ಮೊಹರಂ ಹಬ್ಬದ ಪ್ರಯುಕ್ತ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಮೋಹರಂ ಹಬ್ಬದ ಪ್ರಯುಕ್ತ ಪಿಎಸ್ಐ ತಿಮ್ಮಣ್ಣ ಚಾ ಮನೂರು ರವರ ನೇತೃತ್ವದಲ್ಲಿ ಠಾಣಾ ವ್ಯಾಪ್ತಿಗೆ ಬರುವ ಗ್ರಾಮಗಳ ಮುಸ್ಲಿಂ ಸಮಾಜದ ಮುಖಂಡರುಗಳು ಹಾಗೂ ಹಿಂದೂ ಸಮಾಜದ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಪಿಎಸ್ಐ ತಿಮ್ಮಣ್ಣ ಚಾಮನೂರು ರವರು ಮಾತನಾಡಿ ಮೋಹರಂ ಹಬ್ಬವು ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ. ಈ ಹಬ್ಬವನ್ನು ಎಲ್ಲಾ ಧರ್ಮದವರು ಕೂಡಿಕೊಂಡು ಮಾಡುವ ಹಬ್ಬವಾಗಿದೆ, ಈ ಮೊಹರಂ ಹಬ್ಬವನ್ನು ಎಲ್ಲಾ ಸಮಾಜ ಬಾಂಧವರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸ್ನೇಹ ಸೌಹಾರ್ದತೆಯಿಂದ ಆಚರಿಸಿ. ಯಾರಾದರೂ ಕಾನೂನುಬಾಹಿರವಾಗಿ ನಡೆದುಕೊಂಡರೆ ಸಮಾಜಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಅಂತವರಿಗೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು, ಈಗಾಗಲೇ ಕೆಲವು ಗ್ರಾಮಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಮೊಹರಂ ಹಬ್ಬವನ್ನು ನಿಷೇಧಿಸಲಾಗಿದೆ. ಆದ್ದರಿಂದಎಲ್ಲಾ ಸಮಾಜದ ಬಾಂಧವರು ಈ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಒಗ್ಗಟ್ಟಿನಿಂದ ಕಾನೂನು ಚೌಕಟ್ಟಿನಲ್ಲಿ ಆಚರಿಸಿರಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿಮುಖಂಡರಾದ ಬೊಮ್ಮಣ್ಣ ನವರು.ಬಿಜೆಪಿ ಮಂಡಲ ಅಧ್ಯಕ್ಷ ಚನ್ನಪ್ಪ.ಡಿಎಸ್ಎಸ್ ತಾಲೂಕು ಸಂಚಾಲಕ ಹೊಸಹಳ್ಳಿ ಗಂಗಾಧರ.ಗ್ರಾಮ ಪಂಚಾಯಿತಿ ಸದಸ್ಯರಾದಸುರೇಶ್ ಮತ್ತು ಹೊನ್ನೂರು ಸ್ವಾಮಿ.ಜುಮ್ಮೋಬನಹಳ್ಳಿ ಗ್ರಾಮದಕಾಂಗ್ರೆಸ್ ಮುಖಂಡ ಜಿ.ಒಬಣ್ಣ. ಚಿಕ್ಕಜೋಗಿಹಳ್ಳಿ ಗ್ರಾಮದ ಮಹಮ್ಮದ್ ರಫಿ ಸರ್ ಖಲಂದರ್ ಸರ್. ಎಂ.ಎಚ್ ಬಶೀರ್. ಮಹಮ್ಮದ್. ಪೊಲೀಸ್ ಠಾಣೆಯ ಎ. ಎಸ್.ಐ ಗಳಾದ ದುರ್ಗಪ್ಪ ಮತ್ತು ಮಲ್ಲಪ್ಪನವರು ಹಾಗೂ ಸಿಬ್ಬಂದಿ ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಗ್ರಾಮಗಳ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
