ಬರ್ಬರವಾಗಿ ಹತ್ಯೆಗೈದು ಯುವತಿಯ ರುಂಡದೊಂದಿಗೆ, ಠಾಣೆಗೆ ಆಗಮಿಸಿದ ಪಾಪಿ ಪಾಗಲ್ ಪ್ರೇಮಿ…!!!

ಕೂಡ್ಲಿಗಿ :ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಾಹೊಸಹಳ್ಳಿ ಹೋಬಳಿಗೆ ಸೇರಿದ ಕನ್ನಬೋರಯ್ಯನ ಹಟ್ಟಿಯಲ್ಲಿ .ಇಂದು ನಡೆದ ಘಟನೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಇಲ್ಲೊಬ್ಬ ಪಾಪಿ ಪಾಗಲ್ ಪ್ರೇಮಿ,ಭೋಜರಾಜ (26)ಯುವತಿ ನಿರ್ಮಲಾ (23)ಈಕೆಯ ರುಂಡ ಚಂಡಾಡಿದ ಪಾಗಲ್ ಕ್ರೂರ ಪ್ರೇಮಿಯಾಗಿದ್ದಾನೆ.ಮೂರು ವರ್ಷದಿಂದ ಪರಸ್ಪರ ಇಬ್ಬರು ಪ್ರೀತಿಸುತಿದ್ದರು ಎಂದು ಹಲವು ಮೂಲಗಳಿಂದ ತಿಳಿದುಬಂದಿದ್ದು ಮದುವೆಗೆ ಯುವತಿ ಮನೆಯಲ್ಲಿ ಒಪ್ಪಿಗೆ ಕೊಟ್ಟಿಲ್ಲ ಆದರೂ ಸಹಿತ ಬೇರೆ ಯುವತಿಯೊಂದಿಗೆ ಯುವಕ  ಮೂರು ತಿಂಗಳ ಹಿಂದೆ ಬೇರೆ ಮದುವೆ ಆಗಿದ್ದಾನೆಂದು ಮೂಲ ಮಾಹಿತಿಗಳಿಂದ ತಿಳಿದು ಬಂದಿದೆ.

ಹಾಗೂ  ಯುವತಿ ಬಿಎಸ್ಸಿ  ನರ್ಸಿಂಗ್ ಮೂರನೇ ವರ್ಷದ ಕೊರ್ಸನ್ನು ಓದುತ್ತಿದ್ದಳು ಇದು ಕೂನೆಯ ವರ್ಷದ ವಿದ್ಯಾಭ್ಯಾಸ ಆಗಿತ್ತು ಮತ್ತು ಯುವತಿ ಕಾಲೆಜಿಗೆ ರಜೆಯನ್ನು ಹಾಕಿಕೊಂಡು ಸುಮಾರು ಮೂರ್ನಾಲ್ಕು ದಿನಗಳ ಹಿಂದೆ, ವಿಶ್ರಾಂತಿಗೆಂದು ಊರಿಗೆ ಬಂದಿದ್ದಳು, ಮನೆಯಲ್ಲಿ ಯಾರು ಇಲ್ಲದಸಮಯ ನೋಡಿ ಕಾದಿದ್ದ ಮೂರ್ಖ, ಕ್ರೂರಿ ಪಾಗಲ್ ಪ್ರೇಮಿ. ಮಚ್ಚಿನಿಂದ ರುಂಡವನ್ನು ಕತ್ತರಿಸಿ ಬೈಕ್ ಸೈಡ್ ಬ್ಯಾಗ್ ನಲ್ಲಿ ಇಟ್ಟುಕೊಂಡು ನೇರವಾಗಿ. ಹೊಸಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪಿ ಎಸ್. ಐ.ಚಾಮನೂರ್ ತಿಮ್ಮಣ್ಣ . ಮತ್ತು  ಕ್ರೈಮ್ ಪಿ ಎಸ್ ಐ. ನಾಗರತ್ನಮ್ಮ ನವರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆಗೆಂದು  ಗ್ರಾಮದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಾಸಿಕೊಂಡು ತನಿಖೆ ಕೈಗೂಡಿದ್ದರೆಂದು.ಹೊಸಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ತನಿಖಾ ಮೂಲಗಳಿಂದ ತಿಳಿದು ಬಂದಿದೆ.

ವರದಿ.ಬಸಪ್ಪ, ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend