;

ದೇವರಗುಡಿ ಗ್ರಾ.ಪ.ಅಧ್ಯಕ್ಷರಾಗಿ ಅವಿರೋಧವಾಗಿ ಬಸವರಾಜ ಬಾವಿ ಆಯ್ಕೆ…!!!

ದೇವರಗುಡಿ ಗ್ರಾ.ಪ.ಅಧ್ಯಕ್ಷರಾಗಿ ಅವಿರೋಧವಾಗಿ ಬಸವರಾಜ ಬಾವಿ ಆಯ್ಕೆ.

ಸಿಂಧನೂರು ಜುಲೈ 16 : ದೇವರಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ನ ಬೆಂಬಲಿತ ಅಭ್ಯರ್ಥಿ ಎರಡನೇಯ ಅವದಿಗೆ ಬಸವರಾಜ ಬಾವಿ ತಂದೆ ಪಂಪಣ್ಣ ಬಾವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಮರಗುಂಡಪ್ಪ ಅಧಿಕೃತವಾಗಿ ಘೋಷಣೆ ಮಾಡಿದರು.

ತಾಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರಾಗಿದ್ದ ಲಿಂಗಪ್ಪ ತಂದೆ ಹೊಸಗೇರಪ್ಪ 4 ಜೂನ್ 2022 ರಂದು ಸಹಾಯಕ ಆಯುಕ್ತರಿಗೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆಯನ್ನು ದಿನಾಂಕ 16 ಜುಲೈ 2022 ರಂದು ನಿಗದಿಪಡಿಸಲಾಗಿತ್ತು. ನಾಮಪತ್ರ ಸ್ವೀಕರಿಸುವ ಸಮಯ 10:00 ಗಂಟೆಯಿಂದ 11-00 ಗಂಟೆಯವರೆಗೆ , ನಾಮಪತ್ರ ಪರಿಶೀಲನೆ ಮಧ್ಯಾನ್ಹ 01:10 ರಿಂದ 01:20 ರವರೆಗೆ , ನಾಮಪತ್ರ ಹಿತೆಗೆದುಕೊಳ್ಳುವ ಸಮಯ ಮಧ್ಯಾನ್ಹ 01:20 ರಿಂದ 01:30 ರವರೆಗೆ, ಗುಪ್ತ ಮತದಾನ ಮಧ್ಯಾಹ್ನ : 1-30 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಗೊತ್ತುಪಡಿಸಲಾಗಿತ್ತು, ಬಸವರಾಜ ಬಾವಿ ಅವರ ನಾಮಪತ್ರ ಹೊರತು ಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಬಸವರಾಜ ಬಾವಿ ತಂದೆ ಪಂಪಣ್ಣ ಬಾವಿ ಅವರನ್ನು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಪ್ರಕಟಿಸಿದರು.

ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಸವರಾಜ ಬಾವಿ ಅವಿರೋಧವಾಗಿ ಆಯ್ಕೆಯಾದ ಇವರನ್ನು ಗ್ರಾಮ ಪಂಚಾಯತ್ ಸದಸ್ಯರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. ಗ್ರಾಮ ಪಂಚಾಯಿತಿ ಸಾಮನ್ಯ ಮೀಸಲಾತಿ ಇದ್ದು ಒಟ್ಟು 15 ಸದಸ್ಯರನ್ನು ಹೊಂದಿದ್ದ ಪಂಚಾಯಿತಿಯಾಗಿದೆ.

ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮೀಣ ಠಾಣೆ ಸಿಬ್ಬಂದಿಗಳೊಂದಿಗೆ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಹೊಸಪೇಟೆ, ಲಿಂಗಣ್ಣ ದೇವರಗುಡಿ, ಪವಿತ್ರಾ, ಪದ್ಮಾಂಜಲಿ, ರಾಮಣ್ಣ, ಮಲ್ಲಪ್ಪ, ಜಯರಾಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ, ಅಕೌಂಟೆಂಟ್ ಚನ್ನಪ್ಪ ಇನ್ನಿತರ ಸಿಬ್ಬಂದಿಗಳು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;