;

ಕಾಡು ಗೊಲ್ಲರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಾವೇಶ,…!!!

ಕಾಡು ಗೊಲ್ಲರ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಾವೇಶ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಇಂದು ದಿನಾಂಕ 10-7-22 ಭಾನುವಾರದಂದು ಇಲ್ಲಿನ ಕೂಡ್ಲಿಗಿ ಪಟ್ಟಣದ  ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ಕಾಡು ಗೊಲ್ಲರ ತಾಲೂಕು ಮತ್ತು ಜಿಲ್ಲಾ ಸಂಘ ರಚನೆಯಾಯಿತು, ಈ ಕಾರ್ಯಕ್ರಮವನ್ನು ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ದೀಪ ಹಚ್ಚುವ ಮೂಲಕ ಅದ್ದೂರಿಯಾಗಿ ನೆರವೇರಿಸಿ ಮಾತನಾಡಿದ ಶಾಸಕರು ನಮ್ಮ ತಾಲೂಕಿನ  ಕಾಡು ಗೊಲ್ಲರು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬಂದಾಗ ಮಾತ್ರ ಜನ್ಮ ಸಾರ್ಥಕ ಗೊಳಿಸುತ್ತದೆ ಹಾಗೂ ತಾಲೂಕಿನ ಎಲ್ಲಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಸಮುದಾಯ ಭವನಗಳ ಮಂಜೂರು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿ, ಮೂಢನಂಬಿಕೆ ಮತ್ತು ಇವುಗಳನ್ನೆಲ್ಲ ದೂರ ಮಾಡಿ ಉತ್ತಮ ಸಮಾಜವನ್ನು ನಿರ್ಮಿಸಿ ಎಂದು ನೆರೆದಿದ್ದ ಸಾವಿರಾರು ಕಾಡು ಗೊಲ್ಲರ ಸಮಾಜದ ಬಂಧುಗಳಿಗೆ ತಿಳಿಸಿದರು.ಇನ್ನು ಈ ಸಮಾವೇಶವನ್ನು ಉದ್ದೇಶಿಸಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಸಕಲಪುರದ ಹಟ್ಟಿಯ ಸಣ್ಣಬಾಲಪ್ಪ ರವರು ಮಾತನಾಡಿ ನಮ್ಮ ಕಾಡು ಗೊಲ್ಲರು ತಮ್ಮ ಕುಲಕಸುಬಾದ ಕುರಿ ಮತ್ತು ಮೇಕೆ ದನಕರುಗಳನ್ನು ತಮ್ಮ ತಲೆಮಾರಿನ ಹಿರಿಯರು ಮಾಡುತ್ತಿದ್ದ ಕೆಲಸವನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ, ಆದರೆ ಪ್ರಸ್ತುತ ಸಮಾಜದಲ್ಲಿ ನಾವು ಕೂಡ ರಾಜಕೀಯ ಮತ್ತು ಶೈಕ್ಷಣಿಕ ದೃಷ್ಟಿಯಿಂದಲೂ ನಾವು ಈ ಕಾಡು ಗೊಲ್ಲರ ಸಂಘಟನೆ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ,ಅದಕ್ಕಾಗಿ ಸಮಾಜ ಬಾಂಧವರು ಜಾಗೃತಿ ಯಾಗಬೇಕು ಎಂದು ಹೇಳಿದರು, ಇನ್ನು ಉದ್ಘಾಟನಾ ಭಾಷಣವನ್ನು ನೆರವೇರಿಸಿದ ಕಾಡುಗೊಲ್ಲ ಸಮಾಜದ ಹಿರಿಯರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರು ಶ್ರೀ ಗೋಣಿಬಸಪ್ಪ ಸರ್ ರವರು ಮಾತನಾಡಿ ಸ್ವಾಗತ ಭಾಷಣವನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ (ರಿ). ಬೆಂಗಳೂರು ರಾಜ್ಯಾಧ್ಯಕ್ಷರಾದ ಕೆ ರಾಜಣ್ಣ ರವರು ಮಾತನಾಡಿ ನಮ್ಮ ಸಮಾಜ ಬಾಂಧವರು ಇಡೀ ರಾಜ್ಯದಲ್ಲಿ ನಮ್ಮ ಸಮಾಜ ಸಂಘಟನೆಯಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಂಡು ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು ಇನ್ನು ತಾಲೂಕಿನ ಕಾಡು ಗೊಲ್ಲ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕಿನ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಪ್ರತಿಭಾ ಪುರಸ್ಕಾರ ಪಡೆದ ಕಾಡುಗೊಲ್ಲ ಸಮಾಜದ ವಿದ್ಯಾರ್ಥಿಗಳು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..

 

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;