ಅಧಿಕಾರ ಇಲ್ಲದಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸುವ ಜನ ನಾಯಕ – ಸಿದ್ದರಾಮೇಶ್ವರ ಶರಣರು.
ಸಿಂಧನೂರು : ಜುಲೈ 10. ಅಧಿಕಾರ ಇಲ್ಲದಿದ್ದರು ಜನರ ಕಷ್ಟಗಳಿಗೆ ಸ್ಪಂದಿಸುವ ಜನ ನಾಯಕ ಕೆ.ಕರಿಯಪ್ಪನವರು, ಅದು ಬಡ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸುವುದು ಒಳ್ಳೆಯ ಕಾರ್ಯ ಎಂದು ಶ್ರೀ ಸಿದ್ದರಾಮೇಶ್ವರ ಶರಣರು ಮಾತನಾಡಿದರು.

ತಾಲೂಕಿನ ಗಾಂಧಿನಗರದ ಶಿವಾಲಯ ಕಲ್ಯಾಣ ಮಂಟಪದಲ್ಲಿ ದಿ.ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ (ರಿ ) ಸುಕಾಲಪೇಟ ಸಿಂಧನೂರು ವತಿಯಿಂದ ಎಸ್.ಎಸ್.ಎಲ್.ಸಿ ಪಿಯುಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ದಿ.ಕೆ.ನಾಗಪ್ಪ ರವರ ಕುಟುಂಬ ನಮ್ಮ ತಂದೆ ಕಾಲದಿಂದಲೂ ಅವರಿಗೂ ನಮಗೂ ಬಹಳ ಭಾಂದವ್ಯವಿದೆ, ಅವರು ಒಳ್ಳೆಯ ಸಂಸ್ಕಾರವಂತರು ಹಿರಿಯರನ್ನು ಗೌರವದಿಂದ ನೋಡಿಕೊಳ್ಳುವ ಕುಟುಂಬ. ತಂದೆಯ ಹಾದಿಯಲ್ಲಿಯೇ ಸರಳತೆ ನಿಷ್ಟತೆಯಿಂದ ಕೂಡಿದ ವ್ಯಕ್ತಿಯಾಗಿದ್ದಾರೆ ಎಂದರು.
ಕೆಲವು ರಾಜಕೀಯ ಮುಖಂಡರುಗಳು ಮತದಾನದ ಹಕ್ಕು ಬಂದವರಿಗೆ ಸಹಾಯ ಸಹಕಾರ ಮಾಡುತ್ತಾರೆ, ಯಾಕೆಂದರೆ ಅವರು ಮುಂದೊಂದು ದಿನ ನಮಗೆ ಮತದಾನ ಮಾಡುತ್ತಾರೆ ಎನ್ನುವ ವಿಶ್ವಾಸಕ್ಕೆ ಆದರೆ ಕೆ.ಕರಿಯಪ್ಪ ರವರು ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಮಾಡಿರುವದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ಲೀಡರ್ ಯಾರು ಬೇಕಾದರೂ ಆಗಬಹುದು,ಆದರೆ ಲೀಡರನ ಬೆಳಸುವ ಗುಣ ಕೆಲವೊಬ್ಬರಿಗೆ ಮಾತ್ರ ಇರೋದು. ಅದು ಕೆ.ಕರಿಯಪ್ಪನವರಿಗಿದೆ. ಮುಂದೊಂದು ದಿನ ಅಧಿಕಾರ ಇವರಿಗೆ ಸಿಗಲಿ ಎಂದು ಶ್ರೀಗಳು ಆಶೀರ್ವವಚನ ನೀಡಿದರು.

ನಿರುಪಾದೆಪ್ಪ ಗುಡಿಹಾಳ ಮಾತನಾಡಿ, ದಾನ ಧರ್ಮದ ಪ್ರತಿರೂಪ ದಿ. ಕೆ. ನಾಗಪ್ಪ ರವರ ಮನೆತನ ಹೃದಯ ಶ್ರೀಮಂತಿಕೆಯಿಂದ ಕೂಡಿದೆ. ಕೆ ಕರಿಯಪ್ಪ ಅವರು ಸಾಮಾಜಿಕ ಸಮಸ್ಯೆಗಳನ್ನು ನೀವಾರಿಸಲು ಇಂಥ ಕಾರ್ಯಕ್ರಮಗಳನ್ನು ಮಾಡುತ್ತಾ ಜನ ಮೆಚ್ಚುಗೆ ಗಳಿಸಿದ್ದಾರೆ. ಇವರ ಬದುಕು ಶ್ರೀಮಂತಿಕೆಯಿಂದ ಕೂಡಿರಲಿ ಎಂದು ಸ್ವಾಮಿಜಿಗಳು,ಜನರು ಆಶೀರ್ವಾದ ಮಾಡಲಿ ಎಂದರು.
ಬಡವರ ದಿನದಲಿತರ ಶೋಷಿತರ ಸಮುದಾಯದ ಬೆನ್ನೆಲುಭಾಗಿ ನಿಂತಿದ್ದ ಕುಟುಂಬ ಎಂದರೆ ಅದು ಕೊಂತನೂರು ಕುಟುಂಬ ಒಬ್ಬ ವ್ಯಕ್ತಿ ಗೆಲ್ಲಬೇಕೆಂದರೆ ಹೃದಯ ಶ್ರೀಮಂತಿಕೆಯಿಂದ ಗೆಲ್ಲಬೇಕೆ ವಿನಃ ದೌರ್ಜನ್ಯದಿಂದ ಅಲ್ಲಾ.ಇಂಥಹ ಗುಣ ಹಾಲುಮತದಲ್ಲಿ ಜನಿಸಿದ ಕೆ.ಕರಿಯಪ್ಪ ರವರಿಗೆ ಇದೆ ಮುಂದೊಂದು ದಿನ ರಾಜಕಾರಣದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲಿ ವೆಂಕೋಬ ನಾಯಕ ಹೇಳಿದರು .

ರಾಜಕೀಯ ಉದ್ದೇಶದಿಂದ ಕಾರ್ಯಕ್ರಮ ಮಾಡುತ್ತಿಲ್ಲ, ರಾಜಕೀಯ ಬರುತ್ತೆ, ಹೋಗುತ್ತೆ ನಾವು ಮಾಡಿರುವ ಒಳ್ಳೆಯ ಕೆಲಸಗಳು ಮಾತ್ರ ಜೀವಂತವಾಗಿರುತ್ತವೆ. ನಮ್ಮ ಕುಟುಂಬ ಅಧಿಕಾರ ಅನುಭವಿಸಿದೆ, ನಾನು ಕೂಡ ಒಂದು ಬಾರಿ ಸೋತಿದ್ದೀನೆ ಆದರೂ ನನ್ನ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೊರಟಿದ್ದೇನೆ.ಸ್ವಾಮೀಜಿಗಳ, ಹಿರಿಯರ ಆಶೀರ್ವಾದ ನನ್ನ ಮೇಲೆ ಇರಲಿ ಮುದೊಂದ ದಿನ ಅಧಿಕಾರ ಸಿಕ್ಕರೆ ನಿಮ್ಮಗಳ ಸೇವೆ ಮಾಡಲು ಸದಾಸಿದ್ದ.ಈ ಒಂದು ಕಾರ್ಯಕ್ರಮದಲ್ಲಿ ಸನ್ಮಾನಿತರರಾಗಿ ಬಂದಂಥ ವಿದ್ಯಾರ್ಥಿಗಳು ಒಳ್ಳೆಯ ವಿಧ್ಯಾಭ್ಯಾಸ ಪಡೆದು ಉನ್ನತ ಮಟ್ಟದಲ್ಲಿ ಬೆಳೆದು ತಾಲೂಕಿನ ಹೆಸರು ತರುವಂತಾಗಲಿ ಎಂದು ಪ್ರಾಸ್ತಾವಿಕ ನುಡಿಗಳನ್ನು ಕೆ. ಕರಿಯಪ್ಪ ಹಂಚಿಕೊಂಡರು.
ಗಾಂಧಿನಗರದ ಸರಕಾರಿ ಶಾಲೆಗೆ ಉಚಿತವಾಗಿ ಭೂಮಿ ನೀಡಿದ ಶ್ರೀನಿವಾಸ್ ರವರಿಗೆ ಸನ್ಮಾನಿಸಿ ಗೌರವಿಸಿದರು.ಬೀರಪ್ಪ ಸಂಭೋಜಿ ಸಂಚಾಲಕರು ಪ್ರತಿಭಾ ಪುರಸ್ಕಾರ ಸಮಿತಿ ನಿರೂಪಣೆ ಮಾಡಿದರು.
ದಿವ್ಯಸಾನಿಧ್ಯವನ್ನು ಶ್ರೀ ಮಾದಯ್ಯ ಗುರುವಿನ ಅಮೋಘ ಸಿದ್ದೇಶ್ವರಮಠ ತುರುವಿಹಾಳ್, ನಂಜುಂಡಯ್ಯ ಗುರುವಿನ ನಂಜುಂಡೇಶ್ವರಮಠ ಸುಕಾಲಪೇಟ,ವಹಿಸಿದ್ದರು.

ಈ ಸಂದರ್ಭದಲ್ಲಿ ದುರುಗಪ್ಪ ನಾಯಕ್, ಜಿ.ರಾಯಪ್ಪ, ರಾಮಚಂದ್ರಪ್ಪ, ಹೊನ್ನಮ್ಮ, ಹನುಮಮ್ಮ,ಕುಮಾರ, ಈರಣ್ಣ ಕುರಿ, ಶಾರದಾ, ಎಂ.ಭಾಸ್ಕರ,ಮುರುಳಿಕೃಷ್ಣ,ಸೂರ್ಯಚಂದ್ರರಾವ್, ಭಾಸ್ಕರ್ ರಾವ್ ಶೇಷ್ಟಿ, ಕೆ. ಗಣಪತಿ, ಗೋಪಿ ನೀಡಿ ಕೃಷ್ಣ, ಮುಳ್ಳುಪುಡಿ ರಾಮರಾವ್, ಯಂಕಪ್ಪ ಹಿರೆಕುರುಬರ, ಕರೋಟೋರಿ ರಾಮಕೃಷ್ಣ,ವಿರೀಶ್ ಶ್ರೀನಿವಾಸ್, ರಾಜು ಅಡವಿಭಾವಿ, ಹಸೆನಪ್ಪ ಸೋಲಂಗಿ, ಮುತ್ತು ಬರ್ಸಿ, ನಿರೂಪಾದಿ, ಕೆ ಎಮ್ ಎಸ್. ಗ್ರೂಪ್ ಹಾಗೂ ದಿ.ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ (ರಿ ) ಸುಕಾಲ ಪೇಟೆ ಸರ್ವ ಸದಸ್ಯರು ಸೇರಿದಂತೆ ಇತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
