;

ಬೀದಿ ನಾಯಿಗಳ ದಾಳಿಗೆ ಮೂರು ಕುರಿ ಸಾವು…!!!

ಬೀದಿ ನಾಯಿಗಳ ದಾಳಿಗೆ ಮೂರು ಕುರಿ ಸಾವು

ಕೂಡ್ಲಿಗಿ ಪಟ್ಟಣದ 14ನೇ ವಾರ್ಡ್ ಕೆಇಬಿ ಆಫೀಸ್ ಹತ್ತಿರ ಕಣ ಒಂದರಲ್ಲಿ ನಾಲಕ್ಕು ಕುರಿಗಳನ್ನು ಕಟ್ಟಿ ಹಾಕಿ ಮಹಿಳೆ ಕಳೆ ತೆಗಿಯಲು ಹೋಗಿದ್ದ ವೇಳೆಯಲ್ಲಿ ಆರು, ಏಳು ನಾಯಿಗಳ ದಾಳಿಯಿಂದ 3 ಕುರಿಗಳು ಬಲಿಯಾಗಿವೆ. 1 ಕುರಿ ಗಾಯಗೊಂಡಿವೆ. ಪಟ್ಟಣದ 14ನೇ ವಾರ್ಡ್‌ಗೆ ಸೇರಿದ ರೈತ ಮಹಿಳೆ ಲಕ್ಷ್ಮಿ ಗಂಡ ಓಬಳೇಶ್ ಎಂಬುವವರಿಗೆ ಸೇರಿದ ಕುರಿಗಳು ನಾಯಿಗಳ ದಾಳಿಯಿಂದ ಮೃತಪಟ್ಟಿವೆ. ಕುರಿಗಳನ್ನು ಕಟ್ಟಿ ಹಾಕಿದ್ದ ವೇಳೆ ನಾಯಿಗಳು ದಾಳಿ ನಡೆಸಿವೆ. ಕುರಿಗಳ ಚೀರಾಟ ಕೇಳಿ ಓಡಿ ಬಂದ ಸ್ಥಳೀಯರು ಬಂದು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರೊಳಗೆ 3 ಕುರಿಗಳು ಮೃತಪಟ್ಟವು. ಉಳಿದ 1 ಕುರಿಗೆ ಗಾಯವಾಗಿದೆ. ಸ್ಥಳಕ್ಕೆ ಪಟ್ಟಣ ಪಂಚಾಯತಿ ಅಧಿಕಾರಿ ಗೀತಾ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನೂ ಇದೇ ವೇಳೆ ರೈತ ಮಹಿಳೆ ಲಕ್ಷ್ಮಮ್ಮ ಮಾತನಾಡಿ ಧರ್ಮಸ್ಥಳ ಸಂಘದಿಂದ ಹಣ ಎತ್ಕೊಂಡು ಕುರಿಗಳನ್ನು ನಾನು ತೆಗೆದುಕೊಂಡು ಜೀವನ ನಡೆಸುತ್ತಿದ್ದೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವ ಜತೆಗೆ, ಕುರಿಗಳ ಸಾವಿನಿಂದ ಹಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;