;

ಒಕ್ಕಲು ರೈತ ಉತ್ಪಾದಕರ ಸಂಘ ಕಂಪನಿ ಉದ್ಘಾಟನಾ ಸಮಾರಂಭ…!!!

ಒಕ್ಕಲು ರೈತ ಉತ್ಪಾದಕರ ಸಂಘ ಕಂಪನಿ ಉದ್ಘಾಟನಾ ಸಮಾರಂಭ.
ಕಾನಹೊಸಹಳ್ಳಿ : ರೈತ ಉತ್ಪಾದಕರ ಸಂಸ್ಥೆಗಳು ರೈತರಿಗಾಗಿ ಆರಂಭವಾಗುತ್ತಿದ್ದು ಅವರ ನೆರವಿಗೆ ಯಾವಾಗಲೂ ಸಿದ್ಧವಾಗಿರಬೇಕು ಎಂದು ಕೊಟ್ಟೂರು ಕ್ಷೇತ್ರದ ಮಾಜಿ ಶಾಸಕ ಚಿಕ್ಕಜೋಗಿಹಳ್ಳಿ ಗ್ರಾಮದ ಕೆವಿ ರವೀಂದ್ರನಾಥ ಬಾಬು ಹೇಳಿದರು
ಅವರು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಪ್ರವಾಸಿಮಂದಿರದಲ್ಲಿ ಕೃಷಿ ಇಲಾಖೆ ಹಾಗೂ ಜಲಾನಯನ ಇಲಾಖೆ ಸಹಯೋಗದಲ್ಲಿ ಒಕ್ಕಲು ರೈತ ಉತ್ಪಾದಕರ ಸಂಘ ಕಂಪನಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು ತಾಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಹಾಗೂ ನಾನ ಸವಾಲುಗಳನ್ನು ಪರಿಹರಿಸಲು ಒಕ್ಕಲು ರೈತ ಉತ್ಪಾದಕ ಕೇಂದ್ರಗಳನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು,
ಕೃಷಿ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ ಕೃಷಿ ಉತ್ಪಾದನೆ ಹೆಚ್ಚಿಸುವ ಹಾಗೂ ಮಾರುಕಟ್ಟೆ ಸಾಮರ್ಥ್ಯ ವೃದ್ಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ರಚನೆಯಾಗಿರುವ ರೈತ ಕೃಷಿ ಉತ್ಪಾದಕ ಸಂಸ್ಥೆಗಳ ರಚನೆಯಲ್ಲಿ ಆಯಾ ಇಲಾಖೆಗಳು ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡುತ್ತಿವೆ,ರೈತರು ಶೇರುದಾರರ ಆಗಿ ಸಂಸ್ಥೆಯ ಸದುಪಯೋಗವನ್ನು ಪಡೆದು ಕೊಳ್ಳಿರಿ ಎಂದು ಹೇಳಿದರು.

ಈ ಸಂಸ್ಥೆಯ ಅಧ್ಯಕ್ಷ ಡಿಟಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಕೊಟ್ರೇಶ್, ಗುಡೆಕೋಟೆ ವಲಯದ ರೈತ ಸಂಪರ್ಕ ಕೇಂದ್ರದ ಶ್ರೀಮತಿ ಪುಷ್ಪ ಮತ್ತು ಗೌತಮ್, ಹಾಗೂ ಕಂಪನಿಯ ಜಿಲ್ಲಾ ಸಂಯೋಜಕ ಲಕ್ಷ್ಮಣಶೆಟ್ಟಿ ಹಾಗೂ ಬಸವರಾಜ ಮತ್ತು ಕಾರ್ಯನಿರ್ವಾಹಣ ಅಧಿಕಾರ ಮಾರಪ್ಪ, ಹಾಗೂ ಮುಖಂಡರಾದ ಕುರಿಹಟ್ಟಿ ಬೋಸಯ್ಯ, ಗುರುಲಿಂಗಪ್ಪ, ದ್ಯಾಮಣ್ಣ, ಧನಂಜಯ ಗೌಡ, ಕೃಷ್ಣಪ್ಪ, ಬುಡ್ಡಾರೆಡ್ಡಿ, ಎನ್ ಬೋರಯ್ಯ ಓಂಕಾರ್ ಗೌಡ, ಗಣಿನಾಡು ಪತ್ರಕರ್ತ ಈಶ್ವರಪ್ಪ ಸೇರಿದಂತೆ ಚಿಕ್ಕಜೋಗಿಹಳ್ಳಿ , ಕುರಿಹಟ್ಟಿ, ಓಬಳಶೆಟ್ಟಿಹಳ್ಳ, ಗುಂಡುಮುಣುಗು ಮಡಕಲಕಟ್ಟೆ. ಸಿದ್ದಾಪುರ ಗ್ರಾಮಗಳ ರೈತರು ಸೇರಿದಂತೆ ಕಂಪನಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ರೈತರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು (ಅಂಗಡಿ )

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;