ಬಸವಣ್ಣನವರಿಗೆ ನಂಬಿಕೆಯ ವ್ಯಕ್ತಿ ಹಡಪದ ಅಪ್ಪಣ್ಣ – ಅರುಣ್ ಹೆಚ್.ದೇಸಾಯಿ
ಸಿಂಧನೂರ. ಜುಲೈ 13. ಬಸವಣ್ಣ ಜೊತೆ ಇರುವಾಗ ತಾಮ್ರದ ಚೀಲ ಇಡಿದು ತಿರುಗಾಡಿದ ಫಲವಾಗಿ ಹಡಪದ ಎಂಬ ಪದ ಬಳಕೆಗೆ ಬಂದಿದೆ ಎನ್ನಲಾಗುತ್ತಿದೆ. ಬಸವಣ್ಣ ನವರಿಗೆ ನಂಬಿಕೆಯ ವ್ಯಕ್ತಿ ಹಡಪದ ಅಪ್ಪಣ್ಣನವರಾಗಿದ್ದರು ಎಂದು ಅರುಣ್ ಹೆಚ್. ದೇಸಾಯಿ ಹೇಳಿದರು.
ನಗರದ ತಹಸೀಲ್ದಾರ ಕಚೇರಿಯಲ್ಲಿ ತಾಲುಕಾಡಳಿತ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಅವರು ಬರಿ ಜಯಂತಿ ಮಾಡದೆ ಹಡಪದ ಅಪ್ಪಣ್ಣನವರ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜಯಂತಿ ಮಾಡಿದ್ದಕ್ಕೆ ಅರ್ಥ ಬರುತ್ತದೆ ಇಲ್ಲದಿದ್ದರೆ ಕಾಟಾಚಾರದ ಜಯಂತಿಯಾಗುತ್ತದೆ ಎಂದರು.

ನಂತರ ಮಾತನಾಡಿದ ವೀರಭದ್ರಪ್ಪ ಕುರಕುಂದಿ 12 ನೇ ಶತಮಾನ ಬಹಳ ಅಭೂತ ಪೂರ್ವ ಯುಗ ವಾಗಿದ್ದು, ತುಳಿತಕ್ಕೆ ಒಳಗಾದ ಕೆಳ ಸಮಾಜದ ಜನರನ್ನು ಮೇಲಕ್ಕೆ ಎತ್ತಿ ಎಲ್ಲರಿಗೂ ಸಮಾನತೆ ನೀಡಿದ ಕಾಯಕಯೋಗಿ ಬಸವಣ್ಣ ತನ್ನ ಅಪ್ತ ಕಾರ್ಯದರ್ಶಿಯನ್ನಾಗಿ ಕೆಳ ಸಮಾಜದವರನ್ನು ನೇಮಕ ಮಾಡಿಕೊಂಡಿದ್ದರು.
ಜಿಡ್ಡುಗಟ್ಟಿದ ಯಾರನ್ನು ಮುಟ್ಟಿಸಿಕೊಳ್ಳದ ಸಮಾಜದ ಜನರಿಗೆ ಬಸವಣ್ಣ ಸಮಾನತೆಯ ಸ್ವಾತಂತ್ರ್ಯವನ್ನು 900 ವರ್ಷಗಳ ಹಿಂದೆ ಕೊಟ್ಟಿದ್ದರು. ಆದರೆ ಬಿಗಿಯಾದ ಕಾನೂನುಗಳು ಜಾರಿಗೆ ಬಂದರು ಸಹ ಇನ್ನೂ ಸಮಾಜದಲ್ಲಿ ಸಮಾನತೆ ಬಾರದೆ ಇರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ಜಯಂತಿ ಕಾರ್ಯಕ್ರಮದ ನಂತರ ಕೋರ್ಟ್ ಹಿಂದುಗಡೆ ಇರುವ ನೀರಿನ ಟ್ಯಾಂಕ ಹತ್ತಿರ ಹಡಪದ ಅಪ್ಪಣ್ಣ ವೃತ್ತದಲ್ಲಿ ನೂತನ ನಾಮ ಫಲಕವನ್ನು ವಿವಿಧ ಪಕ್ಷಗಳ ಮುಖಂಡರು ಉದ್ಘಾಟಿಸಿದ ನಂತರ ಪ್ರಮುಖ ಬೀದಿಗಳ ಮೂಲಕ ಬಸವ ಕೇಂದ್ರದವರೆಗೆ ಬಾಜಾ ಭಜಂತ್ರಿಯೊಂದಿಗೆ, ಜಿಟಿ,ಜಿಟಿ ಮಳೆಯನ್ನೇ ಲೆಕ್ಕಿಸದೆ ಸಡಗರ ಸಂಭ್ರಮದಿಂದ ಮೆರವಣಿಗೆ ಮಾಡಿದರು. ಹಗಲು ವೇಷ ಕಲಾವಿದರ ನೃತ್ಯ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಪಂಪನಗೌಡ ಬಾದರ್ಲಿ, ಎಂ.ದೊಡ್ಡ ಬಸವರಾಜ, ಶಿವನಗೌಡ ಗೋರೆಬಾಳ, ಮದ್ವರಾಜ ಆಚಾರ, ಖಾಜಿಮಲ್ಲಿಕ, ಮುನಿರಪಾಷ, ಅಭಿಷೇಕ ನಾಡಗೌಡ, ಪೂಜಪ್ಪ ಪೂಜಾರ, ಹಡಪದ ಅಪ್ಪಣ್ಣ ಸಮಾಜ ಮುಖಂಡರಾದ ಅಮರೇಶ ಕಾನಿಹಾಳ, ಮರಿಯಪ್ಪ, ಸಿದ್ಧು, ಈರಣ್ಣ, ಆಲ್ಲೂರ ಕಾಶಣ್ಣ, ಬೀಮಣ್ಣ, ಬಿ.ಮುದುಕಪ್ಪ, ಸುರೇಶ ಗೊಬ್ಬರಕಲ್ ನಿಜಗುಣ ಪ್ರಕಾಶ, ವಿರೇಶ, ಆಸೀಪ್, ಮಲ್ಲಿಕಾರ್ಜುನ, ಜಿ.ನಿರುಪಾದೆಪ್ಪ ಜೊಳದ ರಾಶಿ ಸೇರಿದಂತೆ ಇತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
