ಭೀಮನಬಂಡೆ: ಮಹಿಳೆಯರಿಗಾಗಿ ವಿಚಾರಸಂಕಿರಣ
ಹಿರಿಯೂರು, ಆಗಸ್ಟ್ 28: ಇಲ್ಲಿನ ಭೀಮನಬಂಡೆಯಲ್ಲಿ ಮಹಿಳೆಯರಿಗಾಗಿ ವಿಚಾರ ಸಂಕಿರಣವನ್ನು ಕಾಂಗ್ರೆಸ್ ಮುಖಂಡರಾದ ಶ್ರೀ ಬಿ ಸೋಮಶೇಖರ್ ಅವರು ಆಯೋಜಿಸಿದ್ದರು.
” ಹೆಣ್ಣು ಈ ದೇಶದ ಶಕ್ತಿ” ಎಂಬ ವಿಷಯದ ಕುರಿತು ಯಾಜ್ಞವಲ್ಕರ್ ಶಾಲೆಯ ಸಭಾಂಗಣದಲ್ಲಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
“ಮಹಿಳೆಯರು ಈ ದೇಶದ ಶಕ್ತಿ. ಅವರು ಜಾಗೃತರಾದಾಗ ದೇಶ ಅಭಿವೃದ್ಧಿಯಾಗುತ್ತದೆ. ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕುʼ ಎಂದು ಸೋಮಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ವಿಚಾರ ಸಂಕಿರಣದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ ಟಿ ರವಿ, ಶಶಿಕಲಾ ರವಿಶಂಕರ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು…
ವರದಿ. ಸುರೇಶ್. ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
