ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ನಾಡ ಕಛೇರಿ ಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಚರಿಸಲಾಯಿತು.

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ನಾಡಕಛೇರಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಉಪ ತಹಶೀಲ್ದಾರರು ಜಿ ಚಂದ್ರ ಮೋಹನ್ ಧ್ವಜಾರೋಹಣ ನೆರವೇರಿಸಿ,
ಉಪ ತಹಶೀಲ್ದಾರರು ಜಿ ಚಂದ್ರ ಮೋಹನ್ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದರು
ನಂತರ ನಿವೃತ್ತ ಶಿಕ್ಷಕರಾದ ಕೋಟ್ರಣ್ಣ ಮಾತನಾಡಿ ರಾಷ್ಟ್ರಕ್ಕಾಗಿ,ರಾಷ್ಟ್ರದ ಜನತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಸಿಂಹ ಸದೃಶರ ತ್ಯಾಗ ಬಲಿದಾನಗಳಿಂದ 1947 ಆಗಸ್ಟ್ 14 ರ ಮಧ್ಯರಾತ್ರಿಯೆಂದು ದೇಶ ಸ್ವಾತಂತ್ರ್ಯವನ್ನು ಪಡೆಯಿತು. ಬ್ರಿಟೀಷರಿಂದ ಭಾರತವನ್ನು ಸ್ವಾತಂತ್ರಗೊಳಿಸುವುದಕ್ಕಾಗಿ ಅನೇಕ ಚಳುವಳಿಗಳು ನಡೆದವು.ಆ ನಿಟ್ಟಿನಲ್ಲಿ 1857 ರಲ್ಲಿ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು.ಈ ಸಮರದ ನೇತೃತ್ವವನ್ನು ಝಾನ್ಸಿರಾಣಿ ಲಕ್ಷ್ಮೀಬಾಯಿ,ತಾಂತ್ಯಾಟೋಪಿ,ನಾನಾಸಾಹೇಬ್ ಮೊದಲಾದವರು ವಹಿಸಿದ್ದರು. ಆದರೆ ಈ ಒಂದು ಸಮರಕ್ಕೆ ವ್ಯಾಪಕ ಬೆಂಬಲ ದೊರೆಯದೇ ಸಂಗ್ರಾಮ ವಿಫಲವಾಯಿತು.ಎಂದು ತಿಳಿಸಿದರು .
ಕೆ ಸುಭಾಷ್ ಚಂದ್ರ ಮಾತನಾಡಿ
ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ತ್ಯಾಗ ಬಲಿದಾನಗಳು ಸಂಘರ್ಷಗಳು ಹೋರಾಟಗಳು ನಡೆದಿವೆ ಕೊನೆಯದಾಗಿಅಹಿಂಸೆಯ ಮೂಲಕ ನಮಗೆ ಸ್ವಾತಂತ್ರ್ಯ ದಕ್ಕಿದೆ. ಯುವಜನತೆ ಸ್ವತಂತ್ರ ಹೋರಾಟ ಸಾಮಾಜಿಕ ರಾಜಕೀಯ ನೆಲೆಯಲ್ಲಿ ಇತಿಹಾಸ ಮತ್ತು ನಮ್ಮ ಭವ್ಯ ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಹಿಂದಿನ ಯುವಕರಿಗೆ ಸ್ವತಂತ್ರದ ನಿಜ ಅರ್ಥ ಹೋರಾಟವನ್ನು ನೆನಪಿಸಿಕೊಂಡು ಕೆಲಸಕ್ಕೆ 25ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಗುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ.

ಹರ ಘರ್ ತಿರಂಗಾ ಕಾರ್ಯಕ್ರಮವು ಯುವಕರಲ್ಲಿ ಸ್ವಾಭಿಮಾನ ದೇಶಪ್ರೇಮ ಹೆಚ್ಚುತ್ತದೆ.
ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ ನಮ್ಮ ರಾಷ್ಟ್ರಧ್ವಜವು ತ್ಯಾಗ ಸತ್ಯ ಶಾಂತಿ ಪರಿಶುದ್ಧತೆ ಮತ್ತು ಸಸ್ಯ ಶಾಮ್ ಅಲೆಯಾದ ಭೂಮಿಯ ಸಂಕೇತವಾಗಿದ್ದು ಕೃಷಿಯ ಸಮೃದ್ಧಿಯನ್ನು ಸೂಚಿಸುತ್ತದೆ. ಯಾವುದೇ ಧರ್ಮ ಜಾತಿ ಬಣ್ಣವನ್ನು ಅದು ಒಳಗೊಂಡಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವಿ ಮಹಾದೇವಪ್ಪ, ಕಂದಾಯ ಪರೀವೀಕ್ಷಕರಾದ ಮುರುಳಿಕೃಷ್ಣ .ಗ್ರಾಮಲೆಕ್ಕಾಧಿಕಾರಿಗಳಾದ , ಚನ್ನಬಸಯ್ಯ. ಕುಂಬಾರ್ ಮುರುಗೇಶ್ ,ಶ್ರೀನಿವಾಸ ಕೋಂಡಿ ,ರಾಘವೇಂದ್ರ., ಸಿಬ್ಬಂದಿ ,ಮಂಜುನಾಥ ,ಸಿದ್ದೇಶ್,ರಮೇಶ್. ಮುಖಂಡರಾದ
ವೀರೇಶ್ ಕಿಟ್ಟಪ್ಪನವರ್, , , ಫೋಟೋ ನಾಗರಾಜ ಕುಂಬಾರ್ ಹನುಮಂತಪ್ಪ ,ಹನುಮಂತಪ್ಪ. ಮಾರಪ್ಪ. ನಾಗರಾಜ್. ಸೇರಿದಂತೆ ಹಾಗು ಗ್ರಾಮ ಸಹಾಯಕರುಗಳು ಸೇರಿ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ.ವಿರೇಶ್. ಕೆ. ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
