ವಿದ್ಯಾರ್ಥಿಗಳಿಂದ ಹೆಚ್ಚುವರಿ ಬಸ್ಸು ಓಡಿಸುವುದಕ್ಕೆ ಮನವಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೂಡ್ಲಿಗಿ ಪಟ್ಟಣಕ್ಕೆ ಬರುವುದೇ ಜಾಸ್ತಿ ಆಗಾಗಿ ಇಲ್ಲಿನ ಸಾರಿಗೆ ವ್ಯವಸ್ಥೆ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಓಡಿಸುವಂತೆ ಹಲವು ಬಾರಿ ಮನವಿಮಾಡಿದರು ಸಾರಿಗೆ ಘಟಕದ ವ್ಯವಸ್ಥಾಪಕರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಸುತ್ತಮುತ್ತಲಿನ ಹಳ್ಳಿಗಳಾದ ,ಚೋರನೂರು ಸೋವೇನಹಳ್ಳಿ, ಬೊಮ್ಮಘಟ್ಟ ,ತುಂಬರಗುದ್ದಿ ಗ್ರಾಮಗಳ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ತೊಂದರೆಯಾಗುತ್ತಿದ್ದು ಒಂದೇ ಬಸ್ಸಿನಲ್ಲಿ 100 ಜನರನ್ನು ತುಂಬಿಕೊಂಡು ಹೊಗುತ್ತಾರೆ ಇದರಿಂದ ಬಹಳಷ್ಟು ತೊಂದರೆ ಆಗುತ್ತದೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ಕೂಡಲೇ ಸಂಬಂಧಪಟ್ಟ ಕೂಡ್ಲಿಗಿ ಘಟಕದ ಸಾರಿಗೆ ವ್ಯವಸ್ಥಾಪಕರು ಹೆಚ್ಚುವರಿ ಬಸ್ಸು ಬಿಡುವುದಕ್ಕೆ ಗಮನ ಹರಿಸಿಬೇಕು ಎಂದು ವಿದ್ಯಾರ್ಥಿಗಳು ವ್ಯವಸ್ಥಾಪಕರಿಗೆ ಮನವಿ ಮಾಡಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
