ನರ ಸತ್ತ ಅಧಿಕಾರಿಗಳು, ಹಾಗೂ ಜವಾಬ್ದಾರಿ ಇಲ್ಲದ ಶಾಸಕರ ಒಂದು ಆಡಳಿತ ವ್ಯವಸ್ಥೆಯಲ್ಲಿ, ಭ್ರಷ್ಟರದ್ದೇ ಹಟ್ಟ ಹಾಸ, ನೋಡಿ ಸ್ನೇಹಿತರೆ ಇಂದು ರಾಜ್ಯದಲ್ಲಿ ಇರುವ ಸರ್ಕಾರ ಮೊನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಾಕಿರುವ ಜಾಹಿರಾತಿನ ಒಂದು ತುಣುಕು ವಿಡಿಯೋಗಳಲ್ಲಿ, ಕೆಲವು ಫೋಟೋ ಮೇಲೆ ಕೆಳಗೆ ಹಾಕಿಸಿ, ದೇಶಕ್ಕಾಗಿ ಪ್ರಾಣವನ್ನು ತ್ಯಾಗಮಾಡಿದ, ಮಹಾತ್ಮ ಗಾಂಧೀಜಿಯವರ ಫೋಟೋ ಕೆಳಗಡೆ ಹಾಕಿದ್ದಾರೆ ಎನ್ನುವ ವಿಷಯ ಈಗಾಗಲೇ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸುದ್ದಿಯಾಗಿ ಹರಿದಾಡುತ್ತಿದೆ.
ಆದರೆ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಕ್ರಮ ಮರಳು ಅಡ್ಡೆಗಳದ್ದೇ ಹಟ್ಟ ಹಾಸ, ಭ್ರಷ್ಟಾಚಾರ ಮಾಡುವವರ ವಿರುದ್ಧ ಹೋರಾಟಗಾರರು ಹಾಗೂ ಪತ್ರಕರ್ತರು ಸುದ್ದಿಗಳನ್ನು ಬಿತ್ತರಿಸಿದರೆ ಕೆಲವು ಪುಡಿ ಪುಂಡರು ಧಮ್ಕಿ ಹಾಕುತ್ತಾರೆ ಎನ್ನುವ ಒಂದು ಬಹು ದೊಡ್ಡ ಕೂಗು ತಾಲೂಕಿನಾದ್ಯoತ ಹರಿದಾಡುತ್ತಿರುವ ಒಂದು ವಿಷಯವನ್ನು ಕೇಳಿದ ನಮ್ಮ ಪತ್ರಿಕಾ ತಂಡ ನೇರವಾಗಿ ಅಡ್ಡೆಗಳ ಒಂದು ಸ್ಥಳಗಳಿಗೆ ಗುಪ್ತವಾಗಿ ಭೇಟಿ ನೀಡಿ ಪ್ರಾಣಭಯವನ್ನು ಬಿಟ್ಟು ಸುದ್ದಿ ಮಾಡುವುದಕ್ಕೆ ಮುಂದಾಗಿದ್ದು ಮಾತ್ರ,
ತುಂಬಾ ವಿಪರ್ಯಾಸ ಎನ್ನುತ್ತಾರೆ ಅಲ್ಲಿನ ಕೆಲವು ಸ್ಥಳೀಯರು, ಇವರ ಅಕ್ರಮ ದಂದೆ ರಾತ್ರಿಯಲ್ಲಿ ತುಂಬಾ ಜೋರು ಅನ್ನುತ್ತಾರೆ ಕೆಲವು ಸ್ಥಳೀಯರು ರಸ್ತೆ ಪಕ್ಕದಲ್ಲಿ ಹೋದಾಡುವುದೇ ದೊಡ್ಡ ಸಾಹಸ ಎನ್ನುತ್ತಾರೆ ಅಲ್ಲಿನ ಕೆಲವು ಸ್ಥಳೀಯರು ಯಾಕೆ ನಮ್ಮ ನಾಡಿನ, ನೆಲ, ಜಲ, ಭೂಮಿಯ ಒಂದು ಸಂಪತ್ತು ಅನ್ನು ಕಾಪಾಡಲು ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಭಯ ಪಡಬೇಕಾ?ಹಾಗೂ ಇಲ್ಲಿನ ಒಂದು ಸುದ್ದಿಯನ್ನು ಬರೀ ಹೋರಾಟಗಾರರು ಬಿಟ್ಟರೆ ಮಾದ್ಯಮದವರು ಇಂದಿಗೂ ಸುದ್ದಿ ಮಾಡಿ ನಮ್ಮ ದೇಶದ ಸಂಪತ್ತನ್ನು ಉಳಿಸಲು ಯಾಕೆ ಮುಂದಾಗುತ್ತಿಲ್ಲ? ಪ್ರಾಣ ಭಯಾನ? ಅಥವಾ ಲಂಚವತಾರನ??? ನೀವೇ ವಿಚಾರ ಮಾಡಿ ಈ ಒಂದು ತಾಲೂಕಿನ ಸರ್ಕಾರಿ ಅಧಿಕಾರಿಗಳಿಗೆ ನಮ್ಮ ರಾಜ್ಯದ ಸಂಪತ್ತನ್ನು ಉಳಿಸಲು ಯೋಗ್ಯತೆ ಇಲ್ವಾ? ಅಥವಾ ರಾಜಕೀಯ ರೌಡಿಗಳ ಭಯಾನ? ನೀವೇ ಉತ್ತರ ಕೊಡಿ ಸಾರ್ವಜನಿಕರೇ ದೇಶದ ಸಂಪತ್ತು ಯಾವೊಬ್ಬ ಸರ್ಕಾರಿ ಅಧಿಕಾರಿಗಳ ಹಾಗೂ ಶಾಸಕರ, ಸಂಸದರ, ಮುಖ್ಯಮಂತ್ರಿಳ!ಸ್ವಂತವಲ್ಲ ಮೊದಲು ಸಾಮಾನ್ಯ ಪ್ರತಿಯೊಬ್ಬ ಭಾರತೀಯರಿಗೂ ಅಧಿಕಾರ ಇದೆ ದಯವಿಟ್ಟು ಭಯ ಪಡಬೇಡಿ, ಒಬ್ಬ ಶಾಸಕ, ಸಂಸದ, ಹಾಗೂ ಮುಖ್ಯಮಂತ್ರಿಗಳು ಇರುವುದು ಬರೀ “ಐದು ವರ್ಷಗಳು ಮಾತ್ರ “ಅವರ ಒಂದು ಅದಿಕಾರದ ಅವಧಿಯಲ್ಲಿ ನಮ್ಮ ನಮ್ಮಲ್ಲೆ ಕಿಚ್ಚು ಹೊತ್ತಿಸಿ ಅವರ ಬೇಳೆಯನ್ನು ಬೇಯಿಸಿಕೊಂಡು ಹೋಗುತ್ತಾರೆ, ಅದೇನೇ ಇರಲಿ ಸ್ನೇಹಿತರೆ ಇಂದು ನಮ್ಮ ದೇಶ ಹಾಗೂ ರಾಜ್ಯದ ರಾಜಕೀಯ ಬರೀ ಕುಟುಂಬ ರಾಜಕೀಯ ಹಾಗೂ ಕಿಚ್ಚು ಹೊತ್ತಿಸಿ, ಸಾರ್ವಜನಿಕರ ಹೊರಟಗಾರನ ಪ್ರಾಣಕ್ಕೆ ಮಾತ್ರ ಸೀಮಿತ. ನೀವೇ ನೋಡಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಸನ್ನಿವೇಶಗಳಲ್ಲಿ ಯಾವೊಬ್ಬ, ಮಂತ್ರಿ ಹಾಗೂ ಅವರ ಸಂಬಧಿಕರು ಸಾವು ನೋವಿಗೆ ಬಲಿಯಾಗಿದ್ದಾರಾ?ವಿಚಾರ ಮಾಡಿ,
ನಾವೇ ದಡ್ಡರು ನಮ್ಮ ದೇಶವನ್ನು ಸ್ವಾತಂತ್ರ್ಯ ಪೂರ್ವಕ್ಕಿಂತ ಮುಂಚಿತವಾಗಿ ಬ್ರಿಟಿಷರು ಆಳ್ವಿಕೆ ಮಾಡಿ ಲೂಟಿ ಮಾಡಿದರೆ, ಇಂದು ನಮ್ಮ ಮತವನ್ನು ಪಡೆದು ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿ ನಾವು ಕಟ್ಟುವ ತೆರಿಗೆಯಲ್ಲಿ ಅವರ ಕುಟುಂಬವನ್ನು ಸಾಕುವ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಮೊದಲು ತಡೆಯಿರಿ. ಬರೀ ಭಾಷಣಕ್ಕೆ ಸೀಮಿತವಾಗಿರು “ಮಾನ್ಯ ಪ್ರಧಾನಿ ಮೋದಿಯವರೇ “ನೀವು ಬರುವ ಸಮಯದಲ್ಲಿ ನಿಮಗೆ ಜೀರೋ ಟ್ರಾಫಿಕ್ ಬೇಕು ಅಲ್ವಾ ನಿಮ್ಮನ್ನು ಅಧಿಕಾರಕ್ಕೆ ತಂದಿರುವ ಜನಸಾಮಾನ್ಯರು ಮಾತ್ರ ದಿನ ಬೆಳಕಾದರೆ ಬರೀ ಟ್ರಾಫಿಕ್ ನಲ್ಲಿ ಜೀವನ ಕಳೆಯಬೇಕು, ಇದನ್ನು ಬಿಟ್ಟರೆ ಉದ್ದುದ್ದ ಭಾಷಣ.
ಈ ಒಂದು ಸುದ್ದಿಯನ್ನು ನಿಮ್ಮ ಟ್ವಿಟ್ಟರ್ ಗೆ ಕಳಿಸುತ್ತೇನೆ ನಿಮಗೆ ನಿಜವಾಗಿಯೂ ದೇಶದ ಮೇಲೆ ಅಭಿಮಾನ ಇದ್ದರೆ ಈ ಒಂದು ಸಮಸ್ಯೆಯನ್ನು ಪರಿಹರಿಸಿ, ಇಲ್ಲ ಅಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಹತ್ತಿರ ಇದೆ ನೋಡಿ, ರಾಜ್ಯದ ಜನತೆಗೆ ಮೋಡಿ ಮಾಡಲು ಯಾವುದಾದರು ಸರ್ಜಿಕಲ್ ಮಾಡಿ ಅದನ್ನು ನೋಡಿ ನಮ್ಮ ದೇಶದ ಜನತೆ ಮೋಸಕ್ಕೆ ಬಲಿಯಾಗಲಿ, ಮಾನ್ಯ ಪ್ರಧಾನಿಯವರೇ ಇಂದು ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಬದುಕು ಬೀದಿ ಪಾಲಾಗಿದೆಹಾಗೂ ದಿನ ಬಳಕೆಯ ವಸ್ತುಗಳನ್ನು ಖರೀದಿಮಾಡಲು ನಮ್ಮ ದೇಶದ ಜನತೆ ಇಂದು ಹರ ಸಾಹಸ ಮಾಡಬೇಕು ಯಾಕೆಂದರೆ ಈ ಇಂದೇ ಎರಡರಿಂದ ಮೂರು ಸಾವಿರ ಕೊಟ್ಟು ಖರೀದಿ ಮಾಡುವ ಸಾರ್ವಜನಿಕರು ಆದೆ ವಸ್ತುಗಳನ್ನು ಖರೀದಿ ಮಾಡಲು ಇoದು ಐದು ಸಾವಿರ ಬೇಕು ಎಂತ ವಿಪರ್ಯಾಸ, ಅಲ್ವಾ ನೋಡೋಣ ದೇವದುರ್ಗ ತಾಲೂಕಿನ ಕೆಲವೊಂದು ಸುದ್ದಿ ಮಾಡಿದರೆ ಪ್ರಾಣಕ್ಕೆ ಆಪತ್ತು ಅಂತೆ ನಾನು ಸುದ್ದಿ ಮಾಡಿದೀನಿ ನನ್ನ ಒಂದು ಸುದ್ದಿಗೆ ಏನೂ ದೊರಕುವುದೋ ನೋಡೋಣ ವೀಕ್ಷಕರೇ… ಜೈ ಹಿಂದ್..
ವರದಿ. ಎಚ್ಚರಿಕೆ ನ್ಯೂಸ್ ಸಂಪಾದಕರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
