲಿಂಗರಾಜ ಹೂಗಾರ, ಶಿವನಗೌಡ ಗೋರೆಬಾಳ, ದೇವೇಂದ್ರಗೌಡ, ಅಲ್ಲಮಪ್ರಭು ಪೂಜಾರಿ,ಎಸ್.ಪಿ. ಟೇಲರ್, ಮಹಾವೀರ ಜೈನ, ಆಸೀಪ್ ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
