3 ಕೋಟಿ 60 ಲಕ್ಷ ರೂ.ಗಳ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ಚಾಲನೆ…!!!

3 ಕೋಟಿ 60 ಲಕ್ಷ ರೂ.ಗಳ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಸನಗೌಡ ಚಾಲನೆ.

ಸಿಂಧನೂರ : ಜುಲೈ 21 ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ರಿಂದ 3 ಕೋಟಿ 60 ಲಕ್ಷ ರೂ. ಗಳ ವೆಚ್ಚ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದರು.

ಮಸ್ಕಿ ತಾಲ್ಲೂಕಿನ ತುರ್ವಿಹಾಳ ಪಟ್ಟಣದಿಂದ ಮೈಲಾಪುರ ರಸ್ತೆಯ 5.ಕೀಲೊ ಮೀಟರ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಶಾಸಕ ಆರ್ ಬಸನಗೌಡ ತುರ್ವಿಹಾಳ ಭೂಮಿ ಪೂಜೆ ಮಾಡಿ ಗುತ್ತಿಗೆದಾರರು ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿಯ ಮಾಡಬೇಕು ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಈ ರಸ್ತೆಯು ಜನರ ಬಹುದಿನಗಳ ಬೇಡಿಕೆಯಾಗಿತ್ತು ರಸ್ತೆ ಇಲ್ಲದ ಕಾರಣ ರಸ್ತೆಯಲ್ಲಿ ಬರುವ ಕ್ಯಾಂಪುಗಳ ಸಾರ್ವಜನಿಕರು ತೊಂದರೆ ಯಾಗಿತ್ತು. ಮಳೆಗಾಲದಲ್ಲಿ ಜನ ಈ ರಸ್ತೆಯಲ್ಲಿ ತಿರುಗಾಡಲು ನರಕಯಾತನೆ ಅನುಭವಿಸುತ್ತಿದ್ದರು. ಸರ್ಕಾರದ ಮೇಲೆ ಒತ್ತಡ ಹಾಕಿ 6 ಕೋಟಿ 60 ಲಕ್ಷ ಹಣ ಮಂಜೂರು ಮಾಡಿಸಿಕೊಂಡು ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲನಗೌಡ ದೇವರಮನಿ, ಪಾರುಖುಸಾಬ , ಗೂಳಪ್ಪ ಕುಂಟೊಜಿ, ಶಾಮೀದಸಾಬ, ಉಮರಸಾಬ, ಬಾಪುಗೌಡ, ಶಂಕರ ಗೌಡ,ಯಲ್ಲಪ್ಪ ಭೋವಿ, ಅಬುಸಾಬ, ಮಹಾಂತೇಶ ಸಜ್ಜನ , ಅಬಿಗೌಡ , ಮರಿಸ್ವಾಮಿ , ನೀರಾವರಿ ಇಲಾಖೆಯ ಎಇಇ ಹನುಮಂತಪ್ಪ ಉಮಲೂಟಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend