;

ಗಬ್ಬೆದ್ದು ನಾರುತ್ತಿದೆ ಭೀಮಸಮುದ್ರ ದಲಿತರ ಕಾಲೋನಿ.ಗುಂಡುಮುಣಗು.ಗ್ರಾ.ಪಂ.ಗೆ.ಜನರ ಹಿಡಿಶಾಪ ಕಣ್ಮುಚ್ಚಿ ಕುಳಿತ ತಾಲೋಕು (EO) ಮೇಲಾಧಿಕಾರಿಗಳು…!!!

ಗಬ್ಬೆದ್ದು ನಾರುತ್ತಿದೆ ಭೀಮಸಮುದ್ರ ದಲಿತರ ಕಾಲೋನಿ.ಗುಂಡುಮುಣಗು.ಗ್ರಾ.ಪಂ.ಗೆ.ಜನರ ಹಿಡಿಶಾಪ

ಕೂಡ್ಲಿಗಿ ತಾಲೂಕು ಭೀಮಸಮುದ್ರ ಗ್ರಾಮದ ದಲಿತರ ಕಾಲೋನಿ.

ಗ್ರಾಮದ ದಲಿತರ ಕಾಲೋನಿ ಎಂದು ನಿರ್ಲಕ್ಷಿಸಿದ್ದಾರೆಯೇ???

ಖಾನಹೊಸಳ್ಳಿ.. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಸಮುದ್ರ ಗ್ರಾಮದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ದಲಿತ ಕಾಲೋನಿ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ನಿವಾಸಿಗಳು ಆರಂಭಿಸಿದ್ದಾರೆ.

ಸುಮಾರು 70 ಮನೆಗಳು ಇರುವ ದಲಿತ ಕಾಲೋನಿಯಲ್ಲಿ ಅವೈಜ್ಞಾನಿಕ ಕಳಪೆ ರಸ್ತೆ ಕಾಮಗಾರಿಯಿಂದ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಸರಿಯಾಗಿ ನೀರು ಹರಿಯದೆ ರಸ್ತೆಯ ಮೇಲೆ ನಿಂತು ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿ ಕಾಯಿಲೆ ಹರಡುವ ತಾಣವಾಗಿ ಈ ಕಾಲೋನಿ ಪರಿಣಮಿಸಿದೆ.

ಇದೇ ಕಾಲೊನಿಗೆ ಒಂದೇ ಕುಡಿಯುವ ನೀರಿನ ಟ್ಯಾಂಕ್ ಇದ್ದು. ಅದು ಕೂಡ ದುರಾವಸ್ಥೆಯಲ್ಲಿದೆ. ಟ್ಯಾಂಕ್ ಶೀಥಿಲವಾಗಿದ್ದು ಸಿಮೆಂಟ್ ಕಿತ್ತುಕೊಂಡಿದ್ದು. ಕೇವಲ ಕಬ್ಬಿಣದ ತುಕ್ಕು ಮಾತ್ರ ಉಳಿದಿದೆ. ಆ ನೀರನ್ನು ಕುಡಿದು ಕಾಲೋನಿಯ ಹಲವಾರು ಜನರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ನಿವಾಸಿಗಳು ಗ್ರಾಮ ಪಂಚಾಯಿತಿಗೆ ಹಿಡಿಶಾಪ ಹಾಕಿದ್ದಾರೆ.

ಇಡೀ ಗ್ರಾಮದ ಬೇರೆ ಬೇರೆ ಕಾಲೋನಿಗಳ ಬೀದಿ ದೀಪಗಳು ಸರಿ ಇದೆ. ಆದರೆ ವಿಪರ್ಯಾಸ ಎಂಬಂತೆ ದಲಿತ ಕಾಲೋನಿಯಲ್ಲಿ ಮಾತ್ರ ಬಿದಿ ದ್ವೀಪ ರಾತ್ರಿಯ ವೇಳೆ ಉರಿಯುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಕತ್ತಲಲ್ಲಿಯೇ ಸಂಚಾರಿಸುವಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ದಲಿತಕೆರಿ ಎನ್ನುವ ಕಾರಣಕ್ಕೆ ಗ್ರಾಮದ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಾರೆ ಎಂದು ಕಾಲೋನಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲೋನಿಯಲ್ಲಿರುವ ರಸ್ತೆ ನೀರಿನ ಟ್ಯಾಂಕಿ ಹಾಗೂ ಬೀದಿ ದೀಪಗಳ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಫೋನ್ ಮಾಡಿ ಮಾತನಾಡಿದಾಗ ಸರಿಯಾಗಿ ಸ್ಪಂದಿಸದೆ ದರ್ಪದ ಮಾತುಗಳನ್ನಾಡಿ ಗ್ರಾಮಕ್ಕೆ ಬರುವುದಿಲ್ಲವೆಂದರೆ ಏನು ಮಾಡುತ್ತೀರಿ?ಎಂದು ದಲಿತ ನಿವಾಸಿಗಳಿಗೆ ಅವಾಜ್ ಹಾಕುತ್ತಿದ್ದಾರೆ. ದಲಿತ ಕಾಲೋನಿಯ ಹಲವಾರು ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೂ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಬೇಕು ಬೇಕಂತಲೇ ನಿರ್ಲಕ್ಷ ವಹಿಸಿದ್ದಾರೆ ಎಂದು ತಿಳಿಸಿದರು…

ವರದಿ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *