ಬಣವಿಕಲ್ಲು ಗ್ರಾಮದಲ್ಲಿ ಇಂದು ದಿನಾಂಕ 5-8-22ರ ಶುಕ್ರವಾರ ನಡೆದ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆಯನ್ನು ಗ್ರಾಮದ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಬಿ.ಎಮ್ ಪ್ರಭುದೇವ ಸರ್ ರವರ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಆರ್ ವೀರಣ್ಣ, ಬಿ.ಎಸ್. ಪೂರ್ಣಿಮಾ ಪ್ರಶಾಂತ್ ಗೌಡ , ಬಿ.ಎಸ್. ನಾಗರತ್ನಮ್ಮ ಶರಣಪ್ಪ ,ಅಲ್ಲಾಭಕ್ಷೀ ಇವರಗಳ ಸಮ್ಮುಖದಲ್ಲಿ ಉದ್ಘಾಟನೆಯನ್ನು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಐಟಿಯು ತಾಲೂಕು ಅಧ್ಯಕ್ಷರಾದ ಕೆ ಕರಿಯಣ್ಣ ತಾಲೂಕು ಖಜಾಂಚಿ ಗುನ್ನಳ್ಳಿ ರಾಘವೇಂದ್ರ, ವಿರೂಪಾಕ್ಷಪ್ಪ ವಕೀಲರು ಕೂಡ್ಲಿಗಿ, ನಬಿ ಕೂಡ್ಲಿಗಿ ಸಹಾಯಕರು ಸಹಕಾರ್ಯದರ್ಶಿಗಳಾದ ಮರಳು ಸಿದ್ದಪ್ಪ ಆಚಾರಿ, ಬಿ. ಸುರೇಶ್ ಉಪಾಧ್ಯಕ್ಷ ಹುಲೆಪ್ಪ, ಸಹ ಕಾರ್ಯದರ್ಶಿ ಕೊಟ್ರೇಶ್ ಎಂ.ಬಿ.ಅಯ್ಯನಹಳ್ಳಿ ಮಹೇಶ್ ಆಚಾರಿ, ಹಡಪದ ಬಸಣ್ಣ ಬಣವಿಕಲ್ಲು ಪ್ರಮುಖರಾದ ಎಸ್, ಚೌಡೇಶ್, ರಾಜಸಾಬ್ ಮತ್ತು ಊರಿನ ಕಟ್ಟಡ ಕಾರ್ಮಿಕರು ಹಾಜರಿದ್ದರು.

ಈ ಕಾರ್ಯಕ್ರಮವನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ ಸುಸಂದರ್ಭ ಸರ್ಕಾರಿ ಶಾಲೆಯ ನಾಲ್ಕನೇ ತರಗತಿಯ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ವಿತರಿಸಿದ ಎಸ್ ಡಿ ಎಂ ಸಿ ರಾಜ್ಯ ಕಾರ್ಯದರ್ಶಿ, ಗುನ್ನಳ್ಳಿ ರಾಘವೇಂದ್ರ ಅವರು ನೀಡಿದರು ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಲಹೆ ಸೂಚನೆಗಳನ್ನು ಅನುಸರಿಸಿ ಮಾತನಾಡಿದ ವಿರುಪಾಕ್ಷಪ್ಪ ವಕೀಲರು ಕಟ್ಟಡ ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮತ್ತು ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ತಿಳಿಸಿದರು,

ಮತ್ತು ಗ್ರಾಮದ ನಿವೃತ್ತ ಶಿಕ್ಷಕರಾದ ಬಿ.ಎಮ್ ಪ್ರಭುದೇವ ಸರ್ ರವರು ಮಾತನಾಡಿ ಕಟ್ಟಡ ಕಾರ್ಮಿಕರು ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜೊತೆಗೆ ಪ್ರತಿ ಮೂರು ವರ್ಷಕ್ಕೊಮ್ಮೆ ನಿಮ್ಮ ಕಾರ್ಡ್ಗಳನ್ನು ರಿನಿವಲ್ ಮಾಡಿಸಿಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನಿಮ್ಮ ಜೀವನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್ ವೀರಣ್ಣನವರು ಮಾತನಾಡಿ ಹೋರಾಟದ ಮೂಲಕ ನಿಮ್ಮ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗಬೇಕು ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಒತ್ತುಕೊಟ್ಟು ವಿದ್ಯಾವಂತರನ್ನಾಗಿ ಮಾಡಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ನಿಜವಾದ ಕಾರ್ಮಿಕರಿಗೆ ಸಿಗುವಂತಾಗಲಿ ಎಂದು ಆಶಿಸಿದರು , ಪ್ರಮುಖರಾದ ಬಿ.ಎಸ್ ಪ್ರಶಾಂತ್ ಗೌಡ್ರು ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಸಲಹೆ ಸೂಚನೆಗಳನ್ನು ನೀಡಿ ಉತ್ತಮ ರೀತಿಯಲ್ಲಿ ಬಳಸಿಕೊಂಡು ನಿಮ್ಮ ಜೀವನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು ಗ್ರಾಮದ ವಕೀಲರಾದ ಬಿ.ಎಸ್ ಕೊಟ್ರಗೌಡ ರವರು ಮಾತನಾಡಿ ಅನೇಕ ಸೌಲಭ್ಯಗಳು ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುತ್ತಿರುವ ಹಿನ್ನೆಲೆಯಲ್ಲಿ ಈ ದಿನ ನಮ್ಮ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಂಘವನ್ನು ಸ್ಥಾಪಿಸಿರುವುದು ಸಂತೋಷಕರ ವಿಷಯ ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು..
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
