ಚನ್ನಬಸಪ್ಪ ಮೇಕಾಲಿ ವಿರುದ್ಧ ಕ್ರಮ ಕೈಗೊಳ್ಳಿ, ಪ್ಯಾಕೇಜ್ ಟೆಂಡರ್ ಗಳನ್ನು ರದ್ದುಗೊಳಿಸಿ.
ಸಿಂಧನೂರು :ಅ. 25. ಪ್ಯಾಕೇಜ್ ಟೆಂಡರ್‌ಗಳನ್ನು ರದ್ದುಗೊಳಿಸಿ ಕ್ಲಾಸ್ 4, 3, 2ನೇ ವರ್ಗದ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಹಾಗೂ ಮುಖ್ಯಮಂತ್ರಿ ಆದೇಶವಿದ್ದರೂ ಅದನ್ನು ದಿಕ್ಕರಿಸಿ ಅಸಡ್ಡೆ ತನವನ್ನು ತೋರಿಸಿ ಕೆಲವರ ಇಚ್ಛಾಶಕ್ತಿಗೆ ಮಣಿದು ಲೋಕೋಪಯೋಗಿ ಇಲಾಖೆ ರಾಯಚೂರು ಕಾರ್ಯಪಾಲಕ ಎಂಜಿನಿಯರಿಂಗ್ ಚನ್ನಬಸಪ್ಪ ಮೇಕಾಲಿ ಮನ ಬಂದಂತೆ ವರ್ತನೆ ಮಾಡಿ ಅವಮಾನ ವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸಿಂಧನೂರು ತಾಲ್ಲೂಕು ಗುತ್ತಿಗೆದಾರರ ಅಸೋಸಿಯೆಶನ್ ಅಧ್ಯಕ್ಷ ಅಶೋಕ ಕುಮಾರ ಜೆ. ಜೆ. ತಿಳಿಸಿದರು.
ನಗರದ ಪಿಡಬ್ಯೂಡಿ ಕ್ಯಾಂಪಿನ ತಾಲೂಕು ಗುತ್ತಿಗೆದಾರರ ಅಸೋಸಿಯೇಷನ್ ಕಛೇರಿಯಲ್ಲಿ ಸಿಂಧನೂರು ತಾಲೂಕು ಗುತ್ತಿಗೆದಾರರ ಅಸೋಸಿಯೇಷನ್ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ಥಳೀಯ ಗುತ್ತಿಗೆದಾರರನ್ನು ಹೊರಗಿಡುವ ಉದ್ದೇಶದಿಂದಲೇ ಅಗಷ್ಟ 4 ರಂದು ತಾಲ್ಲೂಕಿನ ಕಾಮಗಾರಿಗಳ ಟೆಂಡರ್‌ನ ಸಂಖ್ಯೆ(153447 ) (153450) ಈ ಕಾಮಗಾರಿ ಪ್ಯಾಕೇಜ್ ಟೆಂಡರ್‌ಗಳನ್ನು ಕರೆದಿದ್ದು, ಮತ್ತು ಅಗಷ್ಟ 25 ರಂದು 5 ಕೋಟಿ ವೆಚ್ಚದ ವಿವಿಧ ಹಳ್ಳಿಗಳ ಕಾಮಗಾರಿಯನ್ನು ಒಂದೇ ಪ್ಯಾಕೇಜ್ ಟೆಂಡರ್ ಗಳನ್ನು ಕರೆಯಲಾಗಿತ್ತು.ಅವುಗಳನ್ನು ರದ್ದುಗೊಳಿಸಿ ಎಸ್ಸಿ/ಎಸ್ಟಿ, ಮೀಸಲಾತಿ ಅನುಗುಣವಾಗಿ, ಸಾಮನ್ಯ ಗುತ್ತೆದಾರರಿಗೆ ಟೆಂಡರ್ ದೊರಕಬೇಕು ಎಂದು ಸಿಂಧನೂರು ತಾಲೂಕು ಗುತ್ತಿಗೆದಾರರ ಅಸೋಸಿಯೇಷನ್ ನಿಂದ ಎರಡೂ ಬಾರಿ ಮನವಿ ಪತ್ರ ಸಲ್ಲಿಸಿದರೂ ಸ್ಪಂದಿಸದೇ ಪಿಡಬ್ಲೂಡಿ ಕಾರ್ಯಪಾಲಕ ಎಂಜಿನಿಯರಿಂಗ್ ಚನ್ನಬಸಪ್ಪ ಮೇಕಾಲಿ ಪ್ಯಾಕೇಜ್ ಟೆಂಡರ್‌ನಿಂದ ತಮಗೆ ಹೆಚ್ಚಿನ ಕಮೀಷನ್ ಸಿಗುತ್ತದೆ ಎನ್ನುವ ಕಾರಣಕ್ಕೆ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ.ಗುತ್ತಿಗೆದಾರರ ಕೆಲಸ ಪ್ರಾರಂಭದಿಂದ ಹಿಡಿದು ಎಲ್‌ಓಸಿ ಕೊಡುವವರೆಗೂ ಲಂಚ ಕೊಡಬೇಕು.12% ದುಡ್ಡು ಕೊಟ್ಟರೆ ಮಾತ್ರ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ ಎಂದು ಆರೋಪ ಮಾಡಿದರು.

ಇನ್ನುಳಿದ ಹಲವು ಹಂತದಲ್ಲಿ ಕಮೀಷನ್ ಕೊಟ್ಟು ಕೆಲಸ ಮಾಡಲು ಹೇಗೆ ಸಾಧ್ಯವೆಂದ ಅವರು ಈ ಬಗ್ಗೆ ಚನ್ನಬಸಪ್ಪ ಮೇಕಾಲಿ ಅವರನ್ನು ಕೇಳಿದಾಗ ನೀವು ಏನೂ ಮಾಡಿತ್ತೀರಾ ಮಾಡಿಕೊಳ್ಳಿ ಎಂದು ಬೇಜವಾಬ್ದಾರಿ ಮಾತನಾಡಿದ್ದಾರೆ. ಅವರು ಗುತ್ತಿಗೆದಾರರಿಗೆ ಕೂಡಲೇ ಕ್ಷಮೆ ಕೇಳಬೇಕು ಪ್ಯಾಕೇಜ್ ಟೆಂಡರ್ ಗಳನ್ನು ರದ್ದುಗೊಳಿಸಬೇಕು ಇಲ್ಲದಿದ್ದರೆ ಕಛೇರಿಗೆ ಬೀಗ ಹಾಕಿ ಉಗ್ರವಾದ ಹೋರಾಟ ಮಾಡಲಾಗುವುದು, ಮತ್ತು ಚನ್ನಬಸಪ್ಪ ಮೇಕಾಲಿ ತಾಲೂಕಿಗೆ ಬಂದಾಗ ಘೇರಾವ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ವೀರಭದ್ರಪ್ಪ ಗೋರೆಬಾಳ ಉಪಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಜೆ.ಮಹೇಶ್ ಕುಮಾರ, ಬಿ.ಶಂಬಣ್ಣ ಕಾರ್ಯದರ್ಶಿ,ಅಲ್ಲಂಪ್ರಭು ಪೂಜಾರಿ, ಎಮ್. ಪದ್ಮನಾಯ್ಡು ಖಜಾಂಚಿ, ಸೈಯ್ಯದ್ ಅಬ್ದುಲ್ ರವೂಫ್ ಹನುಮಂತ, ನಾಗಪ್ಪ ಗಿರಿಜಾಲಿ, ಹುಸೇನ್ ಬಾಸ್ ಸಹ ಕಾರ್ಯದರ್ಶಿ , ವೆಂಕಟೇಶ್ ಚಿನ್ನಸ್ವಾಮಿ, ನಿರುಪಾದಿ ಸಾಸಲಮರಿ, ಬಸವರಾಜರೆಡ್ಡಿ ಕನಸಾವಿ ಇತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
