ಹೊಸಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಸಂಭ್ರಮದ 75ನೇ ಸ್ವಾತಂತ್ರ ದಿನಾಚರಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಂಭ್ರಮದಿಂದ 75ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಸ್ವತಂತ್ರ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ ಮಾತನಾಡಿ ದೇಶದ ಬಗ್ಗೆ ಒಲವು ಅಭಿಮಾನ ಕೇವಲ ಈ ದಿನ ಕಷ್ಟ ಸೀಮಿತವಾಗದೆ ಪ್ರತಿದಿನ ಪ್ರತಿ ಕ್ಷಣ ನಮ್ಮೆಲ್ಲರಿಗೆ ಬೇಕು ಎಂದರು
ಇಂದು ದೇಶದಲ್ಲೆಡೆ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದು 75ನೇ ವರ್ಷದ ಸ್ವತಂತ್ರ ದಿನಾಚರಣೆ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಹರ್ ಘರ್ ತಿರಂಗ ಕಾರ್ಯಕ್ರಮದಡಿ ಮನೆಮನೆಗಳಲ್ಲೂ ಕೂಡ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಕೇವಲ ಕಚೇರಿ ಶಾಲೆ-ಕಾಲೇಜುಗಳು ಸಂಘ-ಸಂಸ್ಥೆಗಳಿಗೆ ಸೀಮಿತವಾಗದೆ ಸ್ವತಂತ್ರ ದಿನಾಚರಣೆಗೆ ಮನೆ ಮನೆಮನೆಗೂ ನಾಗ ಶ್ವಾಘನಾರ್ಹ ವ್ಯಾಪಿಸಿದ್ದು ವಿಚಾರವಾಗಿದೆ ಎಂದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಮತ್ತು ಊರಿನ ಮುಖಂಡರು ಹಿರಿಯರು ವಿದ್ಯಾರ್ಥಿಗಳು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಮತ್ತು ಹೊಸಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಮತ್ತು ವಿಶೇಷವಾಗಿ ಗ್ರಾಮ ಪಂಚಾಯಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು ಊರಿನ ಹಿರಿಯರಿಗೆ.ಹಿರಿಯ ನಾಗರಿಕರಿಗೆ ಮತ್ತು ಊರಿನ ಮುಖಂಡರಿಗೆ.ನಿವೃತ್ತ ಯೋಧರಿಗೆ. ಹಾಗೂ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಯ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನಿಸಲಾಯಿತು.
ಸಾರ್ವಜನಿಕರು ಹೊಸಹಳ್ಳಿ ವ್ಯಾಪ್ತಿಯ ಎಲ್ಲಾ ಶಾಲೆಯ ಸಂಘ-ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾರ್ವಜನಿಕರು ಇತರರು ಸೇರಿ ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
