;

ಮುಕ್ಕುಂದ ನದಿಯಲ್ಲಿ ಗುಡಿ ಪೂಜಾರಿ ಕಾಣೆ ಅಗ್ನಿಶಾಮಕ ದಳದಿಂದ ಶೋಧ ಕಾರ್ಯಾಚರಣೆ…!!!

ಮುಕ್ಕುಂದ ನದಿಯಲ್ಲಿ ಗುಡಿ ಪೂಜಾರಿ ಕಾಣೆ ಅಗ್ನಿಶಾಮಕ ದಳದಿಂದ ಶೋಧ ಕಾರ್ಯಾಚರಣೆ.

ಸಿಂಧನೂರ : ಜುಲೈ 15 ನದಿಯಲ್ಲಿ ಸ್ನಾನ ಮಾಡಲು ಹೋದ ದೇವರ ಗುಡಿಯ ಪೂಜಾರಿ ಕಾಣೆಯಾಗಿದ್ದು ಕಂದಾಯ, ಪೋಲೀಸ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಪೂಜಾರಿಯ ಪತ್ತೆಗಾಗಿ ನದಿಯಲ್ಲಿ ಶೋಧ ನಡೆಸುತ್ತಿದ್ದಾರೆ.

ತಾಲ್ಲೂಕಿನ ಮುಕುಂದಾ ಗ್ರಾಮದ ನದಿಯ ದಡದಲ್ಲಿ ಕರಿವಿರೇಶ್ವರ ದೇವಸ್ಥಾನದ ಪೂಜಾರಿ ನಿಂಗಪ್ಪ ತಂದೆ ಹನುಮಂತಪ್ಪ ವಯಸ್ಸು 50 ದಿನ ನಿತ್ಯದಂತೆ ಬೆಳಗ್ಗೆ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದು ಈಗ ನಾಪತ್ತೆ ಯಾಗಿದ್ದು ಈ ಸುದ್ದಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ವಿಷಯ ತಿಳಿದು ತಹಶೀಲ್ದಾರ ಅರುಣ್.ಹೆಚ್. ದೇಸಾಯಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ ಕಾಂಬಳೆ, ಪಿಎಸ್ಐ ಯರಿಯಪ್ಪ ಹಾಗೂ ಅಗ್ನಿಶಾಮಕ ಅಧಿಕಾರಿಗಳು ನದಿಯ ಹತ್ತಿರ ಪೂಜಾರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇಲ್ಲಿತನಕ ಪೂಜಾರ ಬಗ್ಗೆ ಮಾಹಿತಿ ದೊರೆತಿಲ್ಲ ಎನ್ನಲಾಗಿದೆ.

ಮುಕ್ಕುಂದಾ ಗ್ರಾಮದ ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಖಾಜಾಹುಸೇನ್,ಖಾಜಾಪೀರ್, ಮೋಹಿನ್, ೪ ಜನರನ್ನು ಅಗ್ನಿಶಾಮಕ ಸಿಬ್ಬಂದಿಗಳು ಕರೆತರಲಾಯಿತು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;