;

ಸುಳ್ಳು ಅಪಪ್ರಚಾರ ಮಾಡುವವರಿಗೆ ಅಭಿವೃದ್ಧಿ ಕೆಲಸಗಳೆ ಉತ್ತರ – ಶಾಸಕ ನಾಡಗೌಡ…!!!

ಸುಳ್ಳು ಅಪಪ್ರಚಾರ ಮಾಡುವವರಿಗೆ ಅಭಿವೃದ್ಧಿ ಕೆಲಸಗಳೆ ಉತ್ತರ – ಶಾಸಕ ನಾಡಗೌಡ

ಸಿಂಧನೂರು.ಆ.28. ಕಾಂಗ್ರೆಸ್ ನವರು ನನಗೆ ನಗರದ ಜನತೆ ಮತ ನೀಡಿಲ್ಲ ಎಂದು ನಗರಕ್ಕೆ ಅನುದಾನ ಕೊಡುತ್ತಿಲ್ಲ ಎಂದು ನನ್ನ ಮೇಲೆ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ನಾನು ಮಾಡಿರುವ ಗ್ರಾಮೀಣ ಭಾಗದ ಮತ್ತು ನಗರದಲ್ಲಿನ ಅಭಿವೃದ್ಧಿಕೆಲಸಗಳೇ ಉತ್ತರ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ಕೆ.ಆರ್.ಐ.ಡಿ.ಎಲ್ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಸಿಂಧನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶ್ರೀನಿವಾಸ ಕ್ಯಾಂಪ್ ನಲ್ಲಿ 21ಲಕ್ಷ, ಸುಲ್ತಾನಪೂರ ಗ್ರಾಮದಲ್ಲಿ 20ಲಕ್ಷ, ಜವಳಗೇರಾ ಗ್ರಾಮದಲ್ಲಿ 82 ಲಕ್ಷ, ಆರ್.ಹೆಚ್ ಕ್ಯಾಂಪ್‌ ನಂ-1ರಲ್ಲಿ 42ಲಕ್ಷ , ಈರಣ್ಣಕ್ಯಾಂಪ್ ನಲ್ಲಿ 19ಲಕ್ಷ , ಆರ್.ಹೆಚ್ ಕ್ಯಾಂಪ್ ನಂ -4 ರಲ್ಲಿ 33ಲಕ್ಷ, ಆರ್.ಹೆಚ್ ಕ್ಯಾಂಪ್ ನಂ -5 ರಲ್ಲಿ 62ಲಕ್ಷ, ಆರ್. ಹೆಚ್ ಕ್ಯಾಂಪ್ ನಂ-2 ರಲ್ಲಿ 42ಲಕ್ಷ, ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣದ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ನಗರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುವ ಉದ್ದೇಶದಿಂದ ಕಾಂಗ್ರೆಸ್ ನ ನಗರಸಭೆ ಅಧ್ಯಕ್ಷರ ಜೊತೆಗೂಡಿ ಎಲ್ಲಾ ವಾರ್ಡ್ ಗಳಲ್ಲಿ ಸುತ್ತಾಡಿ ತೀರ್ಮಾನ ಮಾಡಿ ಕಾಮಗಾರಿಗಳನ್ನು ಅಪ್ರುಲ್ ಗೆ ಕಳಿಸಿದ್ದೇವೆ.ಆದರೆ ನಗರಸಭೆಯಲ್ಲಿ ಇಂಜಿನಿಯರ್ ಗಳ ಕೊರತೆಯ ಸಲವಾಗಿ ನಗರಸಭೆಗೆ ಬಂದ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು, ಆದರೆ ಕಾಂಗ್ರೆಸ್ ನ ಸದಸ್ಯರು ಮತ್ತು ಅಧ್ಯಕ್ಷರು ತಮ್ಮದೇ ಪಕ್ಷದ ತಾಲೂಕಿನ ಹೈಕಮಾಂಡ್ ಮಾತು ಕೇಳಿ ಕಾಮಗಾರಿಗಳು ಬೇಗ ಮುಗಿಯಬಾರದು ಎಂಬ ಉದ್ದೇಶದಿಂದ ಕೋರ್ಟ್ ನಲ್ಲಿ ಸ್ಟೇ ಹೋಗಿದ್ದಾರೆ ಎಂದರು.

ರೈತ ನಗರ ಕ್ಯಾಂಪ್ ನಲ್ಲಿ ಸುಮಾರು ವರ್ಷಗಳಿಂದ ರಸ್ತೆ ಹದಗೆಟ್ಟಿತ್ತು ನಾನು ಶಾಸಕನಾದ ಮೇಲೆ ಪಿ.ಎಂ.ಜಿ. ಎಸ್.ವಾಯ್ ಯಲ್ಲಿ ಪಕ್ಕ ರಸ್ತೆ ಮಾಡಿಸಿದ್ದೇನೆ, ಜಿಲ್ಲಾ ಪಂಚಾಯತ್ ಕಡೆಯಿದ 8ಲಕ್ಷ ರೂಪಾಯಿಗಳಲ್ಲಿ ಕೆಲಸ ಮಾಡಲಾಗಿತ್ತು.ಈಗ ಮತ್ತೆ ಹದಗೆಟ್ಟಿದೆ,ಮತ್ತೆ 8ಕಿ ಮೀ ರಸ್ತೆಗೆ 3.5ಕೋಟಿ ಅನುದಾನ ಇಟ್ಟಿದ್ದೇವೆ ಟೆಕ್ನಿಕಲ್ ಸಮಸ್ಯೆಯಿಂದ ತಡೆ ಹಿಡಿಯಲಾಗಿದೆ. ಬಗೆಹರಿದ ಮೇಲೆ ಕೆಲಸ ಪ್ರಾರಂಭ ಮಾಡಲಾಗುವುದು. ಚಿರತ್ನಾಳ ಬೊಮ್ಮನಾಳ ನಡುವೆ, ದೇವರಗುಡಿ ಪಗಡದಿನ್ನಿ ನಡುವಿನ ಸೇತುವೆಯನ್ನು ಅದಷ್ಟ ಬೇಗ ಕೆಲಸ ಮಾಡಲಾಗುವುದೆಂದರು.

ಈ ವೇಳೆಯಲ್ಲಿ ವಿದ್ಯೆ ಕಲಿಸಿದ ಗುರುಗಳಾದ ಅಮರೇಗೌಡ ಅವರಿಗೆ ಶಾಸಕ ವೆಂಕಟರಾವ್ ನಾಡಗೌಡ ಸನ್ಮಾನಿಸಿ ಗೌರವಿಸಿ ಗುರುಗಳಿಂದ ಆರ್ಶಿವಾದ ಪಡೆದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ್ ನಾಡಗೌಡ, ಚಂದ್ರು ಭೂಪಾಲ್ ನಾಡಗೌಡ, ವೆಂಕಟೇಶ್ ನಂಜಲದಿನ್ನಿ, ಗ್ರಾ.ಪಂ.ಅಧ್ಯಕ್ಷ ಅಮರಮ್ಮ, ಗ್ರಾ.ಪಂ. ಉಪಾಧ್ಯಕ್ಷ ನಾಗಮ್ಮ, ಯಂಕರಡ್ಡಿ, ಮಲ್ಲೇಶ್, ನಾಗರಾಜ, ವಿರುಪಣ್ಣ, ಚಂದ್ರಪ್ಪ, ಶರಣೆಗೌಡ ಪೊಲೀಸ್ ಪಾಟೀಲ್, ವೀರಭದ್ರಪ್ಪ, ಚಂದ್ರಶೇಖರ ನಾಯಕ್, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;