;

ಜುಲೈ 19 ರಿಂದ ಅನಿರ್ದಿಷ್ಟ ಧರಣಿ ಭಾಗವಾಗಿ ಪ್ರಚಾರದ ಪೂರ್ವಭಾವಿ ಸಭೆ…!!!

ಜುಲೈ 19 ರಿಂದ ಅನಿರ್ದಿಷ್ಟ ಧರಣಿ ಭಾಗವಾಗಿ ಪ್ರಚಾರದ ಪೂರ್ವಭಾವಿ ಸಭೆ.

ಸಿಂಧನೂರು : ಜುಲೈ 14. ಕರ್ನಾಟಕ ರೈತ ಸಂಘ (ಕೆ. ಆರ್. ಎಸ್)ತಾಲೂಕು ಸಮಿತಿ ನೇತೃತ್ವದಲ್ಲಿ ಸಿಂಧನೂರು ತಹಶೀಲ್ದಾರ್ ಕಾರ್ಯಾಲಯದ ಮುಂದೆ ಜುಲೈ 19 ರಿಂದ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದ್ದು ಸಿಂಧನೂರು ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಚಾರ ಮಾಡುವುದರ ಮೂಲಕ ಹಿರೇಬೆರಗಿ, ಚಿಕ್ಕಬೆರಗಿ, ಹಂಚಿನಾಳಕ್ಯಾಂಪ್, ಉಪ್ಪಳ, ವೆಂಕಟೇಶ್ವರ ಕ್ಯಾಂಪ್, ಬೆಳಗುರ್ಕಿ, ಉದ್ಭಾಳ, ಬೂದಿಹಾಳ ಕ್ಯಾಪ್,ಅಮರಾಪೂರು,ವಿರಾಪುರು, ಮತ್ತು ಮಸ್ಕಿ ವಿಧಾನಸಭಾ ಕ್ಷೆತ್ರದ ಭೋಗಾಪುರ, ಗುಂಡ, ಬೊಮ್ಮನಾಳ, ರತ್ನಾಪುರಹಟ್ಟಿ,ವಗರನಾಳ, ಗಂಟೆರಟ್ಟಿ, ಗೊರ್ಲೊಟಿಯಲ್ಲಿ ಜನರನ್ನು ತಯಾರಿ ಗೊಳಿಸಲು ಕರ್ನಾಟಕ ರೈತ ಸಂಘ (ಕೆ.ಆರ್.ಎಸ್ ) ಪೂರ್ವಭಾವಿ ಪ್ರಚಾರ ಸಭೆ ಮಾಡಲಾಯಿತು.

ಈ ಪ್ರಚಾರ ಸಭೆಯಲ್ಲಿ ರಾಜ್ಯಾಕ್ಷರಾದ ಡಿ. ಎಚ್. ಪೂಜಾರ, ಜಿಲ್ಲಾ ಕಾರ್ಯದರ್ಶಿ ಬಿ. ಎನ್. ಯರದಿಹಾಳ, ತಾಲೂಕಾಧ್ಯಕ್ಷ ರಮೇಶ ಪಾಟೀಲ ಬೆರಗಿ, ಉಪಾಧ್ಯಕ್ಷ ಚಿಟ್ಟಿಬಾಬು ನೇತೃತ್ವದಲ್ಲಿ ನಡೆಸಲಾಯಿತು.

ಕಂದಾಯ ಸಚಿವ ಆರ್. ಅಶೋಕ ಸರಕಾರಿ ಜಮೀನನ್ನು ಸಾಗುವಳಿ ಮಾಡುವ ಭೂ ಹೀನ ಬಡ ರೈತರಿಗೆ ಭೂ ಮಂಜೂರಾತಿ ಕೊಡುವುದಿಲ್ಲ. ‌ ಸರ್ಕಾರಕ್ಕೆ ಗುತ್ತಿಗೆ ರೂಪದಲ್ಲಿ ಹಣ ಕೊಡಲು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸೂಚನೆ (ಅಶೋಕ್) ಕೊಟ್ಟಿದ್ದಾರೆ. ಜನವಿರೋದಿ ಹೇಳಿಕೆಯನ್ನು ಜನರ ಮುಂದೆ ಹೇಳಲಾಯಿತು.

ಮಸ್ಕಿ ಹಾಗೂ ಸಿಂಧನೂರು ಶಾಸಕರುಗಳು, ಈ ಭೂ ಗುತ್ತಿಗೆ ಕಾಯ್ದೆ ತಿದ್ದುಪಡಿಗೆ ವಿರೋಧ ಮಾಡಲು ಜನರು ಒತ್ತಾಯಿಸಲು ಹೇಳಲಾಯಿತು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ಪ್ರಶ್ನೆ ಮಾಡಲು, ಭ್ರಷ್ಟಾಚಾರ, ದುರಾಡಳಿತದ ಬಗ್ಗೆ ತಿಳಿಸಲಾಯಿತು. ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತೇವೆ ಎಂದು ಜನರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುತ್ತಣ್ಣ ನಾಯಕ್, ಯಮನೂರಪ್ಪ ರತ್ನಪೂರ ಹಟ್ಟಿ, ಚತ್ರಗೌಡ, ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;