;

ಕಾನಹೊಸಹಳ್ಳಿ ಪೊಲೀಸ್ ಠಾಣೆ ಎಎಸ್ಐ ಜೀಲಾನ್ ಬಾಷಾ ರವರಿಗೆ ಸ್ವಾಗತ…!!!

ಕಾನಹೊಸಹಳ್ಳಿ ಪೊಲೀಸ್ ಠಾಣೆ ಎಎಸ್ಐ ಜೀಲಾನ್ ಬಾಷಾ ರವರಿಗೆ ಸ್ವಾಗತ

ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಗೆ ಎ ಎಸ್ಐ ಜಿಲಾನ್ ಬಾಷಾ ರವರು ಕರ್ತವ್ಯ ನಿರ್ವಹಿಸಲು ಬಂದಿರುವುದರಿಂದ ಪಿಂಜಾರ ಸಂಘದ ತಾಲೂಕು ಅಧ್ಯಕ್ಷರಾದ ಹಿರೇಕುಂಬಳಗುಂಟೆ ಗ್ರಾಮದ ಡಿಎಚ್ ಕಾಸಿಂಸಾಬ್, ಮತ್ತು ಕುಂಬಳಗುಂಟೆ ಗ್ರಾಮದ ಎ.ಎಂ.ಕಾಶಿಂ ಹಾಲ. ಮತ್ತು ಹಿರೇಕುಂಬಳಗುಂಟೆ ಗ್ರಾಮದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ದಾದಾಪೀರ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಯೂಸೆಫ್, ಸೇರಿದಂತೆ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ತುಂಬರಗುದ್ದಿ ದುರುಗೇಶ. ತಾಲೂಕು ಸಂಚಾಲಕ ಗಂಗಾಧರ .ಟಿ, ಕೆಂಚಮ್ಮನಹಳ್ಳಿ ದುರ್ಗಪ್ಪ ಇವರುಗಳು ಎ.ಎಸ್.ಐ ಜಿಲಾನ್ ಭಾಷಾ ರವರಿಗೆ ಹೂಮಾಲೆ ಹಾಕಿ ಸ್ವಾಗತ ಕೋರಿದರು. ನಂತರ ಎ.ಎಸ್. ಐ ಜಿಲಾನ್ ಭಾಷಾ ರವರು ಮಾತನಾಡಿ ನಾನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತೇನೆ ನಿಮ್ಮಗಳ ಸಹಕಾರ ಅತಿಮುಖ್ಯ. ಪ್ರತಿಯೊಬ್ಬರು ಕಾನೂನು ಚೌಕಟ್ಟಿನ ಅಡಿಯಲ್ಲಿ ನಡೆಯಬೇಕು. ಎಂದು ಸನ್ಮಾನ ಮಾಡಿದ ಇವರುಗಳಿಗೆ ಧನ್ಯವಾದಗಳನ್ನು ಹೇಳಿದರು.

ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;