ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಸಭೆ!!
ಕೂಡ್ಲಿಗಿ – ದಿನಾಂಕ 25.08.2022ರ ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಸಭೆಯನ್ನು ಕರೆದ ಕೂಡ್ಲಿಗಿ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ನಡೆಸಿದ ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರು ಹಾಗೂ ಗುಡೇಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಮುರಳಿ ರಾಜ್ ನಾಯಕ್ ರವರು ಸಂಘಟನೆಯ ಮೂಲಕ ನಾವುಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಮತ್ತು ಸದಸ್ಯರು ಪಂಚಾಯಿತಿಗಳಲ್ಲಿ ಧ್ವನಿ ಎತ್ತಿ ತಮ್ಮ ತಮ್ಮ ವಾರ್ಡ್ಗಳಿಗೆ ಸಂಬಂಧಿಸಿದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಹಾಗೂ ವಿಧ್ಯಾವಂತ ಸದಸ್ಯರುಗಳು ಆಯ್ಕೆಯಾಗಿದ್ದಾರೆ ಅದಕ್ಕಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಾವು ಮರೆಯಬಾರದು ಎಂದು ತಿಳಿಸಿದರು, ಹಾಗೆ ಒಕ್ಕೂಟದ ಉಪಾಧ್ಯಕ್ಷ ಚೌಡಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ವೈ. ಮಲ್ಲಿಕಾರ್ಜುನ್ ರವರು ಮಾತನಾಡಿ ಈಗಾಗಲೇ ಪೂಜಾರಹಳ್ಳಿ ಕೆರೆ ಉಳಿವಿಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದೇವೆ ಅದಕ್ಕಾಗಿ ನಮ್ಮ ಹೋರಾಟ ಸತ್ಯಕ್ಕೆ ತಂದ ಜಯವಾಗಿದೆ ಎಂದು ಹೇಳಿದರು, ಮತ್ತು ಮುಖಂಡರಾದ ಅಖಿಲ ಭಾರತ ಕಿಸಾನ್ ಸಬಾ ರಾಜ್ಯ ಉಪಾಧ್ಯಕ್ಷರಾದ ಎಚ್ .ವೀರಣ್ಣನವರು ಮಾತನಾಡಿ.

ದೇಶದ ಸಂವಿಧಾನ ಬದ್ಧವಾಗಿ ನಾವುಗಳು ಕೆಲಸ ನಿರ್ವಹಿಸಬೇಕಿದೆ , ಮೂಲ ರಾಜಕಾರಣಿಗಳು ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಹಳ್ಳಿಗಳಲ್ಲಿ ಗ್ರಂಥಾಲಯಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಎ .ಎನ್.ಎಂ ಆಸ್ಪತ್ರೆ , ಕಾನೂನು ವ್ಯವಸ್ಥೆ ಇವೆಲ್ಲವೂ ಹಳ್ಳಿಗಳಲ್ಲಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಸದಸ್ಯರು ಒಗ್ಗಟ್ಟಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡಿ ಎಂದು ತಿಳಿಸಿದರು.ಈ ಸಭೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ .ರವಿಕುಮಾರ್ ಅವರು ಸರ್ಕಾರಿ ಕೆಲಸದ ನಿಮಿತ್ತ ಹಳ್ಳಿಗಳಿಗೆ ತೆರಳಿದ್ದರು ಹಾಗಾಗಿ ಈ ಸಭೆಗೆ ಗೈರಾಗಿದ್ದರು. ಇದೇ ಸಂದರ್ಭದಲ್ಲಿ ಕ.ರಾ.ಗ್ರಾ.ಪಂ.ಓ ತಾಲೂಕ ಅಧ್ಯಕ್ಷ ಕೆ ಮುರಳಿರಾಜ್ ನಾಯಕ್, ಉಪಾಧ್ಯಕ್ಷ .ವೈ .ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ. ಎಸ್ ವಿಜಯ್ ಕುಮಾರ್ ಕಾನೂನು ಸಲಹೆಗಾರ. ಕರಿಯಪ್ಪ, ಸಿಪಿಐಎಂ. ರಾಜ್ಯ ಉಪಾಧ್ಯಕ್ಷ ಎಚ್. ವಿರಣ್ಣ, ವಿಜಯನಗರ ಜಿಲ್ಲಾ ಸಂಚಾಲಕ. ಹೂಡೇಂ ರಾಘವೇಂದ್ರ, ಶ್ರೀಕಾಂತ, ಕಕ್ಕುಪ್ಪಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಏಕಾಂತಪ್ಪ ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು (ಅಂಗಡಿ )
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
